ಸಾಧು ಕೋಕಿಲಾ ಕಾಂಗ್ರೆಸ್‌ ಸೇರ್ಪಡೆ..!

ಬೆಂಗಳೂರು:

      ಸ್ಯಾಂಡಲ್​ವುಡ್​ ಖ್ಯಾತ ಸಂಗೀತ ನಿರ್ದೇಶಕ, ಹಾಸ್ಯ ನಟ ಸಾಧು ಕೋಕಿಲಾ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ. ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ಕೆಪಿಸಿಸಿಯ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಈ ನೇಮಕ ಮಾಡಿದ್ದಾರೆ.

     ಈ ಬಗ್ಗೆ ಟ್ವೀಟ್‌ ಮಾಡಿರುವ ಡಿ.ಕೆ ಶಿವಕುಮಾರ್‌, ‘ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಕನ್ನಡ ನಾಡಿನ ಜನಮೆಚ್ಚಿನ ಕಲಾವಿದ ಸಾಧು ಕೋಕಿಲ ಅವರಿಗೆ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇವೆ. ತಮ್ಮ ಕಲಾ ಸೇವೆಯೊಂದಿಗೆ ಜನ ಸೇವೆಯೂ ಯಶಸ್ವಿಯಾಗಿ ಮುಂದುವರೆಯಲಿ’ ಎಂದು ಆಶಿಸಿದ್ದಾರೆ.  ಸಾಧುಕೋಕಿಲ ಅವರು ಹಲವು ದಿನಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಮೇಕೆದಾಟು ಪಾದಯಾತ್ರೆಯಲ್ಲಿಯೂ ಅವರು ಕಾಣಿಸಿಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ