ಕೊರಟಗೆರೆ :
ಸಾಲಬಾದಗೆ ರೈತ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ತೋವಿನಕೆರೆ ಹೋಬಳಿ ಕಬ್ಗೆರೆ ಗ್ರಾಮದಲ್ಲಿ ನಡೆದಿದೆ.
ರಾಜಣ್ಣ 38 (ವರ್ಷ) ಸಾವಿಗೀಡಾದ ರೈತ, 12 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದ ರೈತ, ಮನೆಯ ಮೇಲು ಮೈಕ್ರೋ ಫೈನಾನ್ಸಲ್ಲಿ ಸಾಲ ಮಾಡಿದ್ದು ಬ್ಯಾಂಕ್,ಮೈಕ್ರೋ ಫೈನಾನ್ಸ್ ಹಾಗೂ ಕೈ ಸಾಲದ ನೋವಿಗೆ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಅಂತರ್ಜಲ ಮಟ್ಟ ಕುಸಿತದಿಂದ ರೈತಾಪಿ ವರ್ಗ ಕಂಗಾಲಾಗಿದ್ದಾನೆ, 5-6 ಬೋರ್ವೆಲ್ ಸತತ ಬತ್ತಿ ಹೋದ ಪರಿಣಾಮ ಮನನೊಂದಿದ್ದರು. ರಾತ್ರಿ ನೀರಾಯಿಸಲು ಹೋಗಿ ಬೋರ್ವೆಲ್ ನೀರು ಬರದ ಕಾರಣ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ