ರಿಹಾಬ್ ಸೆಂಟರ್ ಗೆ ಸೇರಿಸೋ ಮುನ್ನ ಎಚ್ಚರ….!

ಬೆಂಗಳೂರು:

  ಖಾಸಗಿ ಪುನರ್ವಸತಿ ಕೇಂದ್ರ ವೊಂದರಲ್ಲಿ ರೋಗಿಯೊಬ್ಬರ ಮೇಲೆ ಅಲ್ಲಿನ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.ಪುನರ್ವಸತಿ ಕೇಂದ್ರದವಾರ್ಡನ್ ಬಟ್ಟೆ ಒಗೆಯಲು ಮತ್ತು ಶೌಚಾಲಯ ಸ್ವಚ್ಛಗೊಳಿಸಲು ನಿರಾಕರಿಸಿದ ಕಾರಣ, ಸಿಬ್ಬಂದಿ ರೋಗಿಯೊಬ್ಬನನ್ನು 30 ಕ್ಕೂ ಹೆಚ್ಚು ಬಾರಿ ಥಳಿಸಿದ್ದಾರೆ.ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಪುನರ್ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

   ವೈರಲ್ ಆಗಿರುವ ವಿಡಿಯೋ ಪ್ರಕಾರ, ರೋಗಿಯನ್ನು ಕೋಣೆಯಲ್ಲಿ ಮೂಲೆಗೆ ಸೇರಿಸಿಕೊಂಡು ವ್ಯಕ್ತಿಯೊಬ್ಬ ಕೋಲಿನಿಂದ ನಿರಂತರವಾಗಿ ಹೊಡೆಯುತ್ತಿದ್ದಾನೆ. ಆದರೆ ಇದೇ ಸಂದರ್ಭದಲ್ಲಿ ಅವನ ಪಕ್ಕದ್ದಲೇ ಇದ್ದ ಇತರರು ಪಕ್ಕದಲ್ಲಿ ಸುಮ್ಮನೆ ನೋಡುತ್ತಿದ್ದರು. 

   ಹಲ್ಲೆಗೊಳಗಾದ ವ್ಯಕ್ತಿಯನ್ನು ಪ್ರವೀಣ್ ಎಂದು ಗುರುತಿಸಲಾಗಿದ್ದು, ಪ್ರವೀಣ್ ವೀಪರೀತ ಕುಡಿತದ ಚಟ ಇತ್ತು. ಕುಡಿತದ ಚಟಕ್ಕೆ ಬಿದ್ದು ಹೆಂಡತಿ ಮಕ್ಕಳನ್ನು ಉಪವಾಸ ಕೆಡವಿದ್ದ. ಹೀಗಾಗಿ ಪ್ರವೀಣ್ ತಮ್ಮ ಅಣ್ಣನನ್ನು RASP ರಿಹಾಬ್ ಸೆಂಟರ್ ಗೆ ಸೇರಿಸಿದ್ದ. ಆದರೆ ಅಲ್ಲಿ ಪ್ರವೀಣ್ ಗೆ ರಿಹಾಬ್ ಸೆಂಟರ್ ನವರು ನರಕಯಾತನೆ ತೋರಿಸಿದ್ದಾರೆ. ಎರಡು ದಿನ ಕೈಕಾಲು ಕಟ್ಟಿ ಸ್ವಾಧೀನ ಕಳೆದುಕೊಳ್ಳುವಂತೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಪ್ರವೀಣ್ ಪ್ರಜ್ಞಾಹೀನನಾದಾಗ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಪ್ರವೀಣ್ ಚಿಕಿತ್ಸೆಗೆ ಆಸ್ಪತ್ರೆ ಸೇರಿ ಪ್ರಜ್ಞೆ ಬಂದ ಬಳಿಕ ರಿಹಾಬ್ ಸೆಂಟರ್ ನವರು ಮಾಡಿದ ಅಸಲಿ ವಿಚಾರ ಬಹಿರಂಗವಾಗಿದೆ.

   ಘಟನೆ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು FIR ನಲ್ಲಿ ಯಾವ ರಿಹಾಬ್ ಸೆಂಟರ್ ಎಂಬುದನ್ನು ದಾಖಲಿಸದೇ ಕೇವಲ ರಿಹಾಬ್ ಸೆಂಟರ್ ಎಂದು ಪ್ರಕರಣ ದಾಖಲಿಸಿದ್ದಾರೆ.

   ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ನೆಲಮಂಗಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ದೃಢಪಡಿಸಿದರು. ಈ ಘಟನೆ ಖಾಸಗಿ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ 2024 ರ ಮಧ್ಯದಲ್ಲಿ ನಡೆದಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ. ಹಲ್ಲೆಗೆ ಸಂಬಂಧಿಸಿದಂತೆ ಪುನರ್ವಸತಿ ಮಾಲೀಕರು ಮತ್ತು ವಾರ್ಡನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸದ್ಯ ಕುಟುಂಬಸ್ಥರು ಸಮಾಜಕ್ಕೆ ತೊಡಕಾಗಿರುವ ಇಂತಹ ರಿಹಾಬ್ ಸೆಂಟರ್ ಬಂದ್ ಮಾಡುವಂತೆ ಬಿಗಿ ಪಟ್ಟು ಹಿಡಿದಿದ್ದಾರೆ.