ಚುನಾವಣಾ ಪ್ರಚಾರದ ರೋಡ್ ಮ್ಯಾಪ್ ಸಿದ್ದಪಡಿಸಿದ್ದೇವೆ: ಸಿಎಂ ಬಸವರಾಜ ಬೊಮ್ಮಾಯಿ

 ದೆಹಲಿ:

      ಚುನಾವಣಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ರೋಡ್ ಮ್ಯಾಪ್ ಸಿದ್ದ ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.

     ನವದೆಹಲಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ನಾವು ಸುದೀರ್ಘ ಸಭೆ ಮಾಡಿದ್ದೇವೆ. ಅವಶ್ಯಕ ಅಂಶಗಳನ್ನು ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಯಡಿಯೂರಪ್ಪ ನವರು ಎಲ್ಲಾ ಮೀಟಿಂಗ್ ನಲ್ಲೂ ಸಹ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಅಧ್ಯಕ್ಷರನ್ನು ಸಹ ಭೇಟಿಯಾಗಿ ಅವರ ವೈಯಕ್ತಿಕ ಅಭಿಪ್ರಾಯ ನೀಡಿದ್ದಾರೆ. ನಾವು ಸುದೀರ್ಘವಾದ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

    ಚುನಾವಣಾ ಸಂದರ್ಭದಲ್ಲಿ ಹೇಗೆಲ್ಲ ಕಾರ್ಯ ನಿರ್ವಹಿಸಬೇಕು ಅಂತ ರೋಡ್ ಮ್ಯಾಪ್ ಸಿದ್ದಪಡಿಸಿದ್ದೇವೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದಮೇಲೆ ನಾಳೆ (ಮಂಗಳವಾರ) ತಡ ರಾತ್ರಿ ಅಥವಾ ನಾಡಿದ್ದು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

     ಇದೇ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಶಿಗ್ಗಾವಿದಲ್ಲಿ ಸ್ಪರ್ಧೆ ಮಾಡುತ್ತೇನೆ. ಬೇರೆ ಕ್ಷೇತ್ರಕ್ಕೆ ಹೋಗೋ ಪ್ರಶ್ನೆಯೇ ಇಲ್ಲಾ ಎಂದರು. ಅಲ್ಲದೇ ಹಾಲಿ ಶಾಸಕರಿಗೆ ಕೊಕ್ ನೀಡಲಾಗುತ್ತದೆ ಅನ್ನುವುದು ಉಹಾಪೂಹಾ‌ ನಮ್ಮ ಬಿಜೆಪಿಯಲ್ಲಿ ಕೆಲವು ಮಾನದಂಡಗಳಿವೆ. ಅದೇ ಪ್ರಕಾರ ನಾವು ಕೆಲಸ ಮಾಡುತ್ತೇವೆ ಎಂದರು. 

      ಭ್ರಷ್ಟಾಚಾರ ಆರೋಪಿಗಳಿಗೆ, ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡವರಿಗೆ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಕೆಲವು ವಿಷಯಗಳ ಬಗ್ಗೆ ಸ್ಪಷ್ಟತೆ ಇದೆ. ಅದರ ರೀತಿಯಲ್ಲೇ ಟಿಕೆಟ್ ಅಂತಿಮ ಆಗುತ್ತದೆ. ಎಲ್ಲ ಮಾನದಂಡದ ಬಗ್ಗೆ ಚರ್ಚೆ ಆಗಿದೆ, ಈ ಬಗ್ಗೆಯೂ ಚರ್ಚೆ ಆಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

Recent Articles

spot_img

Related Stories

Share via
Copy link
Powered by Social Snap