ದಾವಣಗೆರೆ ರೊಟ್ಟಿ ಊಟ ಸವಿದ ಕಂದಾಯ ಸಚಿವರು

ದಾವಣಗೆರೆ:

ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ತುಂಬಾ ಚೆನ್ನಾಗಿದೆ. ನಾನೇ ಕಾಡಿ, ಬೇಡಿ ತೆಗೆದುಕೊಂಡು ಹೋಗುತ್ತಿದ್ದು, ಮಧ್ಯಾಹ್ನದ ಭೋಜನಕ್ಕೆ ಬಳಸಿಕೊಳ್ಳುತ್ತೇನೆ. ಇದರೊಂದಿಗೆ ಇತರೆ ತಿನಿಸುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಮನೆಯಲ್ಲಿ ಉಪಹಾರ ಸೇವಿಸಿದ ಸಚಿವ ಆಶೋಕ್, ಅಡುಗೆ ತುಂಬಾ ರುಚಿಕರವಾಗಿತ್ತು. ಪ್ರೀತಿಯಿಂದ ತಯಾರಿಸಿದ್ದಾರೆ. ನನಗೆ ತುಂಬಾ ಇಷ್ಟವಾಯಿತು. ಕಾರಣ ನಾನೇ ಬಲವಂತ ಮಾಡಿ ಪಡೆದುಕೊಂಡಿದ್ದೇನೆ ಎಂದರು.

ರಾಗಿರೊಟ್ಟಿ, ಹುಚ್ಚೆಳ್ಳು aಚಟ್ನಿ ರುಚಿಗೆ ಮನಸೋತು. ಬೆಂಗಳೂರಿಗೂ ತೆಗೆದುಕೊಂಡು ಹೋಗಲು ಕೊಡುವಂತೆ ಕೇಳಿದರು. ಈ ವೇಳೆ ಮನೆಯವರು ಒಪ್ಪದಿದ್ದರೂ ಅವರನ್ನು ಒಪ್ಪಿಸಿ ಅವರ ಮನೆಯಿಂದಲೇ ಹಲವು ಖಾದ್ಯಗಳನ್ನು ತೆಗೆದುಕೊಂಡು ಹೋದರು.ಗ್ರಾಮದ ಶಾರದಮ್ಮ, ಶಾಂತಪ್ಪ ಎಂಬುವರ ಮನೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಉಪಹಾರ ಸೇವನೆ ಮಾಡಿದರು.

 

Recent Articles

spot_img

Related Stories

Share via
Copy link