ಬಾಗಲಕೋಟೆ:
ರಷ್ಯಾ-ಯೂಕ್ರೇನ್ ಸಂಘರ್ಷ ಮುಂದುವರೆದಿದ್ದು, ಇದರ ನಡುವೆ ಯೂಕ್ರೇನ್ ಗಡಿಯಲ್ಲಿ ಸೈನಿಕರು ಭಾರತೀಯರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಹರಿದಾಡುತ್ತಿದೆ.
ಬಾಗಲಕೋಟೆ ಜಿಲ್ಲೆಯ ಕಿರಣ ಸವದಿ ಮತ್ತು ಅಶ್ವತ್ ಗುರವ ಎಂಬ ವಿದ್ಯಾರ್ಥಿಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಲಗೇಜ್ ತೆಗೆದುಕೊಂಡು ಗಡಿಯಲ್ಲಿ ಬಂದವರ ಮೇಲೆ ಸೈನಿಕರು ಹಲ್ಲೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಹಲ್ಲೆ ಮಾಡುತ್ತಿರುವವರು ಯಾರು, ಯಾವ ಸ್ಥಳ ಅಂತ ಗೊತ್ತಾಗುತ್ತಿಲ್ಲ. ಆದರೆ ಹಲ್ಲೆ ನಡೆಯುತ್ತಿದೆ ಎಂದು ಈ ಇಬ್ಬರು ವಿದ್ಯಾರ್ಥಿಗಳು ಹೇಳಿದ್ದಾರೆ. ಕಿರಣ ಸವದಿ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದವರಾಗಿದ್ದು, ಅಶ್ವತ್ ಗುರವ ಜಗದಾಳ ಗ್ರಾಮದ ನಿವಾಸಿ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
