ದಬ್ಬೆಘಟ್ಟ ರಸ್ತೆ ಅಗಲೀಕರಣಕ್ಕೆ ಒತ್ತಾಯ

ತುರುವೇಕೆರೆ:


        ಇಂದು ಪಕ್ಷಾತೀತ ಪ್ರತಿಭಟನೆ, ಅಹೋರಾತ್ರಿ ಧರಣಿ

ಪಟ್ಟಣದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿಯ ಬಗ್ಗೆ ಇಚ್ಛಾಶಕ್ತಿ ಇಲ್ಲದ ಪಪಂ, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ತುರುವೇಕೆರೆ ತಾಲ್ಲೂಕು ಅಭಿವೃದ್ಧಿ ವೇದಿಕೆ ವತಿಯಿಂದ ಡಿ.16 ರ ಗುರುವಾರದಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ದಬ್ಬೆಘಟ್ಟ ವೃತ್ತದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ಹಾಗೂ ಅಹೋರಾತ್ರಿ ಧರಣಿ ನಡೆಸಲು ವಿವಿಧ ಸಂಘಟನೆಗಳು ಕರೆ ನೀಡಿವೆ.

ಪಟ್ಟಣದ ಆರ್.ಕೆ.ರೆಸಿಡೆನ್ಸಿಯಲ್ಲಿ ಬುಧವಾರ ಹಲವು ಸಂಘಟನೆಗಳ ಮುಖಂಡರುಗಳು ಸಭೆ ನಡೆಸಿ ಪ್ರತಿಭಟನೆಯ ರೂಪು ರೇಷೆಗಳ ಬಗ್ಗೆ ಚರ್ಚಿಸಿದರು.

ಪಪಂ ಮಾಜಿ ಅಧ್ಯಕ್ಷ ಹಾವಾಳ ಎಚ್.ಆರ್.ರಾಮೇಗೌಡ ಅವರು ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದೆ ರಸ್ತೆಯಲ್ಲಿ ಸಮಾರು 80 ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿಯ ವಿವಿಧ ಇಲಾಖೆಗಳು, ಬ್ಯಾಂಕ್‍ಗಳು, ಶಾಲಾ ಕಾಲೇಜು ಸೇರಿದಂತೆ ಪ್ರತಿನಿತ್ಯ 360 ಬಸ್‍ಗಳು ಸಂಚಾರ ಮಾಡುತ್ತಿವೆ. ಸೋಮವಾರ ಬಂತೆಂದರೆ ಇಲ್ಲಿ ಜನರು ಸಂಚಾರ ಮಾಡುವುದಕ್ಕೆ ಅಡಚಣೆಯಾಗುತ್ತದೆ. ಹೀಗಿರುವಾಗ ವಾಹನಗಳ ಓಡಾಟ ಇನ್ನೂ ತ್ರಾಸದಾಯಕವಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಕೃಷ್ಣಮೂರ್ತಿ, ಸಿಐಟಿಯು ಸತೀಶ್, ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್, ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಪಪಂ ಮಾಜಿ ಸದಸ್ಯ ದಿವಾಕರ್, ಶಾಮಿಯಾನ ಮಂಜಣ್ಣ, ರೇಣುಕೇಶ್, ಉಪೇಂದ್ರ, ವಿಕ್ಕಿ, ಶಶಾಂಕ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿವಿಧ ಸಂಘ-ಸಂಸ್ಥೆಗಳು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಪ್ರಬಲ ಹೋರಾಟ ಮಾಡಲು ಚಿಂತನೆ ನಡೆಸಿದ್ದು, ದಬ್ಬೆಘಟ್ಟ ರಸ್ತೆಯಲ್ಲಿ ಶಾಮಿಯಾನ ಹಾಕಿ 12.5 ಮೀ. ರಸ್ತೆ ತೆರವು ಕಾರ್ಯಕ್ಕೆ ಭರವಸೆ ನೀಡುವವರೆಗೂ ಅಹೋರಾತ್ರಿ ಹೋರಾಟ ಮುಂದುವರಿಸಲಾಗುವುದು.

 -ಜಿ.ಆರ್.ರಂಗೇಗೌಡ, ಹೋರಾಟ ಸಮಿತಿ ಅಧ್ಯಕ್ಷ

ನೆನೆಗುದಿಗೆ ಬಿದ್ದ ಕಾಮಗಾರಿ :

                 ಹಲವಾರು ಬಾರಿ ಸಂಘಟಿತ ಹೋರಾಟ ನಡೆಸಿದರೂ ಪಪಂ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಕೆಲವರ ಸ್ವಾಹಿತಾಸಕ್ತಿ, ರಾಜಕೀಯ ಮುಖಂಡರು ಹಾಗೂ ಜನ ಪ್ರತಿನಿಧಿಗಳಲ್ಲಿ ಬದ್ಧತೆಯ ಕೊರತೆಯಿಂದ ರಸ್ತೆ ತೆರವು ಕಾರ್ಯ ನೆನೆಗುದಿಗೆ ಬಿದ್ದಿದೆ. ಸರ್ಕಾರದ ಆದೇಶದಂತೆ 12.5 ಮೀ. ರಸ್ತೆ ವಿಸ್ತರಣೆ ಆಗಲೇಬೇಕು.

ದಬ್ಬೆಘಟ್ಟ ವೃತ್ತದ ಸಂಜೀವಮ್ಮನವರ ನಿವೇಶನದ ಮುಂಭಾಗದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ನಾಗರಿಕರು, ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಹಾವಾಳ ಎಚ್.ಆರ್.ರಾಮೇಗೌಡ ಅವರು ಈ ಮೂಲಕ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link