ಹಾಸನ ಸಂಸದರ ವಿರುದ್ಧ ಆಯೋಗಕ್ಕೆ ದೂರು ….!

ಹಾಸನ

   ​ ಸಂಸದ ಶ್ರೇಯಸ್​ ಪಟೇಲ್ ​ ಅವರ ಆಯ್ಕೆ ಅಸಿಂಧು ಕೋರಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ  ಚುನಾವಣಾ ಆಯೋಗಕ್ಕೆ  ಪತ್ರ ಬರೆದಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದ ಶ್ರೇಯಸ್​ ಪಟೇಲ್ ಅವರು​ ಆಸ್ತಿ ವಿವರ ಬಹಿರಂಗಪಡಿಸಿಲ್ಲ. ಅಲ್ಲದೇ, ಪ್ರಚಾರದ ವೇಳೆ ಮಾಡಲಾದ ಖರ್ಚುವೆಚ್ಚದ ಮಾಹಿತಿಯನ್ನು ಚುನಾವಣಾ ಅಧಿಕಾರಿ ಜೊತೆ ಶಾಮೀಲಾಗಿ ಮುಚ್ಚಿಡಲಾಗಿದೆ ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ.

   ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆಗೂ ಕೂಡ ತಪ್ಪು ಮಾಹಿತಿ ನೀಡಿದ್ದಾರೆ. ತಪ್ಪು ಮಾಹಿತಿ ನೀಡುವುದು ಚುನಾವಣಾ ಅಕ್ರಮವಾಗಿದೆ. ಶ್ರೇಯಸ್​ ಪಟೇಲ್​ ಆಯ್ಕೆ ಅಸಿಂಧು ಕೋರಿ ನನ್ನ ಪುತ್ರನಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡಸಿದ್ದೇನೆ. ಯಾವುದೇ ಆಮಿಷಕ್ಕೆ ಬಲಿಯಾಗಬಾರದೆಂದು ಹೀಗೆ ಮಾಡಿದ್ದೇನೆ. 3-4 ತಿಂಗಳಲ್ಲಿ ಶ್ರೇಯಸ್ ಪಟೇಲ್​ ಅನರ್ಹರಾಗುತ್ತಾರೆ. ಶ್ರೇಯಸ್​ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂಬ ವಿಶ್ವಾಸವಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ಬಿಡುಗಡೆ ಮಾಡಿ ಲಾಭ ಪಡೆದುಕೊಂಡಿದ್ದಾರೆ. ಈ ಬಗ್ಗೆಯೂ ಕೂಡ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದರು.

   ಜನರ ಸಿಂಪತಿಗಾಗಿ ಭಾರಿ ಬೆಲೆಬಾಳುವ ಆಸ್ತಿಯನ್ನು ಕಡಿಮೆ ಬೆಲೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಚುನಾವಣಾ ಖರ್ಚುವೆಚ್ಚದ ಬಗ್ಗೆ ಕೂಡ ತಪ್ಪಾಗಿ ಮಾಹಿತಿ ನೀಡಿದ್ದಾರೆ. ಚುನಾವಣಗೆ ಹೆಚ್ಚವರಿಯಾಗಿ 21 ಲಕ್ಷ ಖರ್ಚು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿಲ್ಲ. ಅಂದಿನ‌ ಚುನಾವಣಾ ಅಧಿಕಾರಿ ಜೊತೆ ಶಾಮೀಲಾಗಿ ಖರ್ಚುವೆಚ್ಚವನ್ನ ಮುಚ್ಚಿಡಲಾಗಿದೆ ಎಂದು ಆರೋಪಿಸಿದರು.

   ಆಸ್ತಿ ವಿವರದ ಬಗ್ಗೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಹಾಸನ ಸಂಸದ ಶ್ರೇಯಸ್ ಪಟೇಲ್ ಆಯ್ಕೆ ಅಸಿಂಧು ಕೋರಿ ವಕೀಲ ದೇವರಾಜೇಗೌಡ ಪುತ್ರ ಡಿ.ಚರಣ್ ಅವರು ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್​ ವಿಚಾರಣೆ ನಡೆಸಿದ್ದು, ಈ ಸಂಬಂಧ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್​ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.

 

Recent Articles

spot_img

Related Stories

Share via
Copy link