ಹೈದ್ರಾಬಾದ್:
ಸಮಂತಾ ಹಾಗೂ ನಾಗಚೈತನ್ಯ ಪರಸ್ಪರ ವೃತ್ತಿಯಲ್ಲಿ ಬ್ಯುಸಿಯಾದರು. ಇವರಿಬ್ಬರು ಬೇರ್ಪಟ್ಟ ನಂತರ ನಾಗ ಚೈತನ್ಯ ನಾಯಕಿ ಸೋಭಿತಾ ಧೂಳಿಪಾಳ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಸಮಂತಾ ರಾಜ್ ನಿಡುಮೋರು ಎಂಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಇತ್ತೀಚೆಗಷ್ಟೇ ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ವದಂತಿಗಳನ್ನು ನಿಜ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈಗ ಸಮಂತಾ ವದಂತಿಯೂ ನಿಜವಾಗಬಹುದು ಎನ್ನಲಾಗುತ್ತಿದೆ. ಆದರೆ ಈ ಕುರಿತಾಗಿ ನಟಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ರಾಜ್, ಡಿಕೆ ಫ್ಯಾಮಿಲಿ ಮ್ಯಾನ್ ಸರಣಿಯೊಂದಿಗೆ ಸಮಂತಾ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದರು. ಇಬ್ಬರೂ ನಿರ್ದೇಶಕರು ಮತ್ತು ನಿರ್ಮಾಪಕರಾಗಿ ಅನೇಕ ಚಲನಚಿತ್ರಗಳು ಮತ್ತು ಸರಣಿಗಳನ್ನು ನಿರ್ಮಿಸುತ್ತಿದ್ದಾರೆ. ಇವರಲ್ಲಿ ರಾಜ್ ನಿಡುಮೋರೆ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಫ್ಯಾಮಿಲಿ ಮ್ಯಾನ್ 2 ಅಲ್ಲಿ ಭೇಟಿಯಾದರು ಮತ್ತು ನಂತರ ಸಿಟಾಡೆಲ್ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಸಮಯದಲ್ಲಿ ರಾಜ್ ಮತ್ತು ಸಮಂತಾ ನಡುವೆ ಉತ್ತಮ ಸ್ನೇಹ ಬೆಳೆಯಿತು. ಇದೀಗ ಇಬ್ಬರೂ ಡೇಟಿಂಗ್ ಮತ್ತು ಲವ್ ನಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ವೈರಲ್ ಆಗಿದೆ.
ಈ ಹಿಂದೆ ಇಬ್ಬರೂ ಒಟ್ಟಿಗೆ ಇರುವ ಹಲವು ಫೋಟೋಗಳು ವೈರಲ್ ಆಗಿದ್ದವು. ರಾಜ್ ಕೂಡ ಸಮಂತಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈಗ ಸಮಂತಾ ಮತ್ತು ರಾಜ್ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಸುದ್ದಿಗಳು ಬರುತ್ತಿವೆ. ಶೀಘ್ರದಲ್ಲೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ನಾಗ ಚೈತನ್ಯ – ಶೋಭಿತಾ ಎಂಗೇಜ್ ಮೆಂಟ್ ಜೋಡಿ ಹೊರ ಬಂದ ಮೇಲೆ ಟಾಕ್ ಆಫ್ ದಿ ಟೌನ್ ಆಯಿತು. ಈ ಬಗ್ಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಆದರೆ ಈ ಬಾಲಿವುಡ್ ಅಂಗಳದಲ್ಲಿ ಹಬ್ಬಿದೆ. ಈ ಕುರಿತಾಗಿ ಸಮಂತಾ ಹಾಗೂ ರಾಜ್ ಸ್ಪಷ್ಟನೆ ನೀಡ ಬೇಕಾಗಿದೆ.