ಹುಳಿಯಾರು :
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಆರು ಮಂದಿ ಪ್ರವಾಸ ತೆರಳಿದ್ದರು ಶ್ರೀಶೈ¯ಕ್ಕೆ ಬೇಟಿ ನೀಡಿ ಹಿಂದಿರುಗುವಾಗ ಭಾನುವಾರ ೮ ಗಂಟೆ ಸುಮಾರಿಗೆ ಆಂದ್ರ ಪ್ರದೇಶದ ಕರ್ನೂಲ್ ಬಳಿ ಇನೋವಾ ಕಾರು ಪಲ್ಟಿಯಾಗಿ ಅಪಘಾತಗೊಂಡು ಬಿಜೆಪಿಯ ಯುವ ಮುಖಂಡರು ಹಾಗೂ ಅದೇ ಗ್ರಾಮದ ಇನ್ನೊಬ್ಬ ಯುವಕ ಮೃತಪಟ್ಟಿದ್ದಾರೆ.
ಮೃತರಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ಕುಮಾರ್ (48) ಜಿಲ್ಲಾ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ಹಾಗೂ ಜಿಲ್ಲಾ ವೀರಶೈವ ಸಮಾಜದ ನಿರ್ದೆಶಕರಾದ ಸಂತೋಷ್ ಕುಮಾರ್ (38) ಹಾಗೂ ಅದೆ ಕೆಂಕೆರೆ ಗ್ರಾಮದ ಲೋಕೇಶ್ (38) ಈ ಮೂವರಿಗೆ ತಲೆಗೆ ಅತಿಯಾದ ಪೆಟ್ಟು ಬಿದ್ದು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನುಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮೂರು ಜನ ಮೃತರು ಹೆಂಡತಿ ಹಾಗೂ ಪುಟ್ಟ ಮಕ್ಕಳನ್ನು ಅಗಲಿದ್ದಾರೆ, ಹೋಬಳಿಯಲ್ಲಿ ಬಿಜೆಪಿ ಪಕ್ಷಕ್ಕೆ ಆಧಾರ ಸ್ಥಂಭದಂತಿದ್ದ ಹಾಗೂ ಭವಿಷ್ಯದ ನಾಯಕರಾಗುವ ಭರವಸೆ ಇದ್ದ ಇಬ್ಬರನ್ನು ಕಳೆದುಕೊಂಡು ಕಳೆಗುಂದಿದೆ. ಕೆಂಕೆರೆ ಗ್ರಾಮದ ಪ್ರತಿಯೊಂದು ವಿಚಾರಕ್ಕೂ ಸ್ಪಂದಿಸುತ್ತಿದ್ದ ಯುವಕರನ್ನು ಕಳೆದುಕೊಂಡ ಕೆಂಕೆರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.








