ಎಸ್ಟಿ\ಎಸ್ಟಿ ಸಮುದಾಯಗಳ ಬಜೆಟ್ ಹಣದ ದುರುಪಯೋಗ ಕುರಿತು ದುಂಡು ಮೇಜಿನ ಸಭೆ

ದಲಿತ ಸಂಘಟನೆಗಳ ಒಕ್ಕೂಟದಿಂದ ದುಂಡು ಮೇಜಿನ ಸಭೆ

 

 ಬೆಂಗಳೂರು;

    ಕಾಂಗ್ರೆಸ್ ಸರ್ಕಾರದ ತಮ್ಮ ಎರಡು ಅವಧಿಯ 2023-24 ಮತ್ತು 2024-25ರ ಆಯ-ವ್ಯಯದಲ್ಲಿ ತಾವು ರಾಜ್ಯದ ಜನತೆಗೆ ನೀಡಿರುವ ಚುನಾವಣಾ ಆಶ್ವಾಸನೆಯ ಗ್ಯಾರಂಟಿಗಳಿಗೆ ಆಯ-ವ್ಯಯದಲ್ಲಿ ಹಣವನ್ನು ಮೀಸಲಿಟ್ಟಿದ್ದರೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ರೂಪಿಸಲಾದ ಎಸ್. ಸಿ. ಎಸ್ .ವಿ/ ಟಿ. ಎಸ್. ಪಿ ವಿಶೇಷ ಯೋಜನೆಯಲ್ಲಿ ರೂ 11,144.00 + 14,282.38 = ರೂ. 25,426.38 ಕೋಟಿ ಹಣವನ್ನು ಕಾನೂನು ಬಾಹಿರವಾಗಿ ಅನ್ಯ ಯೋಜನೆಗಳಿಗೆ ಅರ್ಥಾತ್ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾಗಿ ತಾವೇ ಒಪ್ಪಿಕೊಂಡಿದ್ದೀರಿ.

    ಈ ವಿಚಾರದ ಕುರಿತು ನಾನು ಸದನದಲ್ಲಿ ಹಲವಾರು ಬಾರಿ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಹಾಗೂ ಚರ್ಚೆಗಳ ಸಂದರ್ಭದಲ್ಲಿ ಈ ಹಣವನ್ನು ಗ್ಯಾರಂಟಿಗಳಿಗೆ ಬಳಸಿರುವುದಾಗಿ ಸರ್ಕಾರವು ಒಪ್ಪಿರುತ್ತದೆ. ಆಯವ್ಯಯದಲ್ಲಿ ರೂ. 52,000.00 ಕೋಟೆಗಳಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಳಿಗಾಗಿ ತಾವು ಮೀಸಲಿಟ್ಟ ಮೇಲೆ ಎಸ್.ಸಿ.ಎಸ್ ಪಿ/ಟಿ.ಎಸ್.ಪಿ ಯೋಜನೆಯ ರೂ. 25,426.38 ಕೋಟಿ ಎಲ್ಲಿ ವಿನಿಯೋಗಿಸಲಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

    ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಮೀಸಲಿಟ್ಟ ಮೇಲೆ ಪರಿಶಿಷ್ಯರಿಗಾಗಿ ಮೀಸಲಿಟ್ಟ ರೂ. 25,426.38 ಕೋಟಿ ಹಣ ತೆಗೆಯುವ ಅವಶ್ಯಕತೆಯೇ ಇರಲಿಲ್ಲ. ಒಂದು ವೇಳೆ ಪರಿಶಿಷ್ಯರಿಗಾಗಿ ಮೀಸಲಿಟ್ಟ ಹಣದಲೇ ಗ್ಯಾರಂಟಿ ಯೋಜನೆಗಳಲ್ಲಿ ಅವರಿಗೆ ಹಣ ವ್ಯಯಿಸುವುದಾದರೆ ಆಯ ವ್ಯಯದಲ್ಲಿ ಮೀಸಲಿಟ್ಟ ರೂ. 52,000.00 ಕೋಟಿಗೂ ಹೆಚ್ಚು ಹಣ ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ? ಪ್ರಶ್ನೆ ಏನೆಂದರೆ, ತಾವು ಆಯ-ವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣಕ್ಕೆ ಪರಿಶಿಷ್ಯರು ಭಾಗ್ಯರಲ್ಲವೇ ಎಂಬ ಅನುಮಾನ ಸಹ ಮೂಡುತ್ತದೆ.

    ಹೀಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಲ್ಲಿ ಎಸ್.ಸಿ.ಎಸ್.ಪಿ/ಟಿಎ.ಪಿ ವಿಶೇಷ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿರುವ ಕುರಿತು ಅನೇಕ ಪ್ರಶ್ನೆಗಳಿವೆ. ಐತಿಹಾಸಿಕವಾಗಿ ಹಿಂದುಳಿದವರನ್ನು ಮೇಲಸ್ಸರಕ್ಕೆ ತರಲು ಹಾಗೂ ಅವರು ಅರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಈಗಲಾದರು ಮುಂದೆ ಬರಬೇಕು. ಇಲ್ಲದಿದ್ದಲ್ಲಿ ಅವರ ಸರ್ವಾಂಗೀಣ ಅಭಿವೃದ್ಧಿಯು ಕುಂಠಿತವಾಗುವುದಿಲ್ಲವೇ? ಅವರ ಬಡತನವನ್ನು ಹಾಗೂ ಅಸಹಾಯಕತೆಯನ್ನುಸರ್ಕಾರವೇ ನೇರವಾಗಿ ಯಥಾಸ್ಥಿತಿಯಲ್ಲಿ ಮುಂದುವರಿಸಿದಂತೆ ಆಗುವುದಿಲ್ಲವೇ? ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಬೇಕಲ್ಲವೇ? ಅವರಿಗಾಗಿ ವಿಶೇಷ ಯೋಜನೆಗಳನ್ನು ತಯಾರಿಸಿ ಅನುಷ್ಠಾನ ಮಾಡಲು ಹಿಂಜರಿಯುತ್ತಿರುವುದೇಕೆ? ಗ್ಯಾರಂಟಿಯಂತಹ ಯೋಜನೆಗಳಿಂದ ಅವರ ಮಾನವ ಸಹಜ ಕೌಶಲ್ಯಗಳಿಗೆ ಹೇಗೆ. ಅಭಿವೃದ್ಧಿಯಾಗುತ್ತದೆ? ಎಂದು ಪ್ರಶ್ನೆ ಮಾಡುವುದರ ಮೂಲಕ ದಲಿತ ಸಂಘಟನೆಗಳ ಒಕ್ಕೂಟದಿಂದ ದುಂಡು ಮೇಜಿನ ಸಭೆಯಲ್ಲಿ ಅಧ್ಯಕ್ಷರಾದ ಡಾ. ಎಂ ವೆಂಕಟಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಶ್ರೇಯೋಭಿವೃದ್ಧಿಗೆ ವಿಶೇಷವಾಗಿ ತಯಾರಿಸಿದ SCSP/TSP ಯೋಜನೆಯ ಪ್ರಮುಖ ಉದ್ದೇಶ ಈ ಸಮುದಾಯಗಳ ಶಿಕ್ಷಣ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುವುದು.

   ಆದರೆ, ಈ ಯೋಜನೆಗಳಿಗಾಗಿ ಮೀಸಲಾಗಿರುವ ಹಣವನ್ನು ಇತರ ಯೋಜನೆಗಳಿಗೆ ಬಳಸುವ ಪ್ರಕ್ರಿಯೆಯು ತಳ ಸಮುದಾಯಗಳ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡುತ್ತದೆ. ಅನ್ನ ಯೋಜನೆಗಳಿಗೆ SCSP / TSP ಹಣವನ್ನು ಬಳಕೆ ಮಾಡಿದರೆ ಈ ಸಮುದಾಯಗಳ ಮೇಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇನ್ನೂ ಗಟ್ಟಿಯಾಗುತ್ತದೆ. ಇಂತಹ ಕಾರಣಗಳಿಂದ ಪರಿಶಿಷ್ಯರ ಶ್ರೇಯೋಭಿವೃದ್ಧಿಗೆ ತೀವ್ರ ಆಘಾತವುಂಟಾಗುತ್ತದೆ.

    SCSP ಮತ್ತು TSP ಯೋಜನೆಗಳು ಸಂವಿಧಾನ ಬದ್ಧವಾಗಿ ಪರಿಶಿಷ್ಟ ಜನಾಂಗಗಳ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿವೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆ, ಶಿಕ್ಷಣದ ಪ್ರೋತ್ಸಾಹ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮೂಲಭೂತ ಸೌಲಭ್ಯಗಳ ಒದಗಿಸುವಿಕೆ ಈ ಯೋಜನೆಗಳ ಪ್ರಧಾನ ಉದ್ದೇಶಗಳು, ಇವುಗಳಿಗೆ ಮೀಸಲಾಗಿರುವ ಹಣವನ್ನು ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಬಳಸಿದರೆ ಮಾತ್ರ ಸದೃಲಿತಾಂಶ ದೊರೆಯುತ್ತದೆ ಹಾಗೂ ಅವರು ಬೆಳವಣಿಗೆಯ ಹಾದಿಗೆ ತಲುಪಲು ನೆರವಾಗುತ್ತದೆ.

     SCSP ಮತ್ತು TSP ಯೋಜನೆಗಳು ಪರಿಶಿಷ್ಯರ ಶ್ರೇಯೋಭಿವೃದ್ಧಿಗೆ ಜೀವಾಳವಾಗಿವೆ. ಈ ಯೋಜನೆಗಳ ಹಣವನ್ನು ಅನ್ನ ಯೋಜನೆಗಳಿಗೆ ಬಳಸುವುದು ಈ ಸಮುದಾಯಗಳ ಅಭಿವೃದ್ಧಿಯನ್ನು ಮೊಟಕುಗೊಳಿಸುತ್ತದೆ. ಆದ್ದರಿಂದ, ಸರ್ಕಾರವು ಈ ಯೋಜನೆಗಳ ನಿಧಿಗಳನ್ನು ಗುರಿ ಮಾಡಿದ ಉದ್ದೇಶಗಳಿಗೆ ಮಾತ್ರ ಬಳಸುವಂತಾಗಬೇಕು ಇದರಿಂದ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

      ಪರಿಶಿಷ್ಯರ ಶ್ರೇಯೋಭಿವೃದ್ಧಿಗೆ ಮೀಸಲಾಗಿರುವ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಅವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನಡೆಯಲು ಸಾಧ್ಯ. ಈ ಸಮುದಾಯಗಳ ಅಭಿವೃದ್ಧಿಗೆ ಕೈಜೋಡಿಸಿದಾಗ ಸಮತೋಲನವಾದ ಮತ್ತು ನ್ಯಾಯಸಮ್ಮತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.

     ತಮ್ಮ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಜಾ /ಪ.ಪಂ ಜನರು ಕೂಡ ಇದ್ದಾರೆ, ಆದ್ದರಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಮೀಸಲು ಹಣವನ್ನು ಖರ್ಚು ಮಾಡುವುದು ಸರಿ ಎಂಬ ನಿಮ್ಮ ವಾದವು ಚರ್ಚಾಸ್ಪದವಾದುದು ಅಲ್ಲದೇ ಅನುಮಾನಾಸ್ಪದವಾದುದು ಹಾಗೂ ಅನ್ಯಾಯದ ಮಾರ್ಗದಲ್ಲಿ ಮುನ್ನಡೆಯುತ್ತದೆ ಎಂದು ಮನಗಾಣಬೇಕಿದೆ.

    ಆದ್ದರಿಂದ ಮಾನ್ಯರಲ್ಲಿ ನನ್ನ ಈಗಿನ ಮನವಿ ಏನೆಂದರೆ, 2025-26ನೇ ಆಯ-ವ್ಯಯದಲ್ಲಿ ಪರಿಶಿಷ್ಯರ ಶ್ರೇಯೋಭಿವೃದ್ಧಿಗಾಗಿ ಮೀಸಲಿಡಲಾದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನು ದಯಮಾಡಿ ಗ್ಯಾರಂಟಿಗಳಿಗೆ ಬಳಸದೇ ವರಿಶಿಷ್ಟರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಆಗ್ರಹಪಡಿಸುವುದರ ಜೊತೆಗೆ ಗ್ಯಾರಂಟಿಗಳಿಗೆ ಆಯ-ವ್ಯಯದಲ್ಲಿ ಮೀಸಲಿಟ್ಟಿರುವ ಹಣದಲ್ವೇ ಗ್ಯಾರಂಟಿ ಯೋಜನೆಗಳಲ್ಲಿ ಫಲಾನುಭವಿಯಾಗಿರುವ ಪ.ಜಾ/ಪ.ಪಂ ದವರಿಗೆ ವ್ಯಯಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು. 

  ದಲಿತ ಸಂಘಟನೆಗಳ ಒಕ್ಕೂಟದಿಂದ ದುಂಡು ಮೇಜಿನ ಸಭೆಯಲ್ಲಿ ಅಧ್ಯಕ್ಷರಾದ ಡಾ. ಎಂ ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ವೆಂಕಟರಾಮಣಪ್ಪ, ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಜಿಕೆ ಗೋಪಾಲ್, ರಾಮಚಂದ್ರರೆಡ್ಡಿ, ರೂಪಕಲ ಸೇರಿದಂತೆ ಅನೇಕ ಸಂಘಟನೆಗಳ ನಾಯಕರು ಸಭೆಯಲ್ಲಿ ಭಾಗವಹಿಸಿದರು.

Recent Articles

spot_img

Related Stories

Share via
Copy link