ರಸ್ತೆ ಅಪಘಾತಗಳಿಗೆ ಇಂಜಿನಿಯರ್ʼಗಳೇ ಪ್ರಮುಖ ಕಾರಣ: ನಿತಿನ್ ಗಡ್ಕರಿ

ವದೆಹಲಿ

   ಪಾಕಿಸ್ತಾನ, ಚೀನಾ ಯುದ್ಧಗಳು, ನಕ್ಸಲರ ದಾಳಿ, ಕೋಮು ಗಲಭೆಗಳಿಗಿಂತ ರಸ್ತೆ ಅಪಘಾತದಲ್ಲೇ ಹೆಚ್ಚಿನ ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. FICCI ರೋಡ್ ಸೇಫ್ಟಿ ಅವಾರ್ಡ್ಸ್ ಮತ್ತು ಕಾನ್ಕ್ಲೇವ್ 2024 ರ ಆರನೇ ಆವೃತ್ತಿಯಲ್ಲಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಸುಮಾರು 1.5 ಲಕ್ಷ ಸಾವುಗಳು ವರದಿಯಾಗುತ್ತಿವೆ.

   ಬಲಿಪಶುಗಳಲ್ಲಿ ಸುಮಾರು 65% ಯುವಕರು ಮತ್ತು ಯುವತಿಯರು ಇದ್ದಾರೆ. ಇದರಿಂದ ಜಿಡಿಪಿಯ ಶೇ.3ರಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ನೀವು ಲೆಕ್ಕ ಹಾಕಿದರೆ, ಚೀನಾ ಅಥವಾ ಪಾಕಿಸ್ತಾನ ಯುದ್ಧಗಳು, ನಕ್ಸಲರ ದಾಳಿ, ಕೋಮು ಗಲಭೆಗಳು, ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ದುರ್ಘಟನೆಗಳಿಗಿಂತ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. 

   ಪ್ರತಿ ರಸ್ತೆ ಅಪಘಾತಕ್ಕೂ ಚಾಲಕರನ್ನೇ ಹರಕೆಯ ಕುರಿ ಮಾಡುತ್ತಿದ್ದೇವೆ. ಆದರೆ ರಸ್ತೆ ಎಂಜಿನಿಯರುಗಳ ತಪ್ಪು ಇಲ್ಲಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಸಿದ್ಧಪಡಿಸುವ ವಿಸ್ತೃತ ಯೋಜನಾ ವರದಿಗಳಿಂದ  ಹೆದ್ದಾರಿಗಳಲ್ಲಿ ಬ್ಲಾಕ್‌ ಸ್ಪಾಟ್‌ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap