ಕಾಲಿನ ಗಾಯ ನೆಕ್ಕಿದ ಸಾಕು ನಾಯಿ: ಸೋಂಕಿಗೆ ತುತ್ತಾಗಿ ಮಹಿಳೆ ಸಾವು

ನವದೆಹಲಿ: 

   ಸಾಕು ನಾಯಿಯಾಗಿರಬಹುದು ಅಥವಾ ಬೀದಿ ನಾಯಿಗಳೇ ಆಗಿರಬಹುದು. ಇವುಗಳು ಎಷ್ಟು ಅಪಾಯಕಾರಿ  ಎಂಬುದು ಈಗ ಬಹುತೇಕ ಎಲ್ಲರಿಗೂ ಗೊತ್ತಾಗಿದೆ. ಯಾಕೆಂದರೆ ಕಳೆದ ಕೆಲವು ವಾರಗಳಿಂದ ಉತ್ತರ ಪ್ರದೇಶದ  22 ವರ್ಷದ ರಾಜ್ಯಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ  ಅವರ ನಿಧನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯಾಕೆಂದರೆ ಬೀದಿ ನಾಯಿ ಮರಿಯೊಂದು ಕಚ್ಚಿದ ಕೆಲವು ವಾರಗಳ ಅನಂತರ ಅವರಿಗೆ ರೇಬೀಸ್‌  ತುತ್ತಾಗಿ ಸಾವನ್ನಪ್ಪಿದರು. ಇಂತಹುದ್ದೇ ಘಟನೆಯೊಂದು ಈಗ ಇಂಗ್ಲೆಂಡ್‌ನ  ನಾರ್ಫೋಕ್‌ನಲ್ಲಿ ನಡೆದಿದೆ.

   ನಾರ್ಫೋಕ್‌ನ 83 ವರ್ಷದ ಜೂನ್ ಬ್ಯಾಕ್ಸ್ಟರ್ ಎಂಬ ಮಹಿಳೆಯ ಕಾಲಿನ ಮೇಲಿನ ಗಾಯವನ್ನು ಅವರ ಮೊಮ್ಮಗಳು ಸಾಕುತ್ತಿದ್ದ ನಾಯಿ ನೆಕ್ಕಿದ್ದರಿಂದ ಸಾವನ್ನಪ್ಪಿದ್ದಾರೆ.

   ಅಟಲ್‌ಬರೋದಲ್ಲಿ ವಾಸವಾಗಿದ್ದ ಜೂನ್ ಬ್ಯಾಕ್ಸ್ಟರ್ ಅವರಿಗೆ ಮನೆಯಲ್ಲಿ ಕಮೋಡ್ ಬಳಸುವಾಗ ಕಾಲಿಗೆ ಗಾಯವಾಗಿತ್ತು. ಇದನ್ನು ಅವರ ಮೊಮ್ಮಗಳ ನಾಯಿ ನೆಕ್ಕಿದೆ. ಇದರಿಂದ ಮಾರಕ ಸೋಂಕಿಗೆ ತುತ್ತಾದ ಜೂನ್ ಬ್ಯಾಕ್ಸ್ಟರ್ ಸಾವನ್ನಪ್ಪಿದ್ದಾರೆ ಎಂದು ನಾರ್ಫೋಕ್ ಕರೋನರ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಸಾಕು ಪ್ರಾಣಿಗಳ ಬಾಯಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ಯಾಶ್ಚುರೆಲ್ಲಾ ಮಲ್ಟೋಸಿಡಾ ಎಂಬ ಬ್ಯಾಕ್ಟೀರಿಯಾದಿಂದ ಜೂನ್ ಬ್ಯಾಕ್ಸ್ಟರ್ ಅವರಿಗೆ ಸೋಂಕು ತಗುಲಿದೆ.

   ಆರೋಗ್ಯದಲ್ಲಿ ದುರ್ಬಲರಾಗಿದ್ದ ಅವರಿಗೆ ಜೂನ್ 29ರಂದು ಮನೆಯಲ್ಲಿ ಸಣ್ಣ ಗಾಯವಾಗಿತ್ತು. ಬಳಿಕ ಅವರು ಅಸ್ವಸ್ಥರಾಗಿದ್ದು ಅವರನ್ನು ನಾರ್ಫೋಕ್ ಮತ್ತು ನಾರ್ವಿಚ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಈ ಸೋಂಕು ಸಾಕು ನಾಯಿ ನೆಕ್ಕುವುದರಿಂದ ಉಂಟಾಗಿದೆ ಎಂದು ಗುರುತಿಸಲಾಗಿದೆ.

   ಕಮೋಡ್ ಬಳಸುತ್ತಿದ್ದಾಗ ಆದ ಗಾಯಕ್ಕೆ ಅರೆವೈದ್ಯರು ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿದ್ದರು. ಆದರೆ ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ರಕ್ತ ಪರೀಕ್ಷೆಯಿಂದ ಅವರಿಗೆ ಪಾಶ್ಚರೆಲ್ಲಾ ಮಲ್ಟೋಸಿಡಾ ಸೋಂಕು ಉಂಟಾಗಿರುವುದು ಪತ್ತೆಯಾಗಿದೆ. ಚಿಕಿತ್ಸೆ ಮುಂದುವರಿಸಿದರೂ ಪ್ರಯೋಜನವಾಗಲಿಲ್ಲ. ಅವರು ಜುಲೈ 7ರಂದು ನಿಧನರಾಗಿದ್ದಾರೆ. 

  ಜೂನ್ ಬ್ಯಾಕ್ಸ್ಟರ್ ಅವರಿಗೆ ಈ ಮೊದಲೇ ಮೂತ್ರಪಿಂಡ, ಯಕೃತ್ತು ಮತ್ತು ಹೃದಯದ ತೊಂದರೆಗಳು ಇದ್ದವು ಎಂದು ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.

Recent Articles

spot_img

Related Stories

Share via
Copy link