ವಿವಿಯ ಕಾರ್ಯಕ್ರಮಕ್ಕೆ ಅಜಿತ್ ಹನುಮಕ್ಕನವರ್ : ಆಹ್ವಾನ ರದ್ದತ್ತಿಗೆ ಆಗ್ರಹ

ತುಮಕೂರು

     ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದ ವಿಭಾಗದಲ್ಲಿ 20 ಜುಲೈ 2023 ರಂದು ಆಯೋಜಿಸಲಾಗಿರುವ ರಾಜ್ಯಮಟ್ಟದ ಕಾರ್ಯಕ್ರಮದ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಸುದ್ದಿವಾಹಿನಿಯೊಂದರಲ್ಲಿ ನಿರೂಪಕರಾಗಿರುವ ಅಜಿತ್ ಹನುಮಕ್ಕನವರ್ ರವರಿಗೆ ನೀಡಿರುವ ಆಹ್ವಾನವನ್ನು ರದ್ದುಪಡಿಸಬೇಕೆಂದು ಜಾಗೃತಯುವ ಕ್ರಾಂತಿ ಪಡೆ ಸಂಘಟನೆ ವತಿಯಿಂದ ಕುಲ ಸಚಿವರಿಗೆ ಮನವಿ ಸಲ್ಲಿಸಲಾಯಿತು.

     ತುಮಕೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಆರಂಭದಿಂದಲೂ ತನ್ನದೇ ಆದ ಜಾತ್ಯತೀತ ಪರಂಪರೆ ಹಾಗೂ ಜ್ಞಾನದ ಕೇಂದ್ರವಾಗಿ ಬೆಳೆದು ಬಂದಿದೆ. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಜ್ಯಾತ್ಯತೀತ ಮತ್ತು ಜ್ಞಾನದ ಪರಂಪರೆಯನ್ನು ಗಾಳಿಗೆ ತೂರಿ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯಮಟ್ಟದ ಮಾಧ್ಯಮ ಹಬ್ಬ ಹಾಗೂ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನ ಕುರಿತು ಉಪನ್ಯಾಸ ನೀಡಲು ಹನುಮಕ್ಕನವರ್ ರವರನ್ನು ಆಹ್ವಾನಿಸಿರುವುದು ಖಂಡನೀಯ.

    ಹಲವಾರು ವರ್ಷಗಳಿಂದ ತಮ್ಮದೇ ಸುದ್ದಿ ವಾಹಿನಿಯಲ್ಲಿ ಕೋಮು ವಿಷ ಬೀಜ ಬಿತ್ತುವುದರ ಮೂಲಕ ಕೋಮುಚರ್ಚೆಗಳನ್ನು ಹುಟ್ಟು ಹಾಕುತ್ತಾ. ಸಮಾಜದಲ್ಲಿನ ಯುವ ಸಮುದಾಯ ಹಾಗೂ ಜನಸಾಮಾನ್ಯರ ಹಾದಿ ತಪ್ಪಿಸಿ ಮತೀಯ ಗಲಭೆ ಸೃಷ್ಟಿ ಮಾಡುವ ಸಮಾಜದ ವಿಭಜಕ ವ್ಯಕ್ತಿಯಿಂದ ಇಂದು ವಿವಿಯ ಪತ್ರಿಕೋದ್ಯಮ ಹಾಗೂ ಸಂಹವಹನ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ…? ಎಂಬುದು ತಿಳಿಯದಂತತಾಗಿದೆ. ಸಾರ್ವಜನಾಂಗದ ಶಾಂತಿಯ ತೋಟದಂತಿರುವ ವಿವಿಯಲ್ಲಿ ಕೋಮು ವಿಷಬೀಜ ಬಿತ್ತಲು ಆಹ್ವಾನಿಸುತ್ತಿದ್ದಾರೆಯೇ..? ಎಂದು ಭಾಸವಾಗುತ್ತಿದೆ. ಇಂತಹ ಸಮಾಜಲ್ಲಿ ಅಶಾಂತಿ ಉಂಟುಮಾಡುವ ಅಜಿತ್ ಹನುಮಕ್ಕನವರ್ ರವರಿಗೆ ನೀಡಿರುವ ಆಹ್ವಾವನ್ನು ಕೂಡಲೇ ರದ್ದುಪಡಿಸಬೇಕೆಂದು ವಿಶ್ವವಿದ್ಯಾನಿಲಯದ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು.

     ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ಪ್ರಸಾದ್ ಆರ್ ಕೋಟೆಮನೆ.ರಾಜ್ಯ ಕಾರ್ಯದರ್ಶಿ ಸಿದ್ದು ಬಿ ಎಸ್ ಸೂರನಹಳ್ಳಿ. ಸಂಚಾಲಕರು ದೇವರಾಜ್ ಕೆ. ಸದಸ್ಯರು ಮಂಜುನಾಥ್, ಶಿವು, ಲೋಕೇಶ್, ಲಿಖಿತ್ ಹಾಗೂ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap