ತುಮಕೂರು:
ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಡಿ. 8ರಂದು ಬೆಳಿಗ್ಗೆ 10ಗಂಟೆಗೆ ನಗರದ ಶ್ರೀ ದೇವಿ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಘನ ಉಪಸ್ಥಿತಿ ಯಲ್ಲಿ ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎನ್. ರಾಜಣ್ಣ ಅವರು 2024ನೇ ಸಾಲಿನ ಜಿಲ್ಲೆಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ರಿಗೆ ಗೌರವ ಸನ್ಮಾನ ನೆರವೇರಿಸುವರು.
ವಿಧಾನಪರಿಷತ್ ಮಾಜಿ ಸದಸ್ಯರು ಶ್ರೀ ದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾದ ಡಾ. ಎಂ. ಆರ್. ಹುಲಿನಾಯ್ಕರ್ ಉದ್ಘಾಟನೆ ನೆರವೇರಿಸುವರು. ಒಕ್ಕೂಟದ ಜಿಲ್ಲಾಧ್ಯಕ್ಷ ಟಿ. ಕೆ.ಧನಿಯಾ ಕುಮಾರ್ ಅಧ್ಯಕ್ಷ ತೆ ವಹಿಸಲಿದ್ದು, ಗೌರವಾಧ್ಯಕ್ಷ ಟಿ. ಎನ್. ಮಧುಕರ್ ಪ್ರಾಸ್ತಾವಿಕ ನುಡಿಯಾಡುವರು.
ಮುಖ್ಯ ಅತಿಥಿಗಳಾಗಿ ಶಾಸಕ ಜಿ. ಬಿ. ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ, ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾದ ಜಿ. ಎಂ. ಸಣ್ಣ ಮುದ್ದಯ್ಯ, ಒಕ್ಕೂಟದ ಹಿರಿಯ ಉಪಾಧ್ಯಕ್ಷ ಡಿ. ಎಂ. ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮತ್ತು ಒಕ್ಕೂಟ ದ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು ನಿರ್ದೇಶಕ ರು ಪಾಲ್ಗೊಳ್ಳುವರು.
ಜಿಲ್ಲೆಯ ಹಿಂದುಳಿದ ವರ್ಗ ಗಳ ಮುಖಂಡರು ಹಾಗೂ ಎಲ್ಲಾ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ
ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮನವಿ ಮಾಡಿದ್ದಾರೆ.