ನವದೆಹಲಿ :
ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ಒಗ್ಗೂಡಿಸಲಾಗಿದ್ದು “ಸಂಸದ್ ಟಿವಿ” ಹೆಸರಿನ ನೂತನ ವಾಹಿನಿ ಉದಯಿಸಿದೆ.
ನೂತನ ವಾಹಿನಿಯ ಸಿಇಒ ಆಗಿ ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಒಂದು ವರ್ಷದ ಅವಧಿಗೆ ನೇಮಕವಾಗಿದ್ದು, ಈ ವಾಹಿನಿಯಲ್ಲಿ ಲೋಕಸಭೆ ಕಲಾಪಗಳು ಹಿಂದಿಯಲ್ಲಿಯೂ ರಾಜ್ಯಸಭೆ ಕಲಾಪಗಳು ಆಂಗ್ಲ ಭಾಷೆಯಲ್ಲಿಯೂ ಪ್ರಸಾರವಾಗಲಿದೆ.
ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿಗಳನ್ನು ಒಗ್ಗೂಡಿಸುವ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸ್ಪೀಕರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಒಮ್ಮತದಿಂದ ತೀರ್ಮಾನ ತೆಗೆದುಕೊಂಡರು. ಆಡಳಿತಾತ್ಮಕ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದ್ದು ವಿಲೀನದೊಂದಿಗೆ ರಾಜ್ಯಸಭೆ ಟಿವಿ ಸಿಇಒ ಮನೋಜ್ ಕುಮಾರ್ ಪಾಂಡೆ ಅವರನ್ನು ಸ್ಥಾನದಿಂದ ವಿಸರ್ಜಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಅವರ ಎಂಗೇಜ್ ಮೆಂಟ್ ನಿಯಮಾವಳಿಗಳಂತೆ ಅವರಿಗೆ ಒಂದು ತಿಂಗಳ ವೃತ್ತಿಪರ ಶುಲ್ಕಕ್ಕೆ ಸಮನಾದ ಮೊತ್ತವನ್ನು ನೀಡಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ