ರಸ್ತೆ ವಿಳಂಬ: ಕಂಗಾಲಾದ ಕಾಲನಿ ಜನತೆ

ತುಮಕೂರು:

ತುಮಕೂರು ನಗರದ ಕೋತಿತೋಪು ಮತ್ತು ಹನುಮಂತಪುರದ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕಿತ್ತು ಅವ್ಯವಸ್ತೆ ಗೊಂಡಿದ್ದು, ಸಂಚರಿಸಲು ರಸ್ತೆ ಇಲ್ಲದೆ ಎನ್ ಆರ್ ಕಾಲೋನಿ ನಿವಾಸಿಗಳು ಕಂಗಾಲಾಗಿದ್ದಾರೆ. ರಸ್ತೆ ಬದಿ ಇರುವ ಮನೆಗಳ ಮುಂದೆ ಚರಂಡಿ ಮಾಡುವುದಕ್ಕಾಗಿ ಟ್ರಂಚ್ ಹೊಡೆದಿದ್ದು ಮನೆಯ ಕಾಂಪೌಂಡ್ ಗಳನ್ನು ಕಿತ್ತುಹಾಕಿ ನಮಗೆ ಸಂಚರಿಸಲು ದಾರಿ ಇಲ್ಲದಂತೆ ಮಾಡಿದ್ದಾರೆ. ಮಳೆ ಬಂದರೆ ನೀರು ನಿಂತು ಓಡಾಡುವುದಕ್ಕೆ ಆಗುವುದಿಲ್ಲ, ಮನೆಯ ಮುಂದಿರುವ ತೆಂಗಿನ ಮರಗಳು ಬೀಳುವಂತೆ ಮಾಡಿದ್ದಾರೆ ಮತ್ತು ಶಾಲಾ ಮಕ್ಕಳು ಓಡಾಡಕ್ಕೆ ತುಂಬಾ ಸಮಸ್ಯೆ ಆಗಿದ್ದೆ ಎಂದು ಎನ್ ಆರ್ ಕಾಲೋನಿ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮನೆಯಿಂದ ನಮಗೆ ಹೊರಬರಲು ಸಾಧ್ಯವಿಲ್ಲದಂತೆ ಮಾಡಿದ್ದಾರೆ. ಒಂದು ದಿನ ಯುಜಿಡಿ ಕಿತ್ತುಹಾಕಿದರೆ ಮತ್ತೊಂದು ದಿನ ಲೈಟನ್ನು ಕಿತ್ತು ಹಾಕುತ್ತಾರೆ ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ಸುರಿದಿದ್ದು ವಾಹನಗಳು ಸಂಚರಿಸುವಾಗ ಅವುಗಳ ದೂಳು ಮನೆಯ ತುಂಬೆಲ್ಲ ಹರಡುತ್ತಿದೆ ಅದಕ್ಕೆ ನೀರು ಸಹ ಹಾಕದೆ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಈ ದೂಳಿನಿಂದ ಕೊರೋನದದಂತಹ ಸಮಯದಲ್ಲಿ ಕಾಯಿಲೆ ಬಂದರೆ ನಮ್ಮ ಮಕ್ಕಳಿಗೆ ಯಾರು ಹೊಣೆ? ನಗರ ಪಾಲಿಕೆ ಆಯುಕ್ತರು ಬಂದು ಇದನ್ನು ಗಮನಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

ನಮ್ಮ ಕಾಲೋನಿಗೆ ಬರಬೇಕಾದರೆ ಹನುಮಂತ ಪುರದ ಒಳಗಿಂದ ಸುತ್ತಿಕೊಂಡು ಬರಬೇಕು ಆದ್ದರಿಂದ ಬೇಗನೆ ರಸ್ತೆ ಕಾಮಗಾರಿಯನ್ನು ಮುಗಿಸಿ ನಮಗೆ ಸಂಚರಿಸಲು ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಲ್ಲಿ ಮಾನವಿ ಮಾಡಿಕೊಂಡಿದ್ದಾರೆ. ಈ ಜನರ ಸಮಸ್ಯೆಯನ್ನು ಆದಷ್ಟು ಬೇಗೆನೆ ಬಗೆಹರಿಬೇಕು ಎಂಬುದು ಆಶಯವಾಗಿ.

ಸ್ಮಾರ್ಟ್ ಸಿಟಿ ಕಾಮಗಾರಿ ಶುರುವಾಗಿ ಒಂದುವರೆ ತಿಂಗಳಾಗಿದ್ದು ರಸ್ತೆಯಲ್ಲಿ ಯಾರು ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ. ದಲಿತರು ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೋ ಏನೋ ತಿಳಿಯುತ್ತಿಲ್ಲ. ಒಂದು ವಾಹನಗಳೂ ಸಹ ಕೋತಿ ತೋಪು ನಿಂದ ಹನುಮಂತಪುರ ಕಡೆ ರಸ್ತೆ ಅಸ್ತವ್ಯಸ್ಥೆ ಮಾಡಿದ್ದಾರೆ. ಸತ್ತರೂ ಒಂದು ಹೆಣವನ್ನು ರಸ್ತೆಯಿಂದಾಚೆಗೆ ಕೊಂಡೊಯ್ಯಲು ಸಾಧ್ಯವಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.

ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಗಮನಹರಿಸುತ್ತಿಲ್ಲ ಒಂದೇ ಒಂದು ಸೈಕಲ್, ಬೈಕ್ ಅಥವಾ ಆಟೋ ಯಾವುದು ಸಹ ಸಂಚರಿಸಲು ಸಾಧ್ಯವಾಗುತ್ತಿಲ್ಲ ಹಾಗೆ ಮಾಡಿದ್ದಾರೆ ದಯಮಾಡಿ ಸ್ಮಾರ್ಟ್ ಸಿಟಿ ಯೋಜನೆ ಯವರು ಈ ಸಮಸ್ಯೆಯನ್ನು ಬೇಗನೆ ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡರು.

-ಕಿರಣ್ ಕುಮಾರ್, 20ನೇ ವಾರ್ಡ್ ನಿವಾಸಿ

ನಮ್ಮ ಮನೆಗೆ ಆರು ತಿಂಗಳಿಂದ ನೀರು ಬಿಟ್ಟಿಲ್ಲ. ಮನೆಯ ಮುಂದೆ ಚರಂಡಿ ಹೊಡೆದು ಹೊರಗಡೆ ಬರದಂತಾಗಿದೆ ನೀವು ಕಾಮಗಾರಿ ಮಾಡುತ್ತಿರುವುದು ಸರಿ ಇದೆ. ಆದರೆ ನಾವು ಮನೆಯಲ್ಲಿರುವುದು ಹೇಗೆ ಮನೆಯ ಮುಂದೆ ತೆಂಗಿನ ಮರಗಳ ಬುಡಕ್ಕೆ ಚರಂಡಿ ಹೊಡೆದು ಮರಗಳು ಬೀಳುವಂಥ ಸ್ಥಿತಿಗೆ ಬಂದಿದೆ. ರಸ್ತೆಯ ಕಾಮಗಾರಿಯನ್ನು ಸರಿಯಾಗಿ ಮಾಡುತ್ತಿಲ್ಲ.

ರಸ್ತೆಯ ಎರಡು ಬದಿಯಲ್ಲಿ ಕಿತ್ತುಹಾಕಿ ಹಾಗೆ ಬಿಟ್ಟಿದ್ದಾರೆ. ಯುವಕರೇ ಈ ರಸ್ತೆಯಲ್ಲಿ ಸಮಚರಿಸಲು ಸಾಧ್ಯಗುತ್ತಿಲ್ಲ ಅಂತಹದರಲ್ಲಿ ವಯಸ್ಸಾದವರು ಹೇಗೆ ಓಡಾಡಬೇಕು.? ದಯವಿಟ್ಟು ಬೇಗನೆ ಈ ಸಮಸ್ಯೆಯಿಂದ ನಮಗೆ ಮುಕ್ತಿ ಕೊಡಿಸಿ ಎಂದರು.

– ನಿವಾಸಿ ಸೌಭಾಗ್ಯ ಎನ್ ಆರ್ ಕಾಲೋನಿಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap