ಕೊರಟಗೆರೆ
ಸರ್ಕಾರದ ಮಹತ್ವದ ಯೋಜನೆಯಲ್ಲೊಂದಾದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ವಿತರಣೆಯಾಗುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಲ್ಲಿಕೆಯಾಗುವ ಕಮಿಷನ್ ಕಳೆದ 4 ತಿಂಗಳಗಳಿಂದ ವಿತರಣೆಯಾಗಿಲ್ಲ, ಕಳೆದ ಒಂದುವರೆ ವರ್ಷಗಳ ಹಿಂದೆ ಮಾಡಲಾದ ಇಕೆವೈಸಿ ಹಣ ಸಹ ಈವರೆಗೂ ಬಿಡುಗಡೆಗೊಂಡಿಲ್ಲ ದಯಮಾಡಿ ತ್ವರಿತವಾಗಿ ಹಣ ಬಿಡುಗಡೆಗೊಳಿಸಿಕೊಳ್ಳಬೇಕು ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಕೊರಟಗೆರೆ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘ ಒತ್ತಾಯಿಸಿತು.
ಕೊರಟಗೆರೆಯಲ್ಲಿ ಆಯೋಜನೆಗೊಳಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಕೊರಟಗೆರೆ ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರಾದ ಚಿಕ್ಕರಂಗಯ್ಯ, ನಿರ್ದೇಶಕರಾದ ಗೊಂದಿಹಳ್ಳಿರಂಗರಾಜು ಸೇರಿದಂತೆ ಇತರ ನ್ಯಾಯಬೆಲೆ ಅಂಗಡಿ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಅನ್ನಭಾಗ್ಯ ಯೋಜನೆ ಬಡತನ ರೇಖೆಗಿಂತ ಕೆಲವರ್ಗ ಜನರಿಗೆ ಸಮರ್ಪಕವಾಗಿ ಯೋಜನೆಯ ಸೌಲತ್ತು ವಿತರಣೆ ಗೊಳ್ಳುತ್ತಿದ್ದು, ಅನ್ನ ಭಾಗ್ಯ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಪ್ರತಿ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೂ ನಾಲ್ಕೈದು ಸಾವಿರ ಪ್ರತಿ ತಿಂಗಳು ಸಾಮಾನ್ಯವಾಗಿ ಖರ್ಚು ಬರುತ್ತದೆ,
ಹೀಗಿರುವಾಗ ನಮಗೆ ನೀಡಬೇಕಾದ ಕಮಿಷನ್ ಕಳೆದ 4 ತಿಂಗಳ ಗಳಿಂದ ವಿತರಣೆಯಾಗಿಲ್ಲ ಜೊತೆಗೆ ಕಳೆದ ಒಂದು ವರ್ಷಗಳ ಹಿಂದೆ ಪ್ರತಿ ಕಾಡುದಾರರ ಮಾಹಿತಿಗಾಗಿ ಇ ಕೆ ವೈ ಸಿ ಕಾರ್ಯ ಪ್ರತ್ಯೇಕವಾಗಿ ಕಡ್ಡಾಯವಾಗಿ ಪ್ರತಿ ನ್ಯಾಯಬೆಲೆ ಅಂಗಡಿಯವರು ನಿರ್ವಹಿಸುವಂತೆ ಜೊತೆಗೆ ಅದಕ್ಕೆ ಪ್ರತ್ಯೇಕ ಕಮಿಷನ್ ರೂಪದಲ್ಲಿ ಹಣ ಬಿಡುಗಡೆಗೊಳಿಸಲು ಸರ್ಕಾರ ತಿಳಿಸಿದ್ದಾದರೂ ಈವರೆಗೂ ಬಿಡುಗಡೆಗೊಳಿಸಿರುವುದಿಲ್ಲ ದಯಮಾಡಿ ಸಂಕಷ್ಟದಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ಕಮಿಷನ್ ಹಾಗೂ ಇ ಕೆ ವೈ ಸಿ ಹಣವನ್ನು ಪ್ರತಿಕ್ಷಣ ಬಿಡುಗಡೆಗೊಳಿಸಲು ಸಹಕರಿಸಬೇಕು ಎಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಕೊರಟಗೆರೆ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ಮನವಿ ಮಾಡಿಕೊಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ