ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ
ತಿಪಟೂರು :
ರಂಗನಾಥ್ ಪಾರ್ಥಸಾರಥಿ
ಹಿಂದಿನ ಪ್ರಧಾನಿ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳಾದರೆ ರೈತರಿಗೆ ಅನುಕೂಲವೆಂದು ರಸ್ತೆ ನಿರ್ಮಿಸಿದರು, ಆದರೆ ಇಂದಿನ ಸರ್ಕಾರಗಳು ರಸ್ತೆಗಳನ್ನು ಮಿರ್ನಿಸುತ್ತಿವೆಯಾದರು ಅವುಗಳು ಹೇಗೆ ಆಗುತ್ತಿವೆ, ಎಂಬುದನ್ನು ಪರೀಕ್ಷೀಸುವ ಗುಣವನ್ನು ಕಳೆದುಕೊಂಡಂತೆ ಕಾಣುತ್ತಿದ್ದು ರಸ್ತೆಯ ಕಾಮಗಾರಿಗಳು ಕಳಪೆಯಾಗುತ್ತಿದ್ದು ಅಧಿಕಾರಿಗಳು ಸಹ ಅವುಗಳನ್ನು ಪರೀಕ್ಷಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸವಾಗಿದೆ.
ತಾಲ್ಲೂಕಿನಲ್ಲಿ ಬಹುತೇಕರಸ್ತೆಗಳು ನಿರ್ಮಾಣವಾಗುತ್ತಿದ್ದು ಸಾಕಷ್ಟು ಕಡೆ ರಸ್ತೆಯ ಗುಣಮಟ್ಟ ಸರಿಇಲ್ಲವೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತೆ ರಸ್ತೆಗಳು ಸೂಕ್ತ ಗುಣಮಟ್ಟದಲ್ಲಿ ಇಲ್ಲವೆಂಬ ಬಗ್ಗೆ ವರದಿ ಬರುತ್ತಿದತೆ ಅಲ್ಲಿಅಲ್ಲಿ ತೇಪೆಯನ್ನು ಹಾಕಿ ರಸ್ತೆಗಳನ್ನು ಸರಿಪಡಿಸಿದ್ದೇವೆಂದು ಹೇಳುವುದಕ್ಕೆ ಮಾತ್ರ ಅಧಿಕಾರಿಗಳು ಸೀಮಿತವಾಗಿದ್ದಾರೆ.
ರಸ್ತೆ ಕಾಮಗಾರಿಗಳು ಸಂಚಾರಿಗಳಿಗೆ ಕಂಟಕ : ತಾಲ್ಲೂಕಿನ ಹಾದು ಹೋಗಿರುವ ವೈ.ಟಿ.ರಸ್ತೆ, ಚನ್ನರಾಯಪಟ್ಟಣ ರಸ್ತೆ, ನೊಣವಿನಕೆರೆ-ಗುಂಗರಮಳೆ ರಸ್ತೆ, ಹೆಚ್ಚಿನದಾಗಿ ಸಿ.ಸಿ. ರಸ್ತೆಯನ್ನು ನಿರ್ಮಸುವ ಕಾಮಗಾರಿಳು ನಡೆಯುತ್ತಲೇ ಇವೆ. ಆದರೆ ಇವುಗಳು ಎಲ್ಲಿ ರಸ್ತೆ ಕಾಮಗಾರಿ ಆರಂಭವಾಗಿದೆ ಎಂಬುದು ಸಂಚಾರಿಗಳಿಗೆ ಕಾಣಿಸದೇ ದಿನನಿತ್ಯ ಬಿದ್ದು ಎದ್ದು ಹೋಗುತ್ತಿದ್ದಾರೆ. ರಸ್ತೆಕಾಮಗಾರಿಗಳು ಆರಂಭವಾಗಿರುವ ಬಗ್ಗೆ ಒಂದು ಸಣ್ಣ ಸೂಚನಾ ಫಲಕಗಳು ಇಲ್ಲದೇ ಇರುವುದೇ ಇಷೆಲ್ಲಾ ಅಪಘಾತಗಳಿಗೆ ಕಾರಣವಾಗಿದೆ.
ಕಳೆದ ವಾರದಿಂದ ವೈಟಿ ರಸ್ತೆಯಲ್ಲಿ ಬರುವ ಎಡಗರಹಳ್ಳಿಯ ಬಳಿ ರಸ್ತೆ ಕಾಮಗಾರಿ ಆರಂಭವಾಗಿದ್ದು ರಸ್ತೆಯನ್ನು ಕಿತ್ತ ಮಣ್ಣನ್ನು ಅಲ್ಲಿಯೇ ಹಾಕಿಕೊಂಡಿರುವುದರಿಂದ ವಾಹನಗಳು ಸರಿಯಾಗಿ ಗೋಚರಿಸುತ್ತಿಲ್ಲ, ಅದಲ್ಲದೇ ತಿರುವಿನಲ್ಲಿ ಅದು ಸಹ ರಸ್ತೆಯು ವಿಭಜನೆಯಾಗುವ ಸ್ಥಳದಲ್ಲಿ ಕಾಮಗಾರಿಯನ್ನು ಆರಂಬಿಸಿದರು ಸೂಚನಾಫಲಕವನ್ನು ಹಾಕಬೇಕೆಂಬ ಪರಿಜ್ಞಾನ ಗುತ್ತಿಗೆದಾರರಿಗಾಗಲಿ ಅಥವಾ ಸಂಬಂಧಪಟ್ಟ
ಅಧಿಕಾರಿಗಳಿಗಾಗಲಿ ಇಲ್ಲವೇ ಇಲ್ಲ. ಇನ್ನು ಇದೇ ಸ್ಥಳದಲ್ಲಿ ತಿರುವಿದೆ ಎಂದು ತಿಳಿಸುವ ಫಲಕಕ್ಕೆ ಬಳ್ಳಿ ಹಬ್ಬಿದ್ದು ಅದನ್ನದರು ತೆರವುಗೊಳಿಸಿದರೆ ಸಂಚಾರಿಗಳಿಗೆ ಆಗುವ ಅಪಘಾತ ಸ್ವಲ್ಪವಾದರು ಕಡಿಮೆಯಾಗುತ್ತದೆ.
ಜಾಲಾಕಿ ಗುತ್ತಿಗೆದಾರನಿಂದ ರಸ್ತೆಪಕ್ಕದ ಚರಂಡಿಗಳು ನಾಶ : ರಸ್ತೆ ನಿರ್ಮಿಸುವ ಗುತ್ತಿಗೆದಾರರು ಬಹುತೇಕ ಚಾಲಾಕಿಗಳೇ ಆಗಿದ್ದಾರೆ ಏಕೆಂದರೆ ರಸ್ತೆ ನಿರ್ಮಿಸಿದ ಮೇಲೆ ರಸ್ತೆಯ ಪಾರ್ಶ್ವಕ್ಕೆ ಮಣ್ಣನ್ನು ಹಾಕಲೇ ಬೇಕು ಇಲ್ಲದಿದ್ದರೆ ರಸ್ತೆ ಹಾಳಾಗುತ್ತದೆ. ಅದಕ್ಕಾಗಿ ರಸ್ತೆಗೆ ಬೇರೆಲ್ಲಿಂದಲೋ ಮಣ್ಣನ್ನು ತರಿಸಿ ಹಾಕಿದರೆ ಖರ್ಚು ಹೆಚ್ಚಾಗುತ್ತದೆ ಎನ್ನುವುದನ್ನು ಅರಿತ ಗುತ್ತಿಗೆದಾರ ರಸ್ತೆಯ ಪಕ್ಷದ ಚರಂಡಿಯನ್ನು ಬಿಡದೇ ಅಲ್ಲಿಯೇಸಿಗುವ ಮಣ್ಣನ್ನು ಹಿಟಾಚಿಯನ್ನು ಬಳಸಿ ತೆಗೆದು ರಸ್ತೆಯ ಪಾರ್ಶ್ವಗಳಿಗೆ ಹಾಕುತ್ತಿದ್ದಾರೆ ಈ ರೀತಿ ಮಣ್ಣು ಸಿಗದೇ ಹೋದರೆ ರಸ್ತೆಯ ಪಾರ್ಶ್ವಕ್ಕೆ ಮಣ್ಣನ್ನೇ ಹಾಕುವುದಿಲ್ಲ.
ಈ ರೀತಿಯಾಗಿ ಮಣ್ಣನ್ನು ಹಾಕುವುದರಿಂದ ಮಳೆಬಂದಾಗ ನೀರು ಸರಾಗವಾಗಿ ಹರಿಯದೇ ರಸ್ತೆಯೂ ಹಾಳಾಗುತ್ತದೆ. ಇಂತಹ ಕಾಮಗಾರಿಗಳು ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಬೆಚ್ಚನೆಯ ಕೋಣೆಯಲ್ಲಿ ಕುಳಿತು ಸಂಬಳವನ್ನು ಏಣಿಸುತ್ತಾ ಹೊರಗಿನ ವಿಷಯಗಳನ್ನು ತಿಳಿಸುಕೊಳ್ಳುವ ಗೋಜಿಗೆ ಹೋಗದೇ ಸಾರ್ವಜನಿಕರ ತೆರಿಗೆ ಹಣವನ್ನು ಪೋಲುಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈಗಲಾದರು ಸಂಬಂದಪಟ್ಟ ಇಲಾಖೆಯವರು ಮತ್ತು ಗುತ್ತಿಗೆದಾರರು ವಾಹನ ಸಂಚಾರರು ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಸೂಕ್ತ ರಸ್ತೆಗಳನ್ನು ನಿರ್ಮಸಿ ರಸ್ತೆಯ ಪಾರ್ಶ್ವಗಳಿಗೆ ಸೂಕ್ತವಾದ ಮಣ್ಣನ್ನು ಹಾಕಿಸಬೇಕು ಮುಖ್ಯವಾಗಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹತ್ತಿರ ಸೂಚನಾ ಫಲಕ ಗಳನ್ನು ಹಾಕಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
