ತುಮಕೂರು : ಉಚ್ಚೆ ಮಂಜನ ಕೊಲೆ ಆರೋಪಿಗಳ ಸೆರೆ

  ತುಮಕೂರು : 

      ಪಾಲಿಕೆ ಮಾಜಿ ಮೇಯರ್ ಗಡ್ಡರವಿ ಕೊಲೆ ಪ್ರಕರಣದ ಸಾಕ್ಷಿ ಮಂಜುನಾಥ ಅಲಿಯಾಸ್ ಉಚ್ಚೆ ಮಂಜನ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ತಿಲಕ್‍ಪಾರ್ಕ್ ವೃತ್ತದ ಪೊಲೀಸರು ಸೆರೆ ಹಿಡಿದಿದ್ದು, ಪ್ರಮುಖ ಆರೋಪಿ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಲಾಗಿದೆ.

      ಕೃತ್ಯದ ಪ್ರಮುಖ ಆರೋಪಿ ಬೆಂಗಳೂರಿನ ನೆಲಮಂಗಲ ವಾಜರಹಳ್ಳಿಯ ವಿಕಾಸ್ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯಲಾಗಿದ್ದು, ಈತನನ್ನು ಬೆಂಗಳೂರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇತರ ಆರೋಪಿಗಳಾದ ಶಾರದಾದೇವಿನಗರದ ಅಮಾನ್, ಎನ್.ಆರ್.ಕಾಲೋನಿಯ ಎಂ.ಮನೋಜ ಹಾಗೂ ಹನುಮಂತಪುರದ ಮಹೇಶ ಅವರನ್ನು ಡಿ.10ರಂದು ಸೆರೆಹಿಡಿಯಲಾಗಿತ್ತು ಮತ್ತೋರ್ವ ಆರೋಪಿ ಬೆಂಗಳೂರಿನ ಬಸವೇಶ್ವರನಗರದ ಅಜಯ್. ಎಸ್ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತುಮಕೂರು : ರೌಡಿ ಶೀಟರ್ ಮಂಜನ ಹತ್ಯೆ ; ಗುಂಡು ಹಾರಿಸಿ ಆರೋಪಿ ಸೆರೆ!!

      ಆರೋಪಿಗಳ ವಿಚಾರಣೆ ವೇಳೆ ಮಂಜುನಾಥ ಅಲಿಯಾಸ್ ಉಚ್ಚೆ ಮಂಜನು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಪ್ರತ್ಯಕ್ಷ ಸಾಕ್ಷಿಯಾಗಿರುವುದರಿಂದ ಸಾಕ್ಷಿ ನಾಶಪಡಿಸುವ ಉದ್ದೇಶಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಸದರಿ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅರುಣ @ ಲಾಂಗ್ ಅರುಣ ಎಂಬುವನು ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.

      ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಎಎಸ್ಪಿ ಟಿ.ಜೆ. ಉದೇಶ್ ಕೆ.ಎಸ್.ಪಿ.ಎಸ್., ಡಿವೈಎಸ್ಪಿ ತಿಪ್ಪೇಸ್ವಾಮಿರವರುಗಳ ಮಾರ್ಗದರ್ಶನದಲ್ಲಿ, ಸಿಪಿಐ ಮುನಿರಾಜು ರವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಶೇಷಾದ್ರಿ., ನವೀನ್. ಸಿಬ್ಬಂದಿಗಳಾದ ಪರಮೇಶ್, ಸೈಮನ್ ವಿಕ್ಟರ್, ಮುನಾವರ್ ಪಾಷ, ಹನುಮರಂಗಯ್ಯ, ನರಸಿಂಹಮೂರ್ತಿ, ಲೊಕೇಶ್, ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು ಎಸ್.ಎನ್. ಚಾಲಕರಾದ ನರಸಿಂಹಮೂರ್ತಿ, ಮಂಜುನಾಥ್, ಸತೀಶ್ ರವರುಗಳ ತಂಡ ಶ್ರಮಿಸಿದೆ. ಆರೋಪಿಗಳನ್ನು ಸೆರೆ ಹಿಡಿದ ತಂಡವನ್ನು ಎಸ್ಪಿ ಡಾ. ಕೆ. ವಂಸಿಕೃಷ್ಣ ಅವರು ಅಭಿನಂದಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link