ಲಂಡನ್ :
ಅಮೆರಿಕ, ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಬ್ರಿಟನ್, ಜಪಾನ್, ಕೆನಡಾ, ನಾರ್ವೆ, ಸಿಂಗಾಪುರ, ದಕ್ಷಿಣ ಕೊರಿಯಾ, ಸ್ವಿಟ್ಜರ್ಲ್ಯಾಂಡ್ ಮತ್ತು ಉಕ್ರೇನ್ʼಗಳನ್ನು ‘ಸ್ನೇಹಪರವಲ್ಲದ ದೇಶಗಳು’ ಎಂದು ಉಲ್ಲೇಖಿಸಿದ ಪಟ್ಟಿಗೆ ರಷ್ಯಾ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.
ಈ ದೇಶಗಳ ಕಂಪನಿಗಳು ಅಥವಾ ವ್ಯಕ್ತಿಗಳೊಂದಿಗೆ ಎಲ್ಲಾ ಕಾರ್ಪೊರೇಟ್ ಒಪ್ಪಂದಗಳನ್ನ ಸರ್ಕಾರಿ ಆಯೋಗವು ಅನುಮೋದಿಸಬೇಕಾಗುತ್ತದೆ ಎಂದು ಘೋಷಿಸಿದೆ.
ಉಕ್ರೇನ್ ಆಕ್ರಮಣದ ಮೇಲೆ ಕ್ರೆಮ್ಲಿನ್ʼನ ಬಿಗಿಹಿಡಿತದ ನಡುವೆ ಪಶ್ಚಿಮ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದಂತೆ ರಷ್ಯಾ ಸರ್ಕಾರ ಆ ನಿಟ್ಟಿನಲ್ಲಿ ಒಂದು ನಿರ್ಣಯವನ್ನ ಅಂಗೀಕರಿಸಿತು. ಉಕ್ರೇನ್ ಸಂಘರ್ಷದ ಬಗ್ಗೆ ರಷ್ಯಾ ಎದುರಿಸುತ್ತಿರುವ ತೀವ್ರ ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸೋಮವಾರ, ಪ್ರಮುಖ ಲೆಕ್ಕಪತ್ರ ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಸ್ಥಿರವಾದ ವ್ಯವಹಾರಗಳ ಪ್ರವಾಹವು ಉಕ್ರೇನ್ʼನೊಂದಿಗೆ ವ್ಯವಹಾರ ಮಾಡುವುದನ್ನ ನಿಲ್ಲಿಸುವುದಾಗಿ ಘೋಷಿಸಿತು. ರಷ್ಯಾದ ಪೂರೈಕೆಗಳ ಮೇಲೆ ನಿರ್ಬಂಧವನ್ನ ಪರಿಗಣಿಸಲಾಗುತ್ತಿದೆ ಎಂದು ಶ್ವೇತಭವನ ಹೇಳಿದ ನಂತ್ರ ತೈಲವು ಬ್ಯಾರೆಲ್ʼಗೆ 135 ಡಾಲರ್ʼಗಿಂತ ಹೆಚ್ಚಾಗಿದೆ. ಅಂದ್ಹಾಗೆ, ಮಾರ್ಚ್ 5 ರಂದು ಅಧ್ಯಕ್ಷೀಯ ಆದೇಶದ ನಂತ್ರ ಈ ಪಟ್ಟಿ ಹೊರಬಿದ್ದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
