ವಾಷಿಂಗ್ಟನ್:
ರಷ್ಯಾ-ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧ 22ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ಉಕ್ರೇನ್‌ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ಉಪಕರಣಗಳ ಸಹಾಯ ಮಾತ್ರ ಎಲ್ಲರಿಗೂ ಬೆರುಗು ಮೂಡವಂತೆ ಮಾಡಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಹೆಚ್ಚಿನ ಮಿಲಿಟರಿ ನೆರವಿಗಾಗಿ ಯುಎಸ್ ಕಾಂಗ್ರೆಸ್‌ಗೆ ಭಾವನಾತ್ಮಕ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ ಅಧ್ಯಕ್ಷ ಜೋ ಬೈಡೆನ್ ಸಹಾಯಕ್ಕೆ ಧಾವಿಸಿದ್ದಾರೆ.
ಹೊಸ 800 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರಗಳ ನೆರವಿನ ಪ್ಯಾಕೇಜ್ ಅಮೆರಿಕ ಘೋಷಿಸಿದೆ. ಈ ಶಸ್ತ್ರಾಸ್ತ್ರಗಳನ್ನು ಉಕ್ರೇನಿಯನ್ ಮಿಲಿಟರಿ ಈಗಾಗಲೇ ರಷ್ಯನ್ನರ ವಿರುದ್ಧ ಪರಿಣಾಮಕಾರಿಯಾಗಿ ಬಳಸುತ್ತಿದೆ. ರಷ್ಯಾದ ಪಡೆಗಳು ಉಡಾಯಿಸುತ್ತಿರುವ ಕ್ಷಿಪಣಿಗಳ ಅಗಾಧ ದಾಳಿಯಿಂದ ನಗರಗಳನ್ನು ರಕ್ಷಿಸಲು ತುರ್ತಾಗಿ ಅಗತ್ಯವಿರುವ ವಾಯು ರಕ್ಷಣಾ ವ್ಯವಸ್ಥೆಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬಿಟ್ಟ ಆದಿತ್ಯ ರಾವ್‌ಗೆ 20 ವರ್ಷ ಜೈಲು ಶಿಕ್ಷೆ ..!
ಉಕ್ರೇನಿಯನ್ನರು ಬಳಸಲು ತಿಳಿದಿರುವ ವ್ಯವಸ್ಥೆಗಳನ್ನು ಮಾತ್ರ ಅಮೆರಿಕ ಕೀವ್ ರಕ್ಷಣಾ ಪಡೆಗಳಿಗೆ ಒದಗಿಸುತ್ತಿದೆ. ಕೆಲ ಕ್ಷಿಪಣಿ ಬಳಸುವ ಬಗ್ಗೆ ಈಗಾಗಲೇ ಉಕ್ರೇನಿಯನ್ನರು ತರಬೇತಿ ಪಡೆದಿದ್ದಾರೆ ಮತ್ತು ಬಳಸಲು ಸಜ್ಜುಗೊಂಡಿದ್ದಾರೆ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
ರಷ್ಯಾದ ನಿರ್ಮಿತ ಮಿಗ್ – 29 ಫೈಟರ್ ಜೆಟ್‌ಗಳು ಯುಎಸ್ ಮೂಲಕ ಉಕ್ರೇನ್‌ಗೆ ನೀಡುವುದು ಮತ್ತು ಉಕ್ರೇನ್‌ನಲ್ಲಿ ಹಾರಾಟ – ನಿಷೇಧ ವಲಯ ಸ್ಥಾಪನೆ. ಇವು ಉಕ್ರೇನ್ ಸಹಾಯದ ಪಟ್ಟಿಯಿಂದ ಹೊರಗುಳಿದಿವೆ.
ಈ ಎರಡು ವಿಷಯಗಳ ಬಗ್ಗೆ ಝೆಲೆನ್ಸ್‌ಕಿ ಪದೇ ಪದೆ ವಿನಂತಿಸಿದ್ರೂ ಯುಎಸ್ ಮತ್ತು ನ್ಯಾಟೋ ದೃಢವಾಗಿ ತಿರಸ್ಕರಿಸಿವೆ. ಈ ಸೌಲಭ್ಯಗಳನ್ನು ಉಕ್ರೇನ್‌ಗೆ ನೀಡಿದರೆ, ರಷ್ಯಾದೊಂದಿಗೆ ವ್ಯಾಪಕ ಯುದ್ಧವನ್ನು ಪ್ರಚೋದಿಸಬಹುದು ಎಂದು ಅಮೆರಿಕ ಮತ್ತು ನ್ಯಾಟೋ ನಂಬುತ್ತಿದೆ.
ಇಳಿದ ಕಚ್ಚಾತೈಲ, ಜನರು ತುಸು ನಿರಾಳ: ಪೆಟ್ರೋಲ್-ಡೀಸೆಲ್ ದಿಢೀರ್ ಏರಿಕೆ ಸಾಧ್ಯತೆ ಕಡಿಮೆ
ಹೊಸದಾಗಿ ಭರವಸೆ ನೀಡಿದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಯಾವುವು ಎಂದರೆ, 800 ಸ್ಟಿಂಗರ್ ಆಯಂಟಿ-ಏರ್ಕ್ರಾಫ್ಟ್ ಸಿಸ್ಟಮ್ಸ್, ಎರಡು ಸಾವಿರ ಸರ್ಫೇಸ್-ಟು-ಏರ್ ಜಾವೆಲಿನ್ ಮಿಸೈಲ್ಗಳಾಗಿವೆ.
ಇವು ಭುಜದ ಮೇಲಿಟ್ಟು ಫೈರ್ ಮಾಡಬಹುದು ಅಥವಾ ಲಾಂಚರ್ಗಳಿಂದ ಉಡಾಯಿಸಬಹುದಾಗಿದೆ. ಸಾವಿರ ಕೆಜಿಗಿಂತ ಕಡಿಮೆ ತೂಕ ಹೊಂದಿರುವ ಆಯಂಟಿ-ಅರ್ಮೊರ್ ಆಯುಧಗಳು, 6 ಸಾವಿರ ಎಟಿ-4 ಪೋರ್ಟಬಲ್ ಆಯಂಟಿ-ಟ್ಯಾಂಕ್ ಆಯುಧಗಳನ್ನು ಅಮೆರಿಕ ಉಕ್ರೇನ್ನಗೆ ನೀಡುತ್ತಿದೆ.
100 ಯುದ್ಧತಂತ್ರದ ಮಾನವರಹಿತ ವ್ಯವಸ್ಥೆಗಳು ಹೊಂದಿರುವ ಆಯುಧಗಳು, 100 ಗ್ರೆನೆಡ್ ಲಾಂಚರ್‌ಗಳು, 500 ರೈಫಲ್ಸ್, ಸಾವಿರ ಪಿಸ್ತೂಲ್ಗಳು, 400 ಮಷಿನ್ಗನ್ಗಳು ಮತ್ತು 400 ಶಾಟ್‌ಗನ್‌ಗಳು. 20 ದಶಲಕ್ಷಕ್ಕೂ ಹೆಚ್ಚು ಮದ್ದುಗುಂಡುಗಳನ್ನು ಹೊಂದಿರುವ ಸಣ್ಣ ಶಸ್ತ್ರಾಸ್ತ್ರ ಮತ್ತು ಗ್ರೆನೇಡ್ ಲಾಂಚರ್ ಮತ್ತು ಮಾರ್ಟರ್ ರೌಂಡ್ಸ್; 25 ಸಾವಿರ ರಕ್ಷಾ ಕವಚಗಳು ಮತ್ತು ಹೆಲ್ಮೆಟ್ಗಳನ್ನ ಅಮೆರಿಕ ಝೆಲೆನ್ಸ್ಕಿ ಅವರಿಗೆ ರವಾನೆ ಮಾಡುತ್ತಿದೆ.
ಇನ್ನು 600 ಸ್ಟಿಂಗರ್ ಆಯಂಟಿ-ಏರ್ಕ್ರಾಫ್ಟ್ ಸಿಸ್ಟಮ್ಸ್, 2600 ಜಾವೆಲಿನ್ ಆಂಟಿ-ಆರ್ಮರ್ ಸಿಸ್ಟಮ್ಸ್, ಐದು ಎಂಐ-17 ಹೆಲಿಕಾಪ್ಟರ್ಗಳು, ಮೂರು ಗಸ್ತು ದೋಣಿಗಳು. ನಾಲ್ಕು ಕೌಂಟರ್-ಆರ್ಟಿಲರಿ ಮತ್ತು ಕೌಂಟರ್-ಮಾನವರಹಿತ ವೈಮಾನಿಕ ವ್ಯವಸ್ಥೆ ಟ್ರ್ಯಾಕಿಂಗ್ ರಾಡಾರ್‌ಗಳು, ನಾಲ್ಕು ಕೌಂಟರ್-ಮಾರ್ಟರ್ ರಾಡಾರ್ ಸಿಸ್ಟಮ್‌ಗಳು, 200 ಗ್ರೆನೇಡ್ ಲಾಂಚರ್‌ಗಳು ಮತ್ತು ಮದ್ದುಗುಂಡುಗಳು
ಕೊನೆಯಾಗುತ್ತಾ ಯುದ್ದ.? NATO ಸದಸ್ಯತ್ವ ನಿರಾಕರಿಸಿ ರಷ್ಯಾ ಜೊತೆ ರಾಜಿ ಇಂಗಿತ ವ್ಯಕ್ತಪಡಿಸಿದ ಉಕ್ರೇನ್ ಅಧ್ಯಕ್ಷ..!
200 ಶಾಟ್‌ಗನ್‌ಗಳು ಮತ್ತು 200 ಮೆಷಿನ್ ಗನ್‌ಗಳು, ಸುಮಾರು 40 ದಶಲಕ್ಷಕ್ಕೂ ಹೆಚ್ಚು ಮದ್ದುಗುಂಡುಗಳನ್ನು ಹೊಂದಿರುವ ಸಣ್ಣ ಶಸ್ತ್ರಾಸ್ತ್ರ ಮತ್ತು 1 ಮಿಲಿಯನ್ನಷ್ಟು ಗ್ರೆನೇಡ್, ಮಾರ್ಟರ್ ಮತ್ತು ಫಿರಂಗಿಗಳು, 70 ಹೈ ಮೊಬಿಲಿಟಿ ಮಲ್ಟಿಪರ್ಪಸ್ ವೀಲ್ಡ್ ವೆಹಿಕಲ್ಸ್ (HMMWVs)ಗಳನ್ನು ಅಮೆರಿಕ ಉಕ್ರೇನ್‌ಗೆ ರವಾನಿಸಲು ನಿರ್ಧರಿಸಿದೆ.
ಇಷ್ಟೇ ಅಲ್ಲ ಇತರ ವಾಹನಗಳು, ಚಿಕಿತ್ಸೆ ಬೆಂಬಲಿಸಲು ಮತ್ತು ಸ್ಥಳಾಂತರಿಸುವಿಕೆಯನ್ನು ಎದುರಿಸಲು ಮಿಲಿಟರಿ ವೈದ್ಯಕೀಯ ಉಪಕರಣಗಳು ಸೇರಿದಂತೆ ಈಗಾಗಲೇ 1.2 ಶತಕೋಟಿ ಡಾಲರ್ ಭದ್ರತಾ ನೆರವನ್ನು ಉಕ್ರೇನ್ ಅಮೆರಿಕ ತಲುಪಿಸಿದೆ ಅಥವಾ ಭರವಸೆ ನೀಡಿದೆ ಎಂಬುದಾಗಿ ವೈಟ್ಹೌಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ