ನವದೆಹಲಿ:
ಗ್ರಾಹಕರಲ್ಲಿ ಡಿಜಿಟಲ್ ಸಾಕ್ಷರತೆ ಮೂಡಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಡಿಜಿಟಲ್ ಅಲ್ಲಿ ಪ್ರಸಿದ್ಧಿ ಪಡೆದಿರುವ ಮೆಟಾ ಸಹಯೋಗದಲ್ಲಿ “ಸಬಲೀಕೃತ ಗ್ರಾಹಕರಾಗಿರಿ” ಅಭಿಯಾನ ಆರಂಭಿಸಿದೆ.ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಮತ್ತು ಮೆಟಾದ ಮುಖ್ಯ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯಲ್ ಕಪ್ಲಾನ್ ಅವರು ದೆಹಲಿಯಲ್ಲಿ ಮಂಗಳವಾರ “ಸಬಲೀಕೃತ ಗ್ರಾಹಕರಾಗಿರಿ’ ಅಭಿಯಾನದ ಹೊಸ ಸಹಯೋಗವನ್ನು ಘೋಷಿಸಿದರು.
‘ಜಾಗೋ ಗ್ರಾಹಕ ಜಾಗೋ’ ಅಡಿಯಲ್ಲಿ ಡಿಜಿಟಲ್ ಸಾಕ್ಷರತಾ ಉಪಕ್ರಮಗಳ ಮೂಲಕ ಗ್ರಾಹಕರನ್ನು ಸಬಲೀಕರಣಗೊಳಿಸಲು ಮತ್ತು ಗ್ರಾಹಕರಿಗೆ ನ್ಯಾಯಬದ್ಧ ರಕ್ಷಣೆ ಒದಗಿಸಲು ಈ ಹೊಸ ಅಭಿಯಾನ ಹಾಕಿಕೊಂಡಿದೆ ಗ್ರಾಹಕ ಇಲಾಖೆ.`ಮೆಟಾ’ ಪಾಲುದಾರಿಕೆ ಉದ್ಘಾಟನೆ ವೇಳೆ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ನಾಗರಿಕರು ಡಿಜಿಟಲ್, ಆನ್‌ಲೈನ್ ವಂಚನೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯ ಸಾಧನ ಮತ್ತು ಜ್ಞಾನ ನೀಡಲು ಮೆಟಾ ಸಹಯೋಗದಲ್ಲಿ “ಸಬಲೀಕೃತ ಗ್ರಾಹಕರಾಗಿರಿ’ ಅಭಿಯಾನ ನಡೆಸುತ್ತಿದ್ದು, ದೇಶದ ದೂರದ ಪ್ರದೇಶಗಳನ್ನೂ ತಲುಪುತ್ತವೆ ಎಂದು ಹೇಳಿದರು.
ಸುಸ್ಥಿರ ಮತ್ತು ಸುರಕ್ಷಿತ ಡಿಜಿಟಲ್ ಅನುಭವಕ್ಕೆ ಗ್ರಾಹಕರಲ್ಲಿ ಜಾಗೃತಿ ಪ್ರಮುಖವಾಗಿದೆ. ಅದರಂತೆ ಈ ಅಭಿಯಾನವು ಗ್ರಾಹಕ ರಕ್ಷಣಾ ಕ್ರಮಗಳನ್ನು ಬಲಪಡಿಸುತ್ತದೆ ಮತ್ತು ಭಾರತೀಯ ಗ್ರಾಹಕರನ್ನು ಸಬಲೀಕರಣಗೊಳಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ” ಎಂದು ಪ್ರತಿಪಾದಿಸಿದರು.
‘ಸಬಲೀಕೃತ ಗ್ರಾಹಕರಾಗಿರಿ’ ಮೆಟಾ ಜಂಟಿ ಅಭಿಯಾನವು ಗ್ರಾಹಕರಿಗೆ ಬರುವ ಆನ್‌ಲೈನ್ ಬೆದರಿಕೆಗಳನ್ನು ಗುರುತಿಸುವುದು ಮತ್ತು ಬಲವಾದ ಪಾಸ್‌ವರ್ಡ್ಗಳ ಬಳಕೆ, ಆನ್‌ಲೈನ್ ಮಾಹಿತಿ ಪರಿಶೀಲನೆ ಮತ್ತು ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡುವುದು ಸೇರಿದಂತೆ ಆರೋಗ್ಯಕರ ಆನ್‌ಲೈನ್ ಅಭ್ಯಾಸಗಳನ್ನು ಉತ್ತೇಜಿಸುತ್ತದೆ. ಈ ನಿಟ್ಟಿನಲ್ಲಿ ಭಾರತೀಯರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.ಈ ವೇಳೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ವಿಭಾಗವು ಸ್ಥಾಪಿಸಿದ ಮತ್ತು ಮೆಟಾ ಬೆಂಬಲಿಸಿದ ಅಧ್ಯಕ್ಷರು ಬಾಂಬೆ ಐಐಟಿಯೊಂದಿಗೆ ನಿಯೋಜಿಸಲಾದ ಜಂಟಿ ಯೋಜನೆ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದರು.
