ಮ್ಯಾಂಚೆಸ್ಟರ್:
ಇಲ್ಲಿನ ಓಲ್ಡ್ ಟ್ರಾಫೋರ್ಡ್‌ನಲ್ಲಿ ಜುಲೈ 23ರಿಂದ ಆರಂಭವಾಗಲಿರುವ ಇಂಗ್ಲೆಂಡ್ ತಂಡದ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ , ಮಾಜಿ ಟೆಸ್ಟ್ ಆಟಗಾರ ರೋಹಿತ್ ಶರ್ಮ ಅವರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದಾರೆ.
ಪಂತ್ ನಾಲ್ಕನೇ ಟೆಸ್ಟ್‌ನಲ್ಲಿ 40 ರನ್ ಬಾರಿಸಿದರೆ, ಭಾರತ ತಂಡದ ಪರ ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿದೆ. ಪಂತ್ 2,677 ರನ್ ಗಳಿಸಿದ್ದಾರೆ.ಮಾಜಿ ಆಟಗಾರ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಹಾಲಿ ನಾಯಕ ಶುಭಮನ್ ಗಿಲ್ 65 ಇನಿಂಗ್ಸ್ ಗಳಲ್ಲಿ 2,500 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜ ಅವರು 64 ಇನಿಂಗ್ಸ್ ಗಳಲ್ಲಿ 2212 ರನ್ ಗಳಿಸಿ ಟಾಪ್-5ರಲ್ಲಿದ್ದಾರೆ.
ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದಾಟದ ವೇಳೆ ಬೆರಳಿಗೆ ಗಾಯಕ್ಕೆ ತುತ್ತಾಗಿದ್ದ ಪಂತ್ ಸಂಪೂರ್ಣ ಚೇತರಿಕೆ ಕಂಡಿದ್ದು ಆಡಲು ಫಿಟ್ ಆಗಿದಾರೆ ಎಂದು ಬಿಸಿಸಿಐ ವೈದ್ಯಕೀಯ ವಿಭಾಗ ಮಾಹಿತಿ ನೀಡಿದೆ. ಅವರ ಗಾಯದ ಸ್ವರೂಪ ಗಂಭೀರವಾದದ್ದಲ್ಲ. ನಾಲ್ಕನೇ ಟೆಸ್ಟ್‌ನಲ್ಲಿ ಅವರು ಆಡಲಿದ್ದಾರೆ ಎಂದು ತಿಳಿಸಿದೆ. ಮೂರನೇ ಟೆಸ್ಟ್‌ನಲ್ಲಿ ಗಾಯದಿಂದ ಪಂತ್ ಕೀಪಿಂಗ್ ಮಾಡಿರಲಿಲ್ಲ. ಧ್ರುವ್ ಜುರೆಲ್ ಕೀಪಿಂಗ್ ನಡೆದಿದ್ದರು.
