ಸ್ಪಿಂಕ್ಲರ್ ಸಲಕರಣೆ ಆಂಧ್ರಕ್ಕೆ ಮಾರಾಟ : ಆರೋಪ

ಪಾವಗಡ:

ತುಂತುರು ನೀರಾವರಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಏಜೆನ್ಸಿಯು ರೈತರನ್ನು ವಂಚಿಸಿ ಆಂಧ್ರÀ್ರದವರಿಗೆ ಮಾರಾಟ ಮಾಡಿರುವುದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿಯ ವೈಫÀಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಶನಿವಾರ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ನಿಡಗಲ್ ಹಾಗೂ ನಾಗಲಮಡಿಕೆ ಮತ್ತು ಕಸಬಾದಲ್ಲಿ ತುಂತುರು ನೀರಾವರಿಗಾಗಿ ಹಲವು ರೈತರು ಅರ್ಜಿ ಸಲ್ಲಿಸಿದ್ದರು. ಮೂರು ಹೋಬಳಿಗಳ ಹಲವು ರೈತರು ಅರ್ಜಿ ಸಲ್ಲಿಸಿ ವರ್ಷವೇ ಕಳೆದರೂ ಇಂದಿಗೂ ಹಣ ಕಟ್ಟಿಸಿಕೊಂಡ ಎಜೆನ್ಸಿಗಳು ಸೌಲಭ್ಯ ವಿತರಣೆ ಮಾಡಿಲ್ಲ.

ಈ ಬಗ್ಗೆ ಹಲವು ರೈತರು ನಾಗಲಮಡಿಕೆ ಹೋಬಳಿಯ ಕೃಷಿ ಅಧಿಕಾರಿ ಷಂಶುದ್ದ್ ಉನ್ನಿಸಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ರೈತರಿಗೆ ಸಮರ್ಪಕ ಉತ್ತರ ನೀಡದ ಕಾರಣ ರೈತರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಭಾರಿ ಗದ್ದಲವನ್ನು ಮಾಡಿದರು.

ತಾಲ್ಲೂಕಿನಲ್ಲಿ ಹಲವು ಏಜೆನ್ಸಿಗಳು ತುಂತುರು ನೀರಾವರಿ ಪದ್ದತಿ ಹಾಗೂ ಹನಿ ನೀರಾವರಿ ಪದ್ದತಿಯಲ್ಲಿ ರೈತರನ್ನು ಸತತವಾಗಿ ವಂಚಿಸಿವೆ. ಉಪಕರಣಗಳನ್ನು ಫಲಾನುಭವಿ ರೈತರಿಗೆ ವಿತರಣೆ ಮಾಡುವ ಸಮಯದಲ್ಲಿ ಜಿಪಿಎಸ್ ಮಾಡಿ, ಪರಿಕರಣಗಳನ್ನು ರೈತರಿಗೆ ವಿತರಣೆ ಮಾಡದೆ ವಂಚಿಸಿರುವ ಹಿನ್ನೆಲೆಯಲ್ಲಿ, ಬ್ಯಾಡನೂರು ಗ್ರಾಮದ ರೈತರಾದ ನಾಗರಾಜಪ್ಪ ಹಾಗೂ ಚನ್ನರಾಯಪ್ಪ ಕೃಷಿ ಇಲಾಖಾ ಕಛೇರಿಗೆ ಆಗಮಿಸಿ ಅಧಿಕಾರಿಗಳನ್ನು ್ನ ತೀವ್ರ ತರಾಟೆಗೆ ತೆಗೆದುಕೊಂಡರು.

ಕೃಷಿ ಇಲಾಖೆಯ ಅಕ್ರಮಗಳ ಬಗ್ಗೆ ಧ್ವÀ್ವನಿ ಎತ್ತುವ ರೈತರಿಗೆ ವರ್ಷಗಳೆ ಕಳೆದರೂ ಸೌಲಭ್ಯ ವಿತರಣೆ ಮಾಡುವುದಿಲ್ಲ. ರೈತ ಸಂಪರ್ಕ ಕೇಂದ್ರಕ್ಕೆ ಎಷ್ಟು ಬಾರಿ ಅಲೆದರೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ತಾಲ್ಲೂಕು ಕೇಂದ್ರ ಬಿಟ್ಟು ಬರುವುದಿಲ್ಲ.

ಇವರನ್ನು ಹುಡುಕಿಕೊಂಡು ತಾಲ್ಲೂಕು ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆ ತಾಲ್ಲೂಕಿನ ರೈತರಿಗೆ ಎದುರಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ, ತಕ್ಷಣವೇ ಇಂತಹ ರೈತರು ಕರೆ ಮಾಡಿದ್ದರು ಎಂದು ಹೇಳಲಾಗುತ್ತದೆ.

ಇದೇ ಕಾರಣದಿಂದಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳ ಶಾಮೀಲಿನಿಂದ ಗಡಿನಾಡಿನ ರೈತರಿಗೆ ಸಕಾಲದಲ್ಲಿ ಯಾವುದೇ ಸೌಲಭ್ಯ ಪಡೆಯಲು ಸಾದ್ಯವಾಗುತ್ತಿಲ್ಲ ಎಂದು ರೈತರು ಕಸಬಾ ರೈತ ಸಂಪರ್ಕ ಕೇಂದ್ರದ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ತಾವು ಪಾವತಿಸಿರುವ ಹಣವನ್ನು ಹಿಂದಿರುಗಿಸುವಂತೆ ಸಹ ಒತ್ತಾಯ ಮಾಡಿದ್ದಾರೆ.

ರೈತರು ದೂರಿದಂತೆ ನಾವು ಆಂಧ್ರÀ್ರದವರಿಗೆ ಮಾರಾಟ ಮಾಡಿರುವುದು ಸುಳ್ಳು. ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಸೌಲಭ್ಯ ವಿತರಣೆ ಮಾಡಲಾಗುತ್ತದೆ. ಬೇರೆ ರೈತರನ್ನು ಕರೆತಂದು ಸೌಲಭ್ಯ ವಿತರಿಸಿ ಎಂದರೆ ವಿತರಣೆ ಮಾಡಲಾಗದು. ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಸ್ಪಿಂಕ್ಲರ್ ಪೈಪು ವಿತರಣೆ ಮಾಡಲಾಗುತ್ತದೆ.

-ವಿಜಯಮೂರ್ತಿ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ, ಪಾವಗಡ.

  ಏಜೆನ್ಸಿಗಳಿಗೆ ಹಣ ಕಟ್ಟಿ ಎರಡು ವರ್ಷ ಕಳೆದಿದೆ. ಇಂದಿಗೂ ಸೌಲಭ್ಯ ವಿತರಣೆ ಮಾಡುತ್ತಿಲ್ಲ. ನಾಗಲಮಡಿಕೆ ಕೃಷಿ ಅಧಿಕಾರಿ ಪಾವಗಡದಲ್ಲೇ ಕಾಲಹರಣ ಮಾಡುತ್ತಾರೆ. ತಾಲ್ಲೂಕು ಸಹಾಯಕ ನಿರ್ದೇಶಕಿ ರೈರಿಗೆ ಸೌಲಭ್ಯ ವಿತರಿಸುವಲ್ಲಿ ವಿಫಲವಾಗಿದ್ದಾರೆ. ನಮ್ಮ ಹಣವಾದರು ವಾಪಸ್ಸು ನೀಡಲಿ, ಇಲ್ಲದೆ ಹೋದರೆ ಇಲಾಖೆಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ.

-ಓಂಕಾರ್ ರೈತ, ನಾಗಲಮಡಿಕೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap