ಯಶಸ್ವಿನಿ ಯೋಜನೆಗೆ ಮರುಜೀವ: ಅ.2 ರಂದು ಉದ್ಘಾಟನೆ

ಬೆಂಗಳೂರು:

ಬೆಂಗಳೂರು, ಮೇ 06 ಯಶಸ್ವಿನಿ ಯೋಜನೆಗೆ ಮರುಜೀವ ನೀಡಿರುವ ರಾಜ್ಯ ಸರ್ಕಾರ ಅಕ್ಟೋಬರ್ 2 ರಂದು ಉದ್ಘಾಟನೆ ಮಾಡಲು ನಿರ್ಧರಿಸಿದೆ.2022- 23 ನೆ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಕಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಯಶಸ್ವಿನಿ ಯೋಜನೆಗೆ ಮರು ಚಾಲನೆ ನೀಡುವ ದಿನಾಂಕವನ್ನು ನಿಗದಿಪಡಿಸಿದ್ದಾರೆ.

ರಾಜ್ಯಕ್ಕೆ ಮತ್ತೊಂದು ಬಿಗ್‌ ಶಾಕ್‌ : ಒಮಿಕ್ರಾನ್‌ನ BA.4, BA.5 ಉಪತಳಿ ಪತ್ತೆ

ಯಶಸ್ವಿನಿ ಯೋಜನೆ ಹಾಗೂ ಎ.ಬಿ.ಆರ್. ಕೆ ಡ್ಯೂಪ್ಲಿಕೇಷನ್ ಆಗಬಾರದು. ಎ.ಬಿ.ಆರ್.ಕೆ ಅರ್ಜಿಗಳನ್ನು ತಿರಸ್ಕರಿಸಕೂಡದು. ತಜ್ಞರಿಂದ ಅಧ್ಯಯನ ಕೈಗೊಂಡು ತೀರ್ಮಾನ ಕೈಗೊಳ್ಳುವುದು ಎಂದು ಸೂಚಿಸಿದರು.ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಸಂಬಂಧಿಸಿದಂತೆ ಆರ್.ಬಿ.ಐ ನಿಯಮಾವಳಿಗಳ ಅಗತ್ಯಗಳಿಗೆ ಅನುಸಾರವಾಗಿ ದಾಖಲೆಗಳನ್ನು ಸಲ್ಲಿಸುವುದು.

ಈ ತಿಂಗಳೊಳಗೆ ಕೆಲಸ ಪೂರ್ಣಗೊಳ್ಳಬೇಕು. ಗೋಕಾಕ್, ಬೀದರ್, ಹುಬ್ಬಳ್ಳಿಯಲ್ಲಿ ಸಹಕಾರಿ ವಲಯದ ಆಸ್ಪತ್ರೆಗಳನ್ನು ಬಲಪಡಿಸಲು ಆಸ್ಪತ್ರೆಗಳಿಗೆ ನೆರವು ಒದಗಿಸಲು ಕ್ರಮ ವಹಿಸಬೇಕು. ಅಲ್ಲದೆ, ಸಾಲಮನ್ನಾ ಸಂಬಂಧ 50 ವರ್ಷಗಳ ಹಳೆಯ ಸೊಸೈಟಿಗಳಿಗೆ ನೆರವು ಒದಗಿಸುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.

ಅನಧಿಕೃತವಾಗಿ ಮನೆ ನಿರ್ಮಿಸಿದವರಿಗೆ ಸಿಹಿ ಸುದ್ದಿ: ಅಕ್ರಮ-ಸಕ್ರಮ ಯೋಜನೆ ಜಾರಿಗೆ ಸರ್ಕಾರ ಚಿಂತನೆ

ಜುಲೈ ಒಳಗೆ ಫಲಾನುಭವಿಗಳ ಆಯ್ಕೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮುಖ್ಯಮಂತ್ರಿ ,ಬಸವರಾಜ ಬೊಮ್ಮಾಯಿ ಸೂಚನೆಬೆಂಗಳೂರು, ಮೇ 5- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ ಜುಲೈ ತಿಂಗಳೊಳಗಾಗಿ ಫಲಾನುಭವಿಗಳ ಆಯ್ಕೆಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾ ತೆಗೆದರೆ ಅಲ್ಲೇ ಬಂದು ಹೊಡೆಯುತ್ತೇವೆ; ಮುಸ್ಲಿಂ ಡಿಫೆನ್ಸ್​ ಫೋರ್ಸ್​ ವಾಟ್ಸ್​ಆಯಪ್​ ಗ್ರೂಪ್​​ನಲ್ಲಿ ಬೆದರಿಕೆ ಸಂದೇಶ

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಮುಖ್ಯಾಂಶಗಳು:

1. ಇಲಾಖೆಯ 50 ಕನಕದಾಸ ವಿದ್ಯಾರ್ಥಿನಿಲಯಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗಳ ಕಾರ್ಯವನ್ನು ಪ್ರಾರಂಭಿಸುವುದು

2. ಈ ವರ್ಷ ಜುಲೈ ಒಳಗೆ ಫಲಾನುಭವಿಗಳ ಆಯ್ಕೆ ಮುಗಿಯಬೇಕು

3. ವಿದ್ಯಾರ್ಥಿನಿಲಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಮಾಸಿಕ ಭೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ.

4. ನಾರಾಯಣ ಗುರು ವಸತಿ ಶಾಲೆ ಸ್ಥಾಪನೆಗೆ ಸ್ಥಳ ನಿಗದಿಯಾಗಿದೆ. ಮೊದಲ ಹಂತದಲ್ಲಿ 5 ಕೋಟಿ ರೂ.ಗಳಿಗೆ ಶಾಲೆಯನ್ನು ಪ್ರಾರಂಭ ಮಾಡುವುದು.

5. ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಅನುದಾನ ಲಭ್ಯವಿದ್ದು, ಇದನ್ನು 100 ಕೋಟಿ ನೀಡುವುದು, ವೀರಶೈವ ಅಭಿವೃದ್ಧಿ ನಿಗಮಕ್ಕೆ ಲಭ್ಯವಿರುವ 100 ಕೋಟಿ ರೂ.ಗಳು ವೆಚ್ಚವಾದ ನಂತರ ಹೆಚ್ಚುವರಿ 100 ಕೋಟಿ ಗಳನ್ನು ಒದಗಿಸುವುದು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧಿಸಿದಂತೆ ತುರ್ತಾಗಿ ಸಭೆ ಕರೆಯುವಂತೆ ಸೂಚಿಸಿದರು.

ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌: 4ಚಿನ್ನ, 1ಬೆಳ್ಳಿ ಗೆದ್ದ ಕುಸುಮಾ ಭೀಮಯ್ಯ

6. ದೇವರಾಜ ಅರಸ್ ಹಿಂದುಳಿದ ವರ್ಗಗಳ ಹಿಂದುಳಿದ ನಿಗಮದ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಶೇ 85 ರಷ್ಟು ಪ್ರವರ್ಗ 1 ಮತ್ತು 2 ಎ ಗೆ ವರ್ಗೀಕರಿಸಿ ಬರುವ ಸಮುದಾಯಗಳ ಪಟ್ಟಿಯನ್ನು ಕಡತದಲ್ಲಿ ಸಲ್ಲಿಸುವಂತೆ ತಿಳಿಸಿದರು.

7. ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ 10 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ನೀಡುವುದು

ರಭಸದ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು ಮೈಲನಹಟ್ಟಿ ಸುತ್ತಮುತ್ತ ಮನೆಗಳಿಗೂ ಹಾನಿ : ಅಪಾರ ನಷ್ಟ

8. ಅಮೃತ ಮುನ್ನಡೆ ನೂತನ ಯೋಜನೆಗೆ ಮುಂದಿನ ವಾರದಿಂದ ಅರ್ಜಿ ಕರೆಯುವುದು . ಪದವಿ ಕೋರ್ಸುಗಳ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸುವುದು.

9. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಿಂದ 50,000 ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕುರಿತು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ, ಉನ್ನತ ಶಿಕ್ಷಣ ಇಲಾಖೆಗಳ ಸಭೆ ಕರೆದು, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಸಂಖ್ಯೆಯನ್ನು ನಿಗದಿಪಡಿಸುವಂತೆ ಸೂಚಿಸಿದರು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link