ಶಿರಸಿ:
ಇತ್ತೀಚಿಗೆ ನಡೆದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಾಲ್ಕಣಿ ಶ್ರೀ ಲಕ್ಷ್ಮೀ ನರಸಿಂಹ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು “ಸಮಗ್ರ ವೀರಾಗ್ರಣಿ” ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದೇ ಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿಯಾದ ಸಂಜಯ ಮಂಜುನಾಥ ಮುಕ್ರಿ ಈತನು ಉದ್ದ ಜಿಗಿತ, ತ್ರಿವಿಧ ಜಿಗಿತ ಹಾಗೂ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಬಾಲಕರ ವಿಭಾಗದ ವೈಯುಕ್ತಿಕ “ವೀರಾಗ್ರಣಿ ಪ್ರಶಸ್ತಿ”ಯನ್ನು ಗೆದ್ದುಕೊಂಡಿದ್ದಾನೆ. ಹಾಗೂ ನಮ್ಮ ಪ್ರೌಢಶಾಲೆಯ ವೈಯಕ್ತಿಕ ಸ್ಪರ್ಧಿಗಳ ಪದಕಗಳ ಪಟ್ಟಿಯಲ್ಲಿ 21 ಸ್ಥಾನಗಳು ಪ್ರಥಮ, 17 ದ್ವಿತೀಯ, ಹಾಗೂ ಮೂರು ತೃತೀಯ. ಗುಂಪು ಸ್ಪರ್ಧೆಗಳಲ್ಲಿ ಎರಡು ಪ್ರಥಮ, 6 ದ್ವಿತೀಯ.








