ಫಿಲ್ಟರ್‌ ಉಪಯೋಗಿಸಿದ್ದಕ್ಕೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ….?

ತೆಲಂಗಾಣ: 

      ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಹೇಳಿದ್ದ ಸಮಂತಾ ಅವರು ಈ ವೇಳೆ ಅಭಿಮಾನಿಯೊಬ್ಬ ತ್ವಚೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಮಂತಾ ಓಪನ್ ಆಗಿ ಉತ್ತರ ಕೊಟ್ಟಿದ್ದಾರೆ. ಸ್ಟಿರಾಯ್ಡ್ ತಗೊಂಡು ತನ್ನ ಮುಖ ಹೀಗಾಯ್ತು ಎಂದು ಹೇಳಿಕೊಂಡಿದ್ದಾರೆ.

    ಫೋಟೋದಲ್ಲಿ ಕಾಣಿಸುವ ತನ್ನ ಫಳಫಳ ಹೊಳೆಯುವ ಕಾಂತಿಯುಕ್ತವಾದ ಚರ್ಮ ನಿಜವಲ್ಲ ಎಂದು ಸಮಂತ ಪ್ರಭು ಹೇಳಿದ್ದಾರೆ. ಮಯೋಸಿಟಿಸ್‌ ಚಿಕಿತ್ಸೆಯ ಸಂದರ್ಭದಲ್ಲಿಸ್ಟಿರಾಯ್ಡ್ ತೆಗೆದುಕೊಂಡ ಪರಿಣಾಮ ತನ್ನ ಚರ್ಮದ ಕಾಂತಿ  ಹಾಳಾಯ್ತು ಎಂದೂ ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

     ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದಾಗ “ಫಳ ಫಳ ಹೊಳೆಯುವ ಚರ್ಮದ ಕುರಿತು” ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದರು. ಇಷ್ಟೊಂದು ಕೋಮಲ ಚರ್ಮದ ರಹಸ್ಯವೇನು ಎಂದು ಅಭಿಮಾನಿ ಕೇಳಿದ್ದಾರೆ. “ಇಲ್ಲ ಗೆಳೆಯ, ಇದು ನಿಜವಲ್ಲ, ಇದು ಫೋಟೋ ಫಿಲ್ಟರ್‌ ಬಳಸಿರುವುದರಿಂದ ನಯವಾಗಿ ಕಾಣಿಸುತ್ತಿದೆ” ಎಂದು ಅವರು ಪ್ರಾಮಾಣಿಕವಾಗಿ ಉತ್ತರಿಸಿದ್ದರು.

    ವೈದ್ಯರು ಆಗಿರುವ ಚಿನ್ಮಯಿ ಶ್ರೀಪಾದ ಅವರು ಇದನ್ನು ಸರಿಪಡಿಸಬೇಕಿದೆ. ವೈದ್ಯರಾಗಿರುವ ಅವರು ನನ್ನ ಚರ್ಮವನ್ನು ಮೊದಲಿನಂತೆ ಮಾಡುವುದಾಗಿ ತಿಳಿಸಿದ್ದಾರೆ. ನಾನು ಸಾಕಷ್ಟು ಸ್ಟಿರಾಯ್ಡ್‌ ತೆಗೆದುಕೊಂಡಿರುವುದರಿಂದ ಹೀಗಾಗಿದೆ. ನೀವು ನೋಡುತ್ತಿರುವ ಕ್ಲಿಯರ್‌ ಚರ್ಮವು ಫಿಲ್ಟರ್‌” ಎಂದು ಅವರು ಹೇಳಿದ್ದಾರೆ.
   ಅಭಿಮಾನಿಗಳ ಜತೆ ಚಿಟ್‌ಚಾಟ್‌ನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. “ನೀವು ಬದುಕು ವಿಷಯಗಳಲ್ಲಿ ಪ್ರಮುಖವಾದ ಮೂರು ವಿಷಯಗಳು ಯಾವುವು?ʼ ಇತ್ಯಾದಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಅವರು ತಿಣುಕಾಡಿದ್ದಾರೆ. “ನಾನು ತುಂಬಾ ತಾಳ್ಮೆಯನ್ನು ಹೊಂದಿದ್ದೇನೆ.
 
    ನನ್ನ ವಿಲ್‌ ಪವರ್‌ನಿಂದಾಗಿ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು” ಎಂದು ಅವರು ಹೇಳಿದ್ದಾರೆ. ನಾನು ಯಾವುದೇ ತೊಂದರೆಯಿಂದ ಹೊರ ಬರಲು ಬಯಸುವೆ, ನನಗೆ ಅನಗತ್ಯವಾದ ವಿಷಯಗಳ ಕುರಿತು ಪ್ರಶ್ನಿಸಲಾರೆ. ಏನಾಗಲಿ ಮುಂದೆ ಸಾಗುವೆ ಎಂದು ಅವರು ಹೇಳಿದ್ದಾರೆ.
    ಟಾಲಿವುಡ್ ಬೇಬಿ ಸಮಂತಾ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಆರೋಗ್ಯ ತಪಾಪಣೆಗಾಗಿ ಸಿನಿಮಾದಿಂದ ದೂರವೇ ಉಳಿದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap