ಬೆಂಗಳೂರು
ಮಹಾರಾಷ್ಟದ ಮಂಡಿಗಳಲ್ಲಿ ಈರುಳ್ಳಿಯ ಸಗಟು ಬೆಲೆಯಲ್ಲಿ ನಿರಂತರ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ, ರೈತರಿಂದ ನೇರವಾಗಿ ಈರುಳ್ಳಿ ಖರೀದಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ- ನೆಫೆಡ್‌ಗೆ ಸೂಚನೆ ನೀಡಿದೆ.
ಈ ಸೂಚನೆ ಮೇರೆಗೆ ಇದಾಗಲೇ ಈರುಳ್ಳಿಯ ಖರೀದಿ ಶುರುವಾಗಿದೆ. ನೆಫೆಡ್ ಅಧ್ಯಕ್ಷ ಡಾ. ಬಿಜೇಂದ್ರ ಸಿಂಹ, ದೇಶಾದ್ಯಂತ ಮಾರುಕಟ್ಟೆಗಳಿಗೆ ಹೆಚ್ಚು ಈರುಳ್ಳಿಯ ಆಗಮನದಿಂದಾಗಿ, ಸಗಟು ಬೆಲೆಯಲ್ಲಿ ಹಠಾತ್ ಕುಸಿತ ಕಂಡಿದೆ ಎಂದರು.
ಈರುಳ್ಳಿ ಖರೀದಿಯ ಪ್ರಕ್ರಿಯೆ ಶುರು ಮಾಡಲಾಗಿದೆ. ನೆಫೆಡ್ ವತಿಯಿಂದ ಈಗಾಗಲೇ ದೇಶದ ಅತಿ ದೊಡ್ಡ ಈರುಳ್ಳಿ ಮಂಡಿಯಾಗಿರುವ ನಾಸಿಕ್‌ನಲ್ಲಿ ಐದು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 13 ಸ್ಥಳಗಳಲ್ಲಿ ಈರುಳ್ಳಿಗಳ ಖರೀದಿ ನಡೆಯುತ್ತಿದೆ ಎಂದು ಡಾ. ಬಿಜೇಂದ್ರ ಸಿಂಹ ಹೇಳಿದರು. ಇಲ್ಲಿ ರೈತರು ನೇರವಾಗಿ ಈರುಳ್ಳಿಯನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆಜಿಗೆ 9 ರೂಪಾಯಿಗಳಂತೆ ಈರುಳ್ಳಿಯನ್ನು ಖರೀದಿಸಲಾಗುತ್ತಿದೆ.
ಇದಾಗಲೇ 1327 ಕ್ಕೂ ಅಧಿಕ ಮೆಟ್ರಿಕ್ ಟನ್‌ನಷ್ಟು ಈರುಳ್ಳಿಯನ್ನು ರೈತರಿಂದ ಸಂಗ್ರಹಿಸಲಾಗಿದೆ. ಈ ಕೇಂದ್ರಗಳಿAದ ಈರುಳ್ಳಿಯನ್ನು ಮಹಾರಾಷ್ಟçದ ಹೊರಗೆ ಮಾರಾಟ ಮಾಡಲಾಗುತ್ತಿದ್ದು, ರೈತರು ಲಾಭ ಪಡೆಯುತ್ತಿದ್ದಾರೆ . ಈಗಾಗಲೇ 400ಕ್ಕೂ ಅಧಿಕ ಈರುಳ್ಳಿ ಬೆಳೆಗಾರರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ