ಬೆಂಗಳೂರು:
ಇದೇ ಮಾರ್ಚ್ ತಿಂಗಳಲ್ಲಿ ಅನಾವಣಗೊಳ್ಳಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಎಕ್ಸ್‌ಪ್ರೆಸ್‌ವೇ ಪಕ್ಕದ ರಸ್ತೆಗಳು ಹದಗೆಟ್ಟಿದ್ದು ಇನ್ನೂ ಉದ್ಗಾಟನೆಗೂ ಮುನ್ನವೇ ಈ ಗತಿಯೇ ಎಂದು ಮೇಲುಕೋಟೆ ಶಾಸಕ ಪುಟ್ಟರಾಜು ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕರು, ‘ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ನಲ್ಲಿ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸುವ ನಿರೀಕ್ಷೆಯಿದೆ. ಆದರೆ ಹೈವೇ ಪಕ್ಕದ ರಸ್ತೆಗಳು ಹದಗೆಟ್ಟಿವೆ ಎಂದಿದ್ದಾರೆ.
ನನ್ನ ಕ್ಷೇತ್ರದ ರಸ್ತೆಗಳಲ್ಲಿ ಭಾರೀ ವಾಹನಗಳು ಅಪಾರ ಪ್ರಮಾಣದಲ್ಲಿ ಕಚ್ಚಾ ವಸ್ತು ಮತ್ತಿತರ ವಸ್ತಗಳನ್ನು ಸಾಗಾಟ ಮಾಡುತ್ತಿರುವುದರಿಂದ ರಸ್ತೆಗಳು ಹದಗೆಡುತ್ತಿವೆ. ರಸ್ತೆ ನಿರ್ಮಿಸಿದವರೇ ಇದನ್ನು ದುರಸ್ತಿಗೊಳಿಸಬೇಕು ಎಂದಿದ್ದಾರೆ.
ಮೇಲುಕೋಟೆಯಲ್ಲಿ ಶೀಘ್ರದಲ್ಲೇ ಪ್ರಸಿದ್ಧ ವೈರಮುಡಿ ಉತ್ಸವವನ್ನು ಆಯೋಜಿಸುತ್ತದೆ. ಸಾವಿರಾರು ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿದ್ದರೆ, ಭಕ್ತರಿಗೆ ಅನಾನುಕೂಲತೆ ಉಂಟಾಗುತ್ತದೆ, ಹೀಗಾಗಿ ರಸ್ತೆ ರಿಪೇರಿ ಮಾಡಿಸಬೇಕು ಎಂದಿದು ಹೇಳಿದ್ದಾರೆ.