ಪಾಕಿಸ್ತಾನ : ಉಗ್ರವಾದದ ವಿರುದ್ಧ ಗುಡುಗಿದ ಜೈಶಂಕರ್

ಪಾಕಿಸ್ತಾನ:

    ಎರಡು ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ಚಟುವಟಿಕೆಗಳು ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ಕೂಡಿದ್ದರೆ, ಅದು ದ್ವಿಪಕ್ಷೀಯ ವ್ಯಾಪಾರ, ಸಂಬಂಧಗಳಿಗೆ ಸಹಕಾರಿಯಲ್ಲ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಸ್​ಸಿಒ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿದೆ ಎಂಬುದು ಮೂಲತತ್ವವಾಗಿದೆ ಎಂದರು.

   ಏಕಪಕ್ಷೀಯ ಅಜೆಂಡಾಗಳ ಮೂಲಕ ಸಂಬಂಧಗಳು ಪ್ರಗತಿ ಹೊಂದಲು ಸಾಧ್ಯವಿಲ್ಲ, ಅಭಿವೃದ್ಧಿ ಮತ್ತು ಪ್ರಗತಿಗೆ ಶಾಂತಿ ಮತ್ತು ಸ್ಥಿರತೆ ಅಗತ್ಯ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಈ ಕೆಲಸಗಳು ಆಗದಿದ್ದರೆ ಅಭಿವೃದ್ಧಿಯ ಮಾತೇ ಇಲ್ಲ ಎಂದು ಹೇಳಿದರು.

   ಎರಡು ದೇಶಗಳ ನಡುವೆ ವಿಶ್ವಾಸದ ಕೊರತೆಯಿದ್ದರೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಜೈಶಂಕರ್ ಒತ್ತಿ ಹೇಳಿದರು. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಘರ್ಷಣೆಗಳು ಮತ್ತು ಮಧ್ಯಪ್ರಾಚ್ಯ ಉದ್ವಿಗ್ನತೆಯ ಬಗ್ಗೆ ಮಾತನಾಡಿದ ಅವರು, ಎಸ್‌ಸಿಒ ಸಭೆಯು ವಿಶ್ವ ವ್ಯವಹಾರಗಳಲ್ಲಿ ಕಠಿಣ ಸಮಯದಲ್ಲಿ ನಡೆಯುತ್ತಿದೆ ಎಂದು ಹೇಳಿದರು. 

   ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, 9 ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವರೊಬ್ಬರ ಮೊದಲ ಭೇಟಿಯಾಗಿದೆ. ಜೈಶಂಕರ್ ಮಂಗಳವಾರ ಸಂಜೆ ಇಸ್ಲಾಮಾಬಾದ್​ಗೆ ಹೋಗಿದ್ದರು. SCO ಸಭೆಯ ಆಹ್ವಾನಿತ ಗಣ್ಯರಿಗೆ ಮಂಗಳವಾರ ರಾತ್ರಿ ಶೆಹಬಾಜ್ ಷರೀಪ್ ಅವರು ತಮ್ಮ ನಿವಾಸದಲ್ಲಿ ಔತಣಕೂಟದ ಏರ್ಪಡಿಸಿದ್ದರು.

   ಈ ವೇಳೆ ಷರೀಪ್ ಹಾಗೂ ಜೈಶಂಕರ್ ಅವರು ಔಪಚಾರಿಕವಾಗಿ ಅಷ್ಟೇ ಮಾತುಕತೆ ನಡೆಸಿದರು. ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ 2015ರ ಡಿಸೆಂಬರ್‌ನಲ್ಲಿ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ರಷ್ಯಾ ಮತ್ತು ಚೀನಾ 1996 ಮತ್ತು 2001ರ ನಡುವೆ ನ್ಯಾಟೊಗೆ ಪ್ರತಿಯಾಗಿ ಕಾರ್ಯತಂತ್ರದ ಭಾಗವಾಗಿ ಕಾರ್ಯನಿರ್ವಹಿಸಲು ಎಸ್‌ಸಿಒ ಪ್ರಾರಂಭಿಸಿದವು.

Recent Articles

spot_img

Related Stories

Share via
Copy link
Powered by Social Snap