ರೆಪೋ ದರ ಯಥಾಸ್ಥಿತಿ ಕಾಯ್ದುಕೊಂಡ RBI

ನವದೆಹಲಿ

    ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ಬಡ್ಡಿ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತ. ಮೊನ್ನೆಯಿಂದ ನಡೆದ ಎಂಪಿಸಿ ಸಭೆಯಲ್ಲಿ ವಿವಿಧ ಸಂಗತಿಗಳ ಚರ್ಚೆ ನಡೆದಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾತನಾಡುತ್ತಾ, ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುತ್ತಿರುವುದನ್ನು ತಿಳಿಸಿದರು. ಎಂಪಿಸಿ ಸಭೆಯಲ್ಲಿ ಆರು ಸದಸ್ಯರಲ್ಲಿ ನಾಲ್ವರು ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದರು ಎಂದು ಹೇಳಿದರು.

   ಜಿಡಿಪಿ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿರುವುದರಿಂದ ಈಗ ಹಣದುಬ್ಬರವನ್ನು ಶೇ. 4ಕ್ಕೆ ತರುವ ನಿಟ್ಟಿನಲ್ಲಿ ಗಮನ ಹರಿಸುವುದು ಮುಖ್ಯ. ಹೀಗಾಗಿ, ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದ್ದಾಗಿ ಶಕ್ತಿಕಾಂತ್ ದಾಸ್ ತಿಳಿಸಿದರು. ರಿವರ್ಸ್ ರಿಪೋ ದರವನ್ನೂ ಶೇ. 3.35ರಲ್ಲಿ ಮುಂದುವರಿಸಲಾಗಿದೆ. ಇಲ್ಲಿ ರಿಪೋ ದರ ಎಂದರೆ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಫಂಡ್​ಗೆ ನೀಡಬೇಕಾದ ಬಡ್ಡಿದರವಾಗಿದೆ. ರಿವರ್ಸ್ ರಿಪೋ ಎಂಬುದು ಬ್ಯಾಂಕುಗಳು ಆರ್​ಬಿಐನಲ್ಲಿ ಇಡುವ ಠೇವಣಿಗೆ ಸಿಗುವ ಬಡ್ಡಿದರವಾಗಿದೆ.

   ಎಂಎಸ್​ಎಫ್ ಮತ್ತು ಎಸ್​ಡಿಎಫ್ ದರಗಳೂ ಕೂಡ ಕ್ರಮವಾಗಿ ಶೇ. 6.75 ಮತ್ತು ಶೇ. 6.25ರಲ್ಲಿ ಮುಂದುವರಿಯುವುದಾಗಿ ಆರ್​ಬಿಐ ಗವರ್ನರ್ ಮಾಹಿತಿ ನೀಡಿದರು. ಹಾಗೆಯೇ, ಹಣದುಬ್ಬರ ನಿಯಂತ್ರಣಕ್ಕೆ ಬಹಳ ಮುಖ್ಯವಾಗಿರುವ ವಿತ್​ಡ್ರಾಯಲ್ ಆಫ್ ಅಕಾಮೊಡೇಶನ್ ಎಂಬ ನೀತಿಯನ್ನೂ ಮುಂದುವರಿಸಲು ಎಂಪಿಸಿ ಸಭೆ ನಿರ್ಧರಿಸಿದೆ.ಈ ಬಾರಿಯ ಹಣಕಾಸು ವರ್ಷದಲ್ಲಿ (2024-25) ರಿಯಲ್ ಜಿಡಿಪಿ ದರ ಶೇ. 7.2ರಷ್ಟಿರಬಹುದು ಎಂದು ಆರ್​ಬಿಐ ಗವರ್ನರ್ ಹೇಳಿದರು. ಈ ವರ್ಷದ ನಾಲ್ಕು ಕ್ವಾರ್ಟರ್​ಗಳಲ್ಲಿ ಮೂರನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.3ರಷ್ಟಿರಬಹುದು. ಉಳಿದ ಮೂರು ಕ್ವಾರ್ಟರ್​​ಗಳಲ್ಲಿ ಶೇ. 7.2ರಷ್ಟು ಬೆಳವಣಿಗೆ ಆಗಬಹುದು ಎಂದು ಎಂಪಿಸಿ ಸಭೆಯಲ್ಲಿ ಅಂದಾಜು ಮಾಡಲಾಗಿದ್ದನ್ನು ಅವರು ತಿಳಿಸಿದರು. 

ಮುಂದಿನ ಸಭೆಗೆ ಎಂಪಿಸಿ ಸದಸ್ಯರ ಬದಲಾವಣೆ

   ಆರ್​ಬಿಐ ಗವರ್ನರ್ ನೇತೃತ್ವದಲ್ಲಿ ಹಣಕಾಸು ನೀತಿ ಸಮಿತಿಯಲ್ಲಿ ಆರ್ವರು ಸದಸ್ಯರಿರುತ್ತಾರೆ. ಇದರಲ್ಲಿ ಮೂವರು ಆರ್​ಬಿಐನ ಅಧಿಕಾರ ಬಳಗದವರಾಗಿರುತ್ತಾರೆ. ಇನ್ನುಳಿದ ಮೂವರು ಸದಸ್ಯರು ಹೊರಗಿನವರಾಗಿರುತ್ತಾರೆ. ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಮೂವರು ಬಾಹ್ಯ ಸದಸ್ಯರನ್ನು ಸರ್ಕಾರ ಎಂಪಿಸಿಗೆ ನೇಮಕ ಮಾಡುತ್ತದೆ. ಆರ್​ಬಿಐನ ನೀತಿಗಳಲ್ಲಿ ಸಮತೋಲನ ತರಲು ಈ ವಿಧಾನ ಅನುಸರಿಸಲಾಗುತ್ತದೆ.

Recent Articles

spot_img

Related Stories

Share via
Copy link