ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ ಫೋನ್‌

ಬೆಂಗಳೂರು : 

    ಸ್ಯಾಮ್‌ಸಂಗ್‌ ಈಗಾಗಲೇ ತನ್ನ ಫೋನ್‌ಗಳ ಅಪ್‌ಡೇಟ್‌ ಮಾಡುವ ಕಾರ್ಯವನ್ನು ಆರಂಭಿಸಿದೆ. ಟೆಕ್‌ ದೈತ್ಯ ಕಂಪನಿ ಈಗಾಗಲೇ ಗ್ಯಾಲಕ್ಸಿ ಎಸ್‌ 24 ಸೀರಿಸ್‌, ಗ್ಯಾಲಕ್ಸಿ ಎ 35, ಗ್ಯಾಲಕ್ಸಿ ಎ55, ಗ್ಯಾಲಕ್ಸಿ ಎಂ 55, ಗ್ಯಾಲಕ್ಸಿ ಎಂ15 ಬಿಡುಗಡೆ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸ್ಯಾಮ್‌ಸಾಂಗ್‌ ತನ್ನ ಕಂಪನಿ ಮತ್ತೊಂದು ಫೋನ್‌ ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಎಂ35 ಎಂದು ಹೆಸರನ್ನು ಇಡಲಾಗಿದೆ.

    ಸ್ಯಾಮ್‌ಸಂಗ್ ಫೋನ್ ಕುರಿತು ಕಳೆದ ಹಲವು ತಿಂಗಳುಗಳಿಂದ ಭಾರತದಲ್ಲಿ ಮತ್ತು ಭಾರತದ ಹೊರಗೆ ಚರ್ಚೆ ನಡೆಯುತ್ತಿದೆ. ಈಗ ಈ ಫೋನ್‌ನ ಕೆಲವು ವಿವರಗಳು ಸಹ ಹೊರಬರಲು ಪ್ರಾರಂಭಿಸಿವೆ. ಗೀಕ್‌ಬೆಂಚ್ ವೆಬ್‌ಸೈಟ್ ನಲ್ಲಿ ಪಟ್ಟಿಯು ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ ಮತ್ತು ಸ್ಮಾರ್ಟ್‌ಫೋನ್‌ನ ಕೆಲವು ಅಗತ್ಯ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ.

    ಈ ಫೋನ್ ಅನ್ನು ಬ್ಲೂಟೂತ್ SIG ಡೇಟಾಬೇಸ್‌ನಲ್ಲಿ ಮಾಡೆಲ್ ಸಂಖ್ಯೆ SM-M356B_DS ನೊಂದಿಗೆ ಗುರುತಿಸಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G ಮಾನಿಕರ್‌ನೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತದೆ ಎಂದು ತಿಳಿದು ಬರುತ್ತಿದೆ. ಇದಲ್ಲದೆ, ಈ ಸ್ಯಾಮ್‌ಸಂಗ್ ಫೋನ್‌ನಲ್ಲಿ ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಅನ್ನು ಬೆಂಬಲಿಸುತ್ತದೆ ಎಂದು ಈ ಪಟ್ಟಿಯ ಮೂಲಕ ದೃಢಪಡಿಸಲಾಗಿದೆ. ಆದರೆ ಈ ಫೋನ್ ಅನ್ನು ಇತ್ತೀಚೆಗೆ ಸ್ಯಾಮ್‌ಸಂಗ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಕಂಡು ಬಂದಿದೆ. ಕಂಪನಿಯು ಈ ಫೋನ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಿ ಕೊಂಡಿದೆ. ಇದರ ಹೊರತಾಗಿ, Samsung Galaxy M35 ಸಹ BIS ಪ್ರಮಾಣೀಕರಣದಲ್ಲೂ ಕಂಡು ಬಂದಿದೆ.

     ಸ್ಯಾಮ್‌ಸಂಗ್ ಫೋನ್ 25W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ USB ಟೈಪ್-ಸಿ ಅಡಾಪ್ಟರ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಡೆಕ್ರಾ ಪ್ರಮಾಣೀಕರಣವು ಈ ಸ್ಯಾಮ್‌ಸಂಗ್ ಫೋನ್ 5,880mAh ಬ್ಯಾಟರಿಯೊಂದಿಗೆ ನೀಡಲಾಗುವುದು ಎಂದು ದೃಢಪಡಿಸಿದೆ. ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಬಹುದು, ಪ್ರೊಸೆಸರ್‌ಗಾಗಿ Samsung Exynos 1380 ಚಿಪ್‌ಸೆಟ್ ಬಳಸಿರುವ ಸಾಧ್ಯತೆ ಇದೆ. ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್‌ ನೀಡಲಾಗಿದೆ. 50+8+5MP ಕ್ಯಾಮೆರಾವನ್ನು ಈ ಮೊಬೈಲ್‌ ಹೊಂದಿರುವ ಸಾಧ್ಯತೆ ಇದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಳಿಗೆ 13MP ಫ್ರಂಟ್ ಕ್ಯಾಮೆರಾ ಹೊಂದಿರಲಿದ್ದು, ಫೋನ್‌ 8ಜಿಬಿ ರ್ಯಾಮ್‌ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸಂಭವವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap