‘ರಷ್ಯಾ ಯೋಧರು ಹಣೆಗೆ ಗನ್‌ ಇಟ್ಟರು’-ಉಕ್ರೇನ್‌ನಿಂದ ಬಂದ ಬಳ್ಳಾರಿ ವಿದ್ಯಾರ್ಥಿಗಳು

ಬಳ್ಳಾರಿ:

 ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿದ್ದ ಭಾರತದ ಕೆಲ ವಿದ್ಯಾರ್ಥಿಗಳು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ.

ಉಕ್ರೇನ್‍ನಿಂದ ಭಾರತಕ್ಕೆ ಮರಳಲು ಹೊರಟಿದ್ದ ಬಳ್ಳಾರಿ ಮೂಲದ ವಿದ್ಯಾರ್ಥಿಗಳನ್ನು ರಷ್ಯಾ ಯೋಧರು ಅಡ್ಡಗಟ್ಟಿ ತಲೆಗೆ ಬಂದೂಕು ಹಿಡಿದರು.

ತಕ್ಷಣವೇ ಜಾಗೃತರಾದ ವಿದ್ಯಾರ್ಥಿಗಳು, ‘ನಾವು ಭಾರತದ ಪ್ರಜೆಗಳು. ಬೇಕಿದ್ದರೆ ನಮ್ಮ ಪಾಸ್‍ಪೋರ್ಟ್ ನೋಡಿ’ ಎಂದು ಹೇಳಿದರು. ಆನಂತರ ರಷ್ಯಾ ಯೋಧರು ಅವರನ್ನು ಬಿಟ್ಟು ಕಳುಹಿಸಿದರು.

ಉಕ್ರೇನ್‍ನಿಂದ ತಯಬ್ ಕೌಸರ್, ಶಕೀಬ್, ಸಕೀಮ್, ಸಾಲೋಮನ್ ಎಂಬ ವಿದ್ಯಾರ್ಥಿಗಳು ಬಳ್ಳಾರಿಗೆ ಹಿಂತಿರುಗಿದ್ದಾರೆ. ಇವರೆಲ್ಲರೂ ಅಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿದ್ಯಾರ್ಥಿಗಳ ಮನೆಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾವಿನ ದವಡೆಯಿಂದ ಪಾರಾಗಿ ಬಂದ ತಮ್ಮ ಭಯಾನಕ ಅನುಭವಗಳನ್ನು ಅವರೊಂದಿಗೆ ಹಂಚಿಕೊಂಡರು.

‘ನಾವು ಬಂಕರ್‌ನಿಂದ ರೈಲ್ವೆ ಸ್ಟೇಷನ್‍ಗೆ ಹೊರಟಾಗ ರಷ್ಯಾ ಸೈನಿಕರು ಎದುರಾದರು. ನಮ್ಮ ತಲೆಗೆ ಗನ್ ಇಟ್ಟು, ಎಲ್ಲಿಯವರು’ ಎಂದು ಪ್ರಶ್ನಿಸಿದರು. ‘ನಾವು ಭಾರತೀಯರು ಎಂದು ಹೇಳಿ ಪಾಸ್‍ಪೋರ್ಟ್ ತೋರಿಸಿದ ಬಳಿಕ ನಮ್ಮನ್ನು ಬಿಟ್ಟು ಕಳುಹಿಸಿದರು’ ಎಂದು ಸಭಾ ಕೌಸರ್ ಆತಂಕದ ಕ್ಷಣಗಳನ್ನು ಮೆಲುಕು ಹಾಕಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link