ಗುಬ್ಬಿ :
ತಾಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ ಎನ್ ಎಚ್ 206 ರಸ್ತೆಯಿಂದ ಅಡಗೂರು,ಪ್ರಭುವನಹಳ್ಳಿ, ದೂಳನಹಳ್ಳಿ ಪಾಳ್ಯ ಹಾಗೂ ಸಿ ಎಸ್ ಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನಿರ್ಮಾಣ ಮಾಡಲು ಸಾರ್ವಜನಿಕರು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಅವರಿಗೆ ಮನವಿ ಯನ್ನು ಮಾಡಿದರು.
ಇದಕ್ಕೆ ಸ್ಪಂದನೆ ನೀಡಿದ ಅವರು ಇಲ್ಲಿ ಕೆಳ ಸೇತುವೆ ಮಾಡಲು 40 ರಿಂದ 50 ಕೋಟಿ ಅನುದಾನ ಬೇಕಾಗಿದ್ದು ಖಂಡಿತ ಈ ಭಾಗದ ಜನರಿಗೆ ಮಾಡಲು ಯೋಜನೆ ರೂಪಿಸಲಾಗುತ್ತದೆ ಈ ಭಾಗಕ್ಕೆ ಬೇಕಾದಂತಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತದೆ ನಾನು ಸಚಿವನಾದ ನಂತರ ಸಾಕಷ್ಟು ಯೋಜನೆಗಳನ್ನು ಮಾಡುತ್ತಿದ್ದು ಖಂಡಿತವಾಗಿ ತುಮಕೂರನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ನಿತ್ಯ 40 ಕ್ಕೂ ಹೆಚ್ಚು ರೈಲುಗಳು ಹೋಗುವುದು ಬರುವುದು ಈ ರೈಲ್ವೆ ರಸ್ತೆಯಲ್ಲಿ ಇರುವುದರಿಂದ ಪದೇ ಪದೇ ಗೇಟ್ ಹಾಕುವುದರಿಂದ ಸಾರ್ವಜನಿಕರಿಗೆ ರೈತರಿಗೆ ತೊಂದರೆಯಾಗುತ್ತಿದ್ದು ಈ ಭಾಗದಲ್ಲಿ ಅತ್ಯಂತ ಅಪಘಾತಗಳು ಪ್ರತಿನಿತ್ಯ ನಡೆಯುತ್ತಲೆ ಇದ್ದು ಆತಂಕದಲ್ಲಿಯೇ ಪಾದಚಾರಿಗಳು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಇಲ್ಲಿಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಆಶಯವಾಗಿತ್ತು ಇಂದು ಸಚಿವರೇ ಖುದ್ದು ಭೇಟಿ ನೀಡಿ ಈ ಕಾಮಗಾರಿಯನ್ನು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಮುಖ ರಸ್ತೆಯಿಂದ ಕಳ್ಳಿಪಾಳ್ಯ ರಸ್ತೆ ಭಾಗದಲ್ಲಿ ಹತ್ತಾರು ಹಳ್ಳಿಗಳು ಈ ಭಾಗದಲ್ಲಿ ಬರುತ್ತಿದ್ದು ರಾತ್ರಿಯ ವೇಳೆ ಅತ್ಯಂತ ಹೆಚ್ಚು ಅಪಘಾತಗಳು ಸಂಭವಿಸುತ್ತಿತ್ತು ರಸ್ತೆ ನಿರ್ಮಾಣ ಮಾಡುವ ಹಂತದಲ್ಲೇ ಇಲ್ಲಿಮೇಲ್ಸೇತುವೆ ನಿರ್ಮಾಣ ಆಗಬೇಕಿತ್ತು ಅನಿವಾರ್ಯ ಕಾರಣದಿಂದ ಮಾಡಿರಲಿಲ್ಲ ಸೋಮಣ್ಣನವರೇ ಮಾಡುತ್ತೇವೆ ಎಂದು ಭರವಸೆಯನ್ನ ನೀಡಿರುವ ಹಿನ್ನೆಲೆಯಲ್ಲಿ ನಮಗೆ ಸಂತೋಷ ತಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಯೋಗಾನಂದ, ಗ್ರಾ. ಪಂ ಅಧ್ಯಕ್ಷ ನಾರಾಯಣ ಸ್ವಾಮಿ, ಸತ್ಯನಾರಯಣ, ಕೇಬಲ್ ರಾಜು ಚಂದ್ರಶೇಖರ ಬಾಬು, ಎನ್ ಸಿ ಪ್ರಕಾಶ್, ದಯಾನಂದ ಅರುಣ್ ಕುಮಾರ್, ಕರೆತಿಮ್ಮಯ್ಯ, ಚನ್ನಬಸವೇ ಗೌಡ ಸೇರಿದಂತೆ ಇನ್ನಿತರರು ಇದ್ದರು.








