ಚುನಾವಣೆ : ಸದ್ದಿಲದೆ ಚುರುಕುಗೊಂಡ ರಿಟೈರ್ಡ್‌ ಪಾಲಿಟಿಕ್ಸ್

ಮೈಸೂರು: 

    ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲ್ಲೇ ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲುವ  ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಇದೇ ಸಮಯದಲ್ಲಿ ಅನೇಕ ನಿವೃತ್ತ ಅಧಿಕಾರಿಗಳು ಚುನಾವಣಾ ಕಣದಲ್ಲಿ ತಮ್ಮ ಮುಂದಿನ ರಾಜಕೀಯ ಭವಿಷ್ಯ ಪರೀಕ್ಷಿಸಲು ಮುಂದಾಗಿರುವುದು ಗಮನಾರ್ಹ.

    ರೇಸ್‌ ನಲ್ಲಿ ಎಷ್ಟು ಕುದುರೆ ಓಡಿದರು ಗೆಲ್ಲುವ ಕುದುರೆಗಳು ಮಾತ್ರ ಬೇರೆ ಎಂಬ ಮಾತಿನಂತೆ ರಾಜಕೀಯದಲ್ಲಿ ಎಷ್ಟೇ ಮಂದಿ ಅಧಿಕಾರಿಗಳು ಕಣದಲ್ಲಿದ್ದರು ಕೊನೆಗೆ ವಿಜಯಮಾಲೆ ವರಿಸುವುದು ಕೆಲವರನ್ನು ಮಾತ್ರ ಇಲ್ಲಿಯವರೆಗೆ ಯಶ ಕಂಡದ್ದು ಮಾಜಿ ಐಪಿಎಸ್ ಅಧಿಕಾರಿಗಳಾದ ಎಚ್ ಟಿ ಸಾಂಗ್ಲಿಯಾನ ಮತ್ತು ಕೋದಂಡರಾಮಯ್ಯ  ಮಾತ್ರ ಲೋಕಸಭೆಗೆ ಆಯ್ಕೆಯಾಗಿದ್ದಾರೆ .ಇನ್ನು ಪೊಲೀಸೇತರ ಇಲಾಖೆಯಿಂದ ಆಯ್ಕೆಯಾದವರೆಂದರೆ  ಎಚ್ ನಾಗೇಶ್ ಮುಳಬಾಗಲಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಇವರು ಕೆಪಿಟಿಸಿಎಲ್‌ ನಲ್ಲಿ ಅಭಿಯಂತರರಾಗಿದ್ದರು.

     ಈ ಬಾರಿಯೂ ಹಲವಾರು ನಿವೃತ್ತ ಅಧಿಕಾರಿಗಳು ಮತ್ತು ಅಧಿಕಾರಿಗಳು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಂದ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಳ್ಳುವ ಮೂಲಕ ಮಾಜಿ ಐಪಿಎಸ್ ಅಧಿಕಾರಿ ಬಾಸ್ಕರ್ ರಾವ್ ಅವರು ಖಾಕಿ ಕಳಚಿ, ಖಾದಿ ಅಪ್ಪಿಕೊಂಡರು.  ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

   ನಿವೃತ್ತ ಐಎಎಸ್ ಅಧಿಕಾರಿ ಎಚ್ ಟಿ ಅನಿಲ್ ಕುಮಾರ್ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸುವ ಸಾಧ್ಯತೆಯಿದೆ, ಅದೇ ರೀತಿ ನಿವೃತ್ತ ಪೌರಕಾರ್ಮಿಕ ಲಕ್ಷ್ಮೀ ನಾರಾಯಣ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಿಂದ ಟಿಕೆಟ್ ಬಯಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap