ಉಕ್ರೇನ್ – ರಷ್ಯಾ:
ಉಕ್ರೇನ್ ಮೇಲಿನ ರಷ್ಯಾ ದಾಳಿಯು 66ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಹಾಯಕರು ಫೆಬ್ರವರಿ 24ರಂದು ಉಕ್ರೇನ್ ಅಧ್ಯಕ್ಷರನ್ನು ಸೆರೆಹಿಡಿಯಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಫೆ.24ರ ಕಾರ್ಯಾಚರಣೆಯು ಆರಂಭವಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಅವರ ಕುಟುಂಬವನ್ನು ಸೆರೆಹಿಡಿಯಲು ರಷ್ಯನ್ ಪಡೆಗಳು ಕೆಲವೇ ನಿಮಿಷಗಳ ದೂರದಲ್ಲಿತ್ತು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಲಾಗಿದೆ.
ಇಡೀ ವಿಶ್ವದಲ್ಲೇ ಭಾರತದಲ್ಲಿ ಅತಿಹೆಚ್ಚು ಬಾರಿ ಇಂಟರ್ನೆಟ್ ಸೇವೆ ಸ್ಥಗಿತ
‘ಟೈಮ್’ ಪ್ರಕಟಿಸಿದ ‘ಇನ್‌ಸೈಡ್ ಝೆಲೆನ್ಸ್ಕಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ಸಂದರ್ಶನದಲ್ಲಿ, ಉಕ್ರೇನ್ ಅಧ್ಯಕ್ಷರ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಮಾತನಾಡಿದ್ದಾರೆ. ಅದರಲ್ಲಿ ಅವರು, ಫೆ.24ರಂದು ಕೀವ್ನಲ್ಲಿರುವ ಅಧ್ಯಕ್ಷೀಯ ಕಚೇರಿಗಳು ಮತ್ತು ಸರ್ಕಾರಿ ನಿವಾಸಗಳತ್ತ ರಷ್ಯನ್ ಪಡೆಗಳು ಧಾವಿಸಿದ್ದವು. ಝೆಲೆನ್ಸ್ಕಿಯವರ ಕಚೇರಿಗೆ ಸಮೀಪದಲ್ಲಿಯೇ ಗುಂಡಿನ ಶಬ್ಧಗಳು ಕೇಳಿಬರುತ್ತಿತ್ತು ಎಂದಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದೆವು ಎಂದು ಹೇಳಿದ್ದಾರೆ ಆಂಡ್ರಿ. ”ಅಂದಿನ ಯುದ್ಧ ಆರಂಭವಾದ ಕೆಲವೇ ಗಂಟೆಗಳಲ್ಲಿಯೇ ರಷ್ಯನ್ ಪಡೆಗಳು ಝೆಲೆನ್ಸ್ಕಿಯವರನ್ನು ಬಂಧಿಸಲು ಮುನ್ನುಗ್ಗುತ್ತಿದ್ದರು. ಆಗ ಅಧ್ಯಕ್ಷೀಯ ಕಚೇರಿಗಳು ಸುರಕ್ಷಿತ ಸ್ಥಳವಲ್ಲ ಎಂಬುದು ಸ್ಪಷ್ಟವಾಯಿತು.
ಕಲ್ಲಿದ್ದಲು ತುರ್ತು ಸಾಗಾಟಕ್ಕೆ ದೇಶಾದ್ಯಂತ 650 ಕ್ಕೂ ಹೆಚ್ಚು ಪ್ರಯಾಣಿಕರ ರೈಲುಗಳು ರದ್ದು..!
ರಷ್ಯನ್ ಪಡೆಗಳು ಕೀವ್‌ಗೆ ಪ್ಯಾರಾಚೂಟ್ ಮೂಲಕ ಧಾವಿಸಿ ಝೆಲೆನ್ಸ್ಕಿ ಹಾಗೂ ಅವರ ಕುಟುಂಬವನ್ನು ಕೊಲ್ಲಲು ಅಥವಾ ಸೆರೆಹಿಡಿಯಲು ಧುಮುಕಬಹುದು ಎಂದು ಮಿಲಿಟರಿ ಎಚ್ಚರಿಸಿತ್ತು. ಈ ಮೊದಲು ನಾವು ಚಲನಚಿತ್ರಗಳಲ್ಲಿ ಮಾತ್ರ ಅಂತಹ ದೃಶ್ಯಗಳನ್ನು ನೋಡಿದ್ದೆವು. ಆದರೆ ಆ ರಾತ್ರಿ ಎಲ್ಲವೂ ಕಣ್ಮುಂದಿತ್ತು” ಎಂದಿದ್ದಾರೆ ಆಂಡ್ರಿ ಯೆರ್ಮಾಕ್.
ಫೆಬ್ರುವರಿ 24 ರಂದು ಆಕ್ರಮಣದ ನಡೆದ ದಿನದ ಸಂಜೆ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಆಂಡ್ರಿ ವಿವರಿಸಿದ್ದಾರೆ. ”ಝೆಲೆನ್ಸ್ಕಿ ಮತ್ತು ಅವರ ಕುಟುಂಬವು ಇನ್ನೂ ಸರ್ಕಾರಿ ನಿವಾಸದ ಒಳಗಿರುವಂತೆಯೇ ಸುತ್ತಲೂ ಗುಂಡಿನ ಕಾಳಗ ನಡೆದವು. ಕಾಂಪಾಂಡ್ಅನ್ನು ಸಿಕ್ಕಿದ್ದನ್ನು ಬಳಸಿ ಮುಚ್ಚಲಾಯಿತು. ನಿವಾಸದ ಒಳಗಿದ್ದ ಕಾವಲುಗಾರರು ಲೈಟ್ಗಳನ್ನು ಆಫ್ ಮಾಡಿದರು.
4ನೇ ಅಲೆಯ ಭೀತಿ: ಭಾರತದಲ್ಲಿ 24ಗಂಟೆಯಲ್ಲಿ 3,688 ಕೋವಿಡ್ ಪ್ರಕರಣ ಪತ್ತೆ, 50 ಮಂದಿ ಸಾವು
ಝೆಲೆನ್ಸ್ಕಿ ಮತ್ತು ಅವರ ಹನ್ನೆರಡು ಸಹಾಯಕರಿಗೆ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಮತ್ತು ಆಕ್ರಮಣಕಾರಿ ರೈಫಲ್‌ಗಳನ್ನು ಒದಗಿಸಲಾಯಿತು. ಆದರೆ ಅವರಲ್ಲಿ ಕೆಲವರಿಗೆ ಮಾತ್ರ ಆಯುಧಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿತ್ತು” ಎಂದಿದ್ದಾರೆ ಆಂಡ್ರಿ. ಆ ಸಂದರ್ಭದಲ್ಲಿ ಝೆಲೆನ್ಸ್ಕಿಯವರ ಹೆಂಡತಿ ಮತ್ತು ಮಕ್ಕಳು ಇನ್ನೂ ಅಲ್ಲೇ ಇದ್ದರು. ಇದು ನಂತರ ತಿಳಿಯಿತು ಎಂದಿದ್ದಾರೆ ಅವರು.
ಈ ಆಕ್ರಮಣದ ಎರಡು ದಿನಗಳ ನಂತರ, ಅಮೇರಿಕಾ ಸರ್ಕಾರವು ಝೆಲೆನ್ಸ್ಕಿಗೆ ಸುರಕ್ಷಿತ ಸ್ಥಳಾಂತರದ ಆಫರ್ ನೀಡಿತು. ಆದರೆ ಝೆಲೆನ್ಸ್ಕಿ ಅದನ್ನು ತಿರಸ್ಕರಿಸಿ, ನಮಗೆ ಮದ್ದುಗುಂಡುಗಳು ಬೇಕು, ಸ್ಥಳಾಂತರವಲ್ಲ ಎಂದಿದ್ದರು. ಇಂಗ್ಲೆಂಡ್ ಕೂಡ ಝೆಲೆನ್ಸ್ಕಿ ಹಾಗೂ ಅವರ ಕುಟುಂಬಕ್ಕೆ ಆಶ್ರಯ ನೀಡುವುದಾಗಿ ಹೇಳಿತ್ತು.
ಇಂದು ಸೂರ್ಯಗ್ರಹಣ ಈ ರಾಶಿಗಳ ನಸೀಬು ಫಳ ಫಳ ಹೊಳೆಯುತ್ತದಂತೆ! ನಿಮ್ಮ ರಾಶಿ ಇದೆಯಾ?
ಪ್ರಸ್ತುತ ರಷ್ಯಾ- ಉಕ್ರೇನ್ ಬಿಕ್ಕಟ್ಟು 9ನೇ ವಾರಕ್ಕೆ ಕಾಲಿಟ್ಟಿದೆ. ಈ ವೇಳೆ ಉಕ್ರೇನ್, ರಷ್ಯಾವು ಕಾರ್ಯಾಚರಣೆ ಮುಂದುವರೆಸಿದ್ದು, ಶಾಂತಿ ಮಾತುಕತೆಯು ಮುರಿದುಬೀಳುವ ಅಪಾಯದಲ್ಲಿದೆ ಎಂದು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ