ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವೇತನ ಪರಿಷ್ಕರಣೆ ….!

ಬೆಂಗಳೂರು:

    ಸಾರ್ವಜನಿಕ ಸಾರಿಗೆ ಬಸ್ ದರ ಏರಿಕೆ ಮಾಡುವ ಪ್ರಸ್ತಾಪ ಮಧ್ಯೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2023ರ ಮಾರ್ಚ್​​ನಲ್ಲಿ ನಿವೃತ್ತಿಯಾದ ನೌಕರರಿಗೆ ಶೇ 15 ರಷ್ಟು ಹೆಚ್ಚುವರಿ ನಿವೃತ್ತಿ ವೇತನ ಇನ್ನು ಮುಂದೆ ಸಿಗಲಿದೆ.

   2023 ರ ಮಾರ್ಚ್​​ನಲ್ಲಿ ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 2019 ರ ಡಿಸೆಂಬರ್ 31 ರಂದು ಅವರು ಪಡೆಯುತ್ತಿದ್ದ ಮೂಲವೇತನ ಪರಿಗಣಿಸಿ ಶೇಕಡಾ 15 ರಷ್ಟು ಹೆಚ್ಚಿಸಿ ವೇತನ ಶ್ರೇಣಿ ಪರಿಷ್ಕರಿಸಲು ಆದೇಶ ಹೊರಡಿಸಲಾಗಿದೆ.

    ನಿವೃತ್ತಿಯಾದ ನೌಕರರಿಗೆ ವೇತನ ಪರಿಷ್ಕರಣೆಯ ಹೆಚ್ಚಿಸಿದ ಹಣ ನೀಡಲು ನಾಲ್ಕು ಸಾರಿಗೆ ನಿಗಮಗಳಿಗೆ ಅಂದಾಜು 220 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

    2023 ರ ಮಾರ್ಚ್ 1 ರಂದು ಸಂಸ್ಥೆಯ ಸೇವೆಯಲ್ಲಿದ್ದ ಅಧಿಕಾರಿ ನೌಕರರಿಗೆ 2020ರ ಜನವರಿ 1 ರಿಂದ 2023ರ ಫೆಬ್ರವರಿ 28ರ ಅವಧಿಯನ್ನು ನೋಷನಲ್ ಆಗಿ ಪರಿಗಣಿಸಿ ವೇತನ ನಿಗದಿಪಡಿಬೇಕು. ಈ ವರ್ಷದ ಕೊನೆಯಲ್ಲಿ ನಿವೃತ್ತಿ ನೌಕರರಿಗೆ ವೇತನ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap