ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್ ಅಗತ್ಯ

ತುಮಕೂರು:

          ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸರ್ಕಾರ: ಹೆಚ್.ಡಿ.ಕೆ. ಕಿಡಿ

ಕೋವಿಡ್ ನಂತರದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರ ವ್ಯತ್ಯಯ ಉಂಟಾಗಿದೆ. ಸರ್ಕಾರ ಇತ್ತ ಗಮನ ಹರಿಸದ ಪರಿಣಾಮವಾಗಿ ಅಪಘಾತಗಳು ಸಂಭವಿಸುತ್ತಿವೆ. ಪಾವಗಡದಲ್ಲಿ ಆಗಿರುವ ದುರಂತಕ್ಕೆ ಸರ್ಕಾರವೆ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ನಂತರದಲ್ಲಿ ಬಹಳಷ್ಟು ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಹಿಂದೆಯೇ ಕೆ.ಎಸ್.ಆರ್.ಟಿ.ಸಿ. ನೌಕರ ವರ್ಗ ಪ್ರತಿಭಟನೆಗೆ ಇಳಿದ ಹಿನ್ನೆಲೆಯಲ್ಲಿ ಕೆಲವರನ್ನು ಅಮಾನತು ಮಾಡಲಾಯಿತು. ಕೋವಿಡ್ ನೆಪ ಹೇಳಿಕೊಂಡು ನಷ್ಟದ ಹಾದಿಯಲ್ಲಿದೆ ಎಂದು ಹೇಳಿ ಸರ್ಕಾರ ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಾಗಿ ಹಾಕುತ್ತಿಲ್ಲ. ಇದರಿಂದಾಗಿ ಹೆಚ್ಚು ಒತ್ತಡವಾಗುತ್ತಿದೆ ಎಂದರು.

ಹಳ್ಳಕ್ಕೆ ಬಿದ್ದ ಬಸ್ : 7 ವಿದ್ಯಾರ್ಥಿಗಳ ದುರ್ಮರಣ

ಗ್ರಾಮೀಣ ಪ್ರದೇಶಗಳಲ್ಲಿ ಬಸ್‍ಗಳ ಕೊರತೆ ಹೆಚ್ಚುತ್ತಿದೆ. ಬಸ್ ಓಡಿಸಿ ಎಂದು ಎಷ್ಟೇ ಒತ್ತಡ ಹಾಕಿದರೂ ಅದು ಈಡೇರುತ್ತಿಲ್ಲ. ಕೆ.ಎಸ್.ಆರ್.ಟಿ.ಸಿ. ಬಸ್‍ಗಳ ಕೊರತೆ ಖಾಸಗಿ ಬಸ್‍ಗಳ ಮೇಲೆ ಬೀಳುತ್ತಿದೆ. ಇದರಿಂದಾಗಿ ಓವರ್ ಲೋಡ್ ಆಗುತ್ತಿದೆ. ಪಾವಗಡದಲ್ಲಿ ಆಗಿರುವುದೂ ಸಹ ಅದೇ. ಇತ್ತೀಚೆಗೆ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡು ಖಾಸಗಿ ಬಸ್‍ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸಹಜವಾಗಿಯೇ ಪ್ರಯಾಣಿಕರು ಈ ಬಸ್‍ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಹತ್ತಿದ್ದಾರೆ. ಓವರ್ ಲೋಡ್ ಪರಿಣಾಮ ಅಪಘಾತ ಸಂಭವಿಸಿದೆ. ಸರ್ಕಾರ ಎಚ್ಚೆತ್ತುಕೊಂಡು ಬಸ್‍ಗಳ ವ್ಯವಸ್ಥೆ ಮಾಡಬೇಕಿತ್ತು ಎಂದವರು ತಿಳಿಸಿದರು.

ಪಾವಗಡ ಪ್ರದೇಶ ಅತ್ಯಂತ ಹಿಂದುಳಿದ ಪ್ರವೇಶವಾಗಿದೆ. ಬಸ್‍ಗಳಲ್ಲಿ ಸಂಚರಿಸುತ್ತಿದ್ದವರೆಲ್ಲ ಬಡವರೇ ಆಗಿದ್ದಾರೆ. ಅದರಲ್ಲೂ 25 ರಿಂದ 30 ಮಂದಿ ವಿದ್ಯಾರ್ಥಿಗಳಿದ್ದಾರೆ. ಬಹಳಷ್ಟು ಮಂದಿ ಪರೀಕ್ಷೆಗೆ ತೆರಳುತ್ತಿದ್ದವರು ಇದ್ದಾರೆ. ಈ ತಿಂಗಳ 25 ರಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದವರೂ ಇದ್ದಾರೆ. ಅವರೆಲ್ಲ ಈಗ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿದ್ದಾರೆ. ಸರ್ಕಾರ ಮೃತಪಟ್ಟಿರುವ ಮಕ್ಕಳಿಗೆ 25 ಲಕ್ಷ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

 ಏ. 1 ರಿಂದಲೇ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಿಎಂ ಸೂಚನೆ

ಸರ್ಕಾರ ಯಾವುದ್ಯಾವುದೋ ಯೋಜನೆಗಳಿಗೆ ಹಣ ಖರ್ಚು ಮಾಡುತ್ತದೆ. ಕೆಲವೊಮ್ಮೆ ಮೃತಪಟ್ಟ ವ್ಯಕ್ತಿಗಳಿಗೆ 25 ಲಕ್ಷ ಕೊಡುತ್ತದೆ. ಇದೇ ನಿಯಮವನ್ನು ಇಂತಹ ಬಡ ಮಕ್ಕಳಿಗೂ ಅನ್ವಯಿಸಬೇಕಲ್ಲವೆ? ಎಂದ ಅವರು, ಪರೀಕ್ಷೆ ಬರೆಯಲು ಸಿದ್ಧರಾಗಿರುವ ಮಕ್ಕಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿ ಸರ್ಕಾರದ್ದಾಗಿದ್ದು, ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಅಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, 23ನೇ ವಾರ್ಡ್ ಪಾಲಿಕೆ ಸದಸ್ಯ ಟಿ.ಕೆ.ನರಸಿಂಹಮೂರ್ತಿ, ಗುಬ್ಬಿ ನಾಗರಾಜ್ ಇತರೆ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು.

ಕೋವಿಡ್ ನಂತರ ಕೆ.ಎಸ್.ಆರ್.ಟಿ.ಸಿ.ಬಸ್‍ಗಳ ಸಂಚಾರ ಗ್ರಾಮೀಣ ಪ್ರದೇಶಗಳಲ್ಲಿ ವಿರಳವಾಗಿದೆ. ವಾಸ್ತವವಾಗಿ ಹೆಚ್ಚು ಬಸ್‍ಗಳು ಬೇಕಾಗಿದೆ. ಸರ್ಕಾರ ಲಾಭ-ನಷ್ಟದ ಲೆಕ್ಕಾಚಾರದಲ್ಲಿದೆ. ಸರ್ಕಾರದ ಹಣ ಕೆಲವೊಂದು ಬಾಬತ್ತುಗಳಿಗೆ ದುರುಪಯೋಗವಾಗುತ್ತಿರುವುದು ಗುಟ್ಟಾಗೇನಿಲ್ಲ. ಸಾರ್ವಜನಿಕ ಅನುಕೂಲದ ಸಾರಿಗೆ ಸಂಚಾರಕ್ಕೆ ನಷ್ಟದ ನೆಪವೊಡ್ಡಿ ಬಸ್‍ಗಳನ್ನು ಸ್ಥಗಿತಗೊಳಿಸುವುದು ಬೇಡ. ಹೆಚ್ಚು ಬಸ್‍ಗಳನ್ನು ಓಡಿಸುವ ಮೂಲಕ ಸಾರ್ವಜನಿಕ ಬದುಕಿಗೆ ಸರ್ಕಾರ ಮುಂದಾಗಲಿ.

-ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link