ನಾನು ಎಂಪಿ ಟಿಕೇಟ್ ಆಕಾಂಕ್ಷಿ ಅಲ್ಲ- ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ

ಹುಬ್ಬಳ್ಳಿ:

    ಕುಂದಗೋಳ ವಿಧಾನ ಸಭೆಯ ಮಾಜಿ ಶಾಸಕ ಹಾಗೂ ಹಿರಿಯ ಮುಖಂಡ ಎಸ್ ಐ ಚಿಕ್ಕನಗೌಡರ ಅವರ ನಿಲುವು ಈಗ ಏಕಾಏಕಿ ಬದಲಾಗಿದೆ.

    ಸಹಜವಾಗಿಯೇ ಪ್ರಲ್ಹಾದ್ ಜೋಶಿ ಹಾಗೂ ಬಿ.ಎಲ್ ಸಂತೋಷ ಅವರ ಕುರಿತು ಮುನಿಸಿಕೊಂಡು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ಸೋಲನಪ್ಪಿದ್ದರು. ನಂತರ ಜಗದೀಶ್ ಶೆಟ್ಟರ್ ಸಹ ಕಾಂಗ್ರೆಸ್ ಸೇರಿದ ನಂತರ ಅವರ ಜೊತೆಗೆ ಗುರುತಿಸಿಕೊಂಡು ಧಾರವಾಡ ‌ಲೋಕಸಭಾ ಚುನಾವಣೆಗೆ ಟಿಕೇಟ್ ಸಹ ಬಯಸಿದ್ದರು. ‌ಆದರೆ ಈಗ ಮತ್ತೇ ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದ ನಂತರ ವೈಯಕ್ತಿಕವಾಗಿ ಶೆಟ್ಟರ್ ಜೊತೆಗೆ ಸಂಪರ್ಕ ಇಟ್ಟಿಕೊಂಡಿದ್ದರು ಸಹ ತಟಸ್ಥ ನೀತಿ ತಾಳಿದ್ದಾರೆ.

    ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು 1997 ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದೇನೆ 2 ಬಾರಿ ತಾಲೂಕು ಅಧ್ಯಕ್ಷ ಒಂದು ಬಾರಿ ಜಿಲ್ಲಾಧ್ಯಕ್ಷನಾಗಿ ಪಕ್ಷವನ್ನು ಬೆಳೆಸಿದ್ದೇನೆ. ಧಾರವಾಡ ಜಿಲ್ಲೆಯಲ್ಲಿ 8 ಬಾರಿ ವಿಧಾನಸಭೆ ಚುನಾವಣೆ ಮಾಡಿದ್ದು ಬಹಳ ಖುಷಿ ಇದೆ. ನಾನು 3-4 ಸಾರಿ ಸೋತಿರ್ಬಹುದು ಆದರೆ 3 ಬಾರಿ ಶಾಸಕ ಆಗಿದ್ದೇನೆ . ನನ್ನ ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ ಹೇಳಿದರು.

   ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸಿ ಎಸ್ ಗೋಳಿ ಅವರು 2018 ರಲ್ಲಿ ಕೇವಲ 634 ಮತಗಳಲ್ಲಿ ಸೋಲಿಸಿದರು ಸೋತರು ಸಹ ನಾನು ಇಲ್ಲಿವರೆಗು ಪಕ್ಷವನ್ನು ಮತ್ತು ಜನರನ್ನು ಬಿಟ್ಟಿಲ್ಲ .ಪ್ರತಿಯೊಬ್ಬರ ಜೋತೆನು ಸಂಪರ್ಕ ಇದೆ. ಏನಾದರೂ ಅವರ ಕೆಲಸ ಕಾರ್ಯಗಳು ಇದ್ದರು ಹೋಗಿಬರುತ್ತೇನೆ.2019 ರಲ್ಲಿಯು ಸಹ 1601 ಮಾತದಲ್ಲಿ ನಾನು ಸೋತೆ.ಕೊನೆಗೂ ನನನ್ನ ಮೇಲೆ ಯಡಿಯೂರಪ್ಪ ಹಾಗೂ ಕಟೀಲ್ ಅವರು ಭರವಸೆ ಇಟ್ಟಿದ್ದಾರೆ.

   ನನ್ನ ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ 3 ಬಾರಿ ಶಾಸಕನಾದರು ಸಹ ಪಕ್ಷಕ್ಕೆ ಕೆಟ್ಟ ಹೆಸರು ತಂದಿಲ್ಲ ಮತ್ತು ಒಳ್ಳೆಯ ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ. ಕೊನೆ ಗಳಿಗೆಯಲ್ಲಿ ನನಗೆ ಟೀಕೇಟ್ ತಪ್ಪಿತು ಅದೇ ನನಗೆ ಮೊದಲಿಗೆ ಹೇಳಿದ್ದರೆ 6 ತಿಂಗಳು ನಾನು ಹಣ ಕರ್ಚು ಮಾಡುತ್ತ ಇರಲಿಲ್ಲ.ಅಗಲು ರಾತ್ರಿ ತಿರುಗಾಡಿದ್ದೇನೆ ಆದರೆ ಚುನಾವಣೆಯಲ್ಲಿ ಬೇರೆ ಹೆಸರು ಘೋಷಣೆ ಮಾಡಿದರುಆ ಸಂದರ್ಭದಲ್ಲಿ ಸಾವಿರಾರು ಜನ ನನಗೆ ಕರೆ ಮಾಡಿದ್ದರು ಜನಗಳು ಬಂದು ಪಕ್ಷ ಬದಲಾವಣೆ ಮಾಡು ಎಂದರು ನೀವು ಹೋಗಿ ಕಾಂಗ್ರೆಸ್ ಗೆ ಸೇರಿಕೊಳ್ಳಿ ಎಂದರು.

    ನಮ್ಮ ನಾಯಕರದಂತಹ ಜಗದೀಶ್ ಶೆಟ್ಟರನ್ನು ಕರೆದುಕೊಂಡು ಹೋದೆ ಸಿದ್ದರಾಮಯ್ಯವರನ್ನ ಮತ್ತು ಡಿ ಕೆ ಶಿವಕುಮಾರ್ ರವರನ್ನ ಭೇಟಿಯಾದೆ . ಈಗ ವಿಜಯೇಂದ್ರರವರು ರಾಜ್ಯಧ್ಯಕ್ಷರಾಗಿದ್ದರಿಂದ ತಟಸ್ಥವಾಗಿ ಉಳಿದಿದ್ದೇನೆ.ಇವತ್ತು ಕಾಂಗ್ರೆಸ್ಸು ಅನ್ನುವುದಿಲ್ಲ ಜನತಾದಳನ್ನು ಅನ್ನುವುದಿಲ್ಲ ಬಿಜೆಪಿನೂ ಅನ್ನುವುದಿಲ್ಲ ಇವತ್ತಿನವರೆಗೂ ನಾನು ತಟಸ್ಥವಾಗಿ ರಾಜಕಾರಣವನ್ನು ಮಾಡ್ತಾ ಇದೀನಿ ಮತ್ತು ಇವತ್ತು ರಾಜ್ಯದಲ್ಲಿ ಏನು ಬದಲಾವಣೆ ಆಗ್ತದೆ ಎಂಬುದನ್ನು ಕ್ರಮೇಣವಾಗಿ ಕಾದು ನೋಡುತ್ತೇನೆ.

   ಕಾದು ನೋಡಿ ಮುಂದಿನ ಹೆಜ್ಜೆ ಇಡಬೇಕೆಂದು ತೀರ್ಮಾನ ಮಾಡಿದ್ದೇನೆ ಹಾಗೂ ಸದ್ಯಕ್ಕೆ ಯಾವ ಪಕ್ಷನೂ ಇಲ್ಲ ಪಕ್ಷೇತರವಾಗಿ ಇದ್ದೇನೆ ಜಗದೀಶ್ ಶೆಟ್ಟರ್ ಅನ್ನುವುದಕ್ಕಿಂತಲೂ ನನಗೆ ರಾಜ್ಯದಲ್ಲಿ ಯಡಿಯೂರಪ್ಪನವರು. ರಾಷ್ಟ್ರಮಟ್ಟಕ್ಕೆ ನಾನು ಮಾತನಾಡುವುದಿಲ್ಲ ದಿಲ್ಲಿವರೆಗೆ ಬೆಳೆದವನು ಅಲ್ಲ ನಾನು ಕರ್ನಾಟಕದಲ್ಲಿ ಅದರಲ್ಲಿ ಧಾರವಾಡ ಜಿಲ್ಲೆಯ ಜಿಲ್ಲೆಯಕ್ಕಿಂತಲೂ ಕುಂದಗೋಳ ಮತಕ್ಷೇತ್ರದ ಕಲಘಟಗಿ ಮತಕ್ಷೇತ್ರದಲ್ಲಿ ಪ್ರತಿಯೊಬ್ಬರ ಸಂಪರ್ಕವನ್ನು ನಾನು ಇಟ್ಟುಕೊಂಡಿದ್ದೇನೆ.

   ರಾಜ್ಯದಲ್ಲಿ ನಮ್ಮ ನಾಯಕರು ಯಾರು ಅಂದರೆ ಯಡಿಯೂರಪ್ಪನವರೆಂದು ಕುಂತಲ್ಲೇ ನಿಂತಲ್ಲೇ ಹೋದಲ್ಲೇ ನಾನು ಹೇಳ್ತಾ ಇದೀನಿ ನನಗೆ ರಾಜಕೀಯ ಮಾರ್ಗದರ್ಶನವನ್ನು ಮಾಡಿಕೊಟ್ಟವರು ಜಗದೀಶ್ ಶೆಟ್ಟರ್ ಅವರು 1994 ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಅಭ್ಯರ್ಥಿಯರಾದಾಗ ನಾನು ಕಲಘಟಗಿ ಕ್ಷೇತ್ರದ ಅಭ್ಯರ್ಥಿಯಾಗಿದ್ದೆ ಜಗದೀಶ್ ಶೆಟ್ಟರ್ ಅವರು ಆರಿಸಿ ಬಂದರು ಆದರೆ ನಾನು ಪರಾಭವ ಹೊಂದಿದೆ ನಂತರ 1999 ರಲ್ಲಿ ಟಿಕೆಟ್ ಕೊಡಿಸೋದಕ್ಕೆ ಜಗದೀಶ್ ಶೆಟ್ಟರ್ ಅವರೆ ಕಾರಣ 1999 ರಲ್ಲಿ ಆರಿಸಿ ಬಂದೆ 2004ರಲ್ಲಿ ಅವರೇ ಟಿಕೆಟ್ ಕೊಡಿಸಿದರು ಆರಿಸಿ ಬಂದೆ ನನಗೇ ನಾಲ್ಕು ಬಾರಿ ಟಿಕೆಟ್ ತಂದ್ಕೊಟ್ಟವರು ಯಾರಪ್ಪ ಅಂದ್ರೆ ಜಗದೀಶ್ ಶೆಟ್ಟರ್ ಅವರು ನನಗೆ ಮಾರ್ಗದರ್ಶನವನ್ನು ಕೊಟ್ಟವರು ಜಗದೀಶ್ ಶೆಟ್ಟರ್ ಅವರು.

   ಅವರು ಹಾಕಿಕೊಟ್ಟಂತಹ ಗೆರೆಯನ್ನು ಇವತ್ತಿನವರೆಗೂ ದಾಟಿಲ್ಲ ಅವರೇನು ಹೇಳುತ್ತಾರೋ ಅದನ್ನೇ ಪಾಲನೆಯನ್ನು ಮಾಡಿಕೊಂಡು ಬಂದಿದ್ದೇನೆ. ಮುಂದೆ ಏನು ಹೆಜ್ಜೆ ಇಡುತ್ತಾರೋ ನೋಡೋಣ, ಕಾದು ನೋಡುತ್ತೇನೆ ಮುಂದೆ ಏನು ತೀರ್ಮಾನ ತಗೋಬೇಕು ಅದನ್ನ ತಗೋತೀನಿ ಪಕ್ಷಕ್ಕೆ ನಾನು ಇದುವರೆಗೂ ಯಾವುದೇ ದ್ರೋಹವನ್ನು ಮಾಡಿಲ್ಲ.

   ಇದುವರೆಗೂ 1992 ರಿಂದ ಅದಕ್ಕಿಂತ ಪೂರ್ವದಲ್ಲಿ ಬಿಜೆಪಿಗೆ ವೋಟ್ ಹಾಕಿಕೊಂಡು ಬರ್ತಾ ಇದೀನಿ ಪಕ್ಷಕ್ಕೆ ಅನ್ಯಾಯ ಮಾಡಬೇಕು ಮೋಸ ಮಾಡಬೇಕು ಅನ್ನುವುದು ಕೆಲವರಿಗೆ ಇದೆ ಬೆನ್ನಲ್ಲಿ ಚೂರಿ ಹಾಕುವಂತ ಕೆಲವರಿಗೆ ಇದೆ ಆದರೆ ನನ್ನತ್ರ ಇಲ್ಲ ಪ್ರಾಮಾಣಿಕವಾಗಿ ದುಡಿದೇನಿ ಪ್ರಾಮಾಣಿಕವಾಗಿ ಕೆಲಸ ಮಾಡಿನಿ.

     ಕಾಂಗ್ರೆಸ್ಸಿಗರೆ ಇರಲಿ ಬಿಜೆಪಿ ಇರಲಿ ಜನತಾ ದಳಕ್ ಆದರೂ ಇರಲಿ ಅಭ್ಯರ್ಥಿಯನ್ನು ನೋಡುತ್ತೇನೆ ನೋಡಿ ನಾನು ತೀರ್ಮಾನ ತೆಗೆದುಕೊಳ್ಳುತ್ತೇನೆ.ನಾನು ಇನ್ನು ಯಾವ ಪಕ್ಷಕ್ಕೂ ಮುಖ ಮಾಡಿಲ್ಲ ಸಂಪರ್ಕ ಮಾಡಿದ್ದಾರೆ ಬನ್ನಿ ಗೌಡ್ರೆ ಬನ್ನಿ ಗೌಡ್ರೆಂದು ಜಿಲ್ಲಾದವರು ಕರೆದಿದ್ದಾರೆ.

    ಸಚಿವ ಎಚ್ ಕೆ ಪಾಟೀಲ್ ಅವರು ಕರೆದಿದ್ದಾರೆಹಾಗೂ ಬಹಳ ಜನರು ಸಂಪರ್ಕ ಮಾಡಿದ್ದಾರೆ. ನಾನು ದುಡುಕಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಕಾದು ನೋಡ್ತೀನಿ ಕಾದು ನೋಡಿ ಏನು ಇದೆ ಅನ್ನೋದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link