ʼಸಂಗೀತಾʼದಿಂದ ಗ್ರಾಹಕರ ಸೇವೆಯ ಮರು ವ್ಯಾಖ್ಯಾನ

 ಬೆಂಗಳೂರು

   ಸ್ಮಾರ್ಟ್ ಗ್ಯಾಜೆಟ್ಗಳ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಡಿ ಇಟ್ಟಿರುವ ಭಾರತದ ಮುಂಚೂಣಿಯಲ್ಲಿರುವ ಮೊಬೈಲ್ ಮತ್ತು ಸ್ಮಾರ್ಟ್ ಗ್ಯಾಜೆಟ್ಗಳ ಚಿಲ್ಲರೆ ವ್ಯಾಪಾರ (ರಿಟೇಲ್) ಸಮೂಹ ಸಂಗೀತಾ, 30 ನಿಮಿಷಗಳ ಎಕ್ಸ್ಪ್ರೆಸ್ ಡೆಲಿವರಿ ಸೇವೆ ಘೋಷಿಸಿದೆ. ಈ ಹೊಸ ಸೇವೆಯು ದಕ್ಷಿಣ ಭಾರತದ ಎಲ್ಲ ಗ್ರಾಹಕರಿಗೂ (ಕೇರಳ ಹೊರತುಪಡಿಸಿ) ಸ್ಮಾರ್ಟ್ಫೋನ್ ಮತ್ತು ಇತರೇ ಗೃಹೋಪಯೋಗಿ ವಸ್ತುಗಳನ್ನು 30 ನಿಮಿಷದೊಳಗಾಗಿ ತಮ್ಮ ಮನೆ ಬಾಗಿಲಲ್ಲೇ ತಲುಪಿಸುವ ಸೇವೆ ಲಭ್ಯವಾಗಿಸಲಿದೆ.

   ಚಿಲ್ಲರೆ ವ್ಯಾಪಾರದಲ್ಲಿ ದೃಢವಾದ ಹೆಜ್ಜೆಗುರುತು ಮತ್ತು ಅತ್ಯಾಧುನಿಕ ಸರಬರಾಜು ವ್ಯವಸ್ಥೆಯೊಂದಿಗೆ ಸಂಗೀತಾವು ಉದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಸಾಧಾರಣ ವಹಿವಾಟಿನಿಂದ 3,000 ಕೋಟಿ ರೂ ವಹಿವಾಟಿನ ಸಾಧನೆಯೊಂದಿಗೆ ಗಮನಾರ್ಹವಾದ ಸಾಧನೆ ಮಾಡಿರುವ ಸಂಗೀತಾ ಹಣಕಾಸು ವರ್ಷ 2025-26ರಲ್ಲಿ 1,000 ಸ್ಟೋರ್ಸ್ಗಳ ಆರಂಭದ ಗುರಿಯತ್ತ ದಾಪುಗಾಲು ಹಾಕುತ್ತಿದೆ. ಕೇರಳ, ಮಹಾರಾಷ್ಟ್ರ, ಗೋವಾ ಹಾಗೂ ಇತರ ರಾಜ್ಯಗಳಲ್ಲಿ ವಿಸ್ತರಣೆಯೊಂದಿಗೆ ಹೆಜ್ಜೆ ಗುರುತು ಮೂಡಿಸಿರುವ ಸಂಗೀತಾ ಶೀಘ್ರದಲ್ಲೇ 30 ನಿಮಿಷಗಳ ಡೆಲಿವರಿ ಸೇವೆಯನ್ನು ದೇಶದಾದ್ಯಂತ ವಿಸ್ತರಿಸಲಿದೆ.

  ಸುದ್ದಿಗೋಷ್ಟಿಯಲ್ಲಿ ತನ್ನ ವಿನೂತನ ಸೇವೆಯನ್ನು ಘೋಷಿಸಿದ ಸಂಗೀತಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಚಂದ್ರ ಅವರು “ ಈ ಮೊದಲು 47 ನಿಮಿಷಗಳಲ್ಲೇ ಡೆಲಿವರಿ ಮಾಡುವ ಮೂಲಕ ಸಂಗೀತಾವು ಮುಂಚೂಣಿಯಲ್ಲಿದ್ದು, ಇದೀಗ 30 ನಿಮಿಷಗಳಲ್ಲೇ ಸ್ಮಾರ್ಟ್ ಗ್ಯಾಜೆಟ್ಗಳನ್ನು ತಲುಪಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸುತ್ತಿದ್ದೇವೆ.ಆಧುನಿಕ ಗ್ರಾಹಕ ಮೌಲ್ಯಗಳು,ವೇಗ ಮತ್ತು ವಿಶ್ವಾಸಾರ್ಹತೆಯೊಂದಿಗೆ ಮತ್ತು ನೇರ ಖರೀದಿ ಮತ್ತು ತ್ವರಿತ ವಾಣಿಜ್ಯದ ನಡುವಿನ ಅಂತರವನ್ನು ಬೆಸೆಯುವ ಮೂಲಕ ಸರಿಸಾಟಿಯಿಲ್ಲದ ವ್ಯಾಪಾರ ಅನುಭವವನ್ನು ನೀಡುತ್ತಿದ್ದೇವೆ. ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರದಿಂದ ನಂಬಿಗಸ್ಥ ತಂತ್ರಜ್ಞಾನ ಪಾಲುದಾರನಾಗಿ ನಮ್ಮ ಪಯಣದಲ್ಲಿನ ಮಹತ್ತರ ಸಾಧನೆಯನ್ನು ಇದು ಬಿಂಬಿಸುತ್ತದೆ” ಎಂದರು.

   ಸಂಗೀತಾದ ಪಯಣವನ್ನು ಮೊದಲನೆಯ, ವೇಗದ ಮತ್ತು ಭವಿಷ್ಯಸ ಸಿದ್ಧ ವಿಧಾನವೆಂದು ವ್ಯಾಖ್ಯಾನಿಸಲಾಗುತ್ತದೆ. ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಗಳನ್ನು ಹೊರತಾಗಿ, ಬ್ರಾಂಡ್ “ಅಂದು ಮೊದಲಿಗ, ಈಗ ನಾಯಕ” ಎಂಬ ಧ್ಯೇಯದೊಂದಿಗೆ ತನ್ನ ವಿಶಾಲವಾದ ನೇರ ಖರೀದಿಯನ್ನು ತಂತ್ರಜ್ಞಾನದ ಪರಿಣತಿ ಮತ್ತು ಸಾಮರ್ಥ್ಯದೊಂದಿಗೆ ಅಪರಿಮಿತವಾಗಿ ಸಂಯೋಜಿಸುತ್ತದೆ. “ ತ್ವರಿತ ವಾಣಿಜ್ಯವು ಈಗ ನಮ್ಮ ಪ್ರಮುಖ ಗಮನವಾಗಿದೆ. ನೇರ ಖರೀದಿಯ ನಮ್ಮ ಪರಂಪರೆಯನ್ನು ಆಧುನಿಕ ವಾಣಿಜ್ಯದ ತ್ವರಿತ ಮತ್ತು ಅನುಕೂಲತೆಯೊಂದಿಗೆ ಬೆಸೆಯುತ್ತದೆ. ಗ್ರಾಹಕ ಎಲ್ಲೇ ಇರಲಿ-ಅದು ಮೆಟ್ರೋ ಇರಬಹುದು ಇಲ್ಲಾ ಸಣ್ಣ ಪಟ್ಟಣ ಆಗಿರಬಹುದು. ಅವರನ್ನು ಅದೇ ರೀತಿಯ ಅತ್ಯುತ್ತಮ ಗುಣಮಟ್ಟದ ಸೇವೆಗೆ ಲಭ್ಯಗೊಳಿಸುವ ನಮ್ಮ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ”.

    ಕೇವಲ ಚಿಲ್ಲರೆ ವ್ಯವಹಾರದಿಂದ ಸಂಗೀತಾ ತನ್ನ ಗಮನವನ್ನು ಅಪರಿಮಿತವಾದ ಮತ್ತು ಯಾವುದೇ ಚಿಂತೆಯಿಲ್ಲದ ತಂತ್ರಜ್ಞಾನ ಚಾಲಿತ ಗ್ರಾಹಕರ ಅನುಭವದತ್ತ ಬದಲಿಸುತ್ತಿದೆ. ಕಂಪನಿಯ ಪ್ರಮುಖ ಗ್ರಾಹಕ ಕೇಂದ್ರಿತ ಉಪಕ್ರಮಗಳಾದ ಹಾನಿ, ಸ್ಕ್ರೀನ್ ಸುರಕ್ಷತೆಗಳು ಅಕಸ್ಮಾತ್ತಾಗಿ ಬೀಳುವುದಕ್ಕೆ, ಬಿರುಕುಗಳಿಗೆ ಹಾಗೂ ನೀರಿನ ಹಾನಿಯನ್ನೂ ಒಳಗೊಳ್ಳುತ್ತಿದ್ದು ರಿಪೇರಿ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದು ಎಫ್ಐಆರ್ನ ಗೊಂದಲಗಳಿಲ್ಲದೇ ಇನ್ಸೂರೆನ್ಸ್ ಕ್ಲೇಮ್ಗಳನ್ನು ಪಡೆಯಲು ಸಹಕಾರಿಯಾಗಿದೆ. ಖರೀದಿ ನಂತರದ ಬೆಲೆ ಏರಿಳಿತಗಳನ್ನು ತೊಡೆದು ಹಾಕಲು ಸಂಗೀತಾವು ಬೆಲೆ ಸುರಕ್ಷತಾ ಸೇವೆಗಳನ್ನೊದಗಿಸುವುದರ ಮೂಲಕ ಗ್ರಾಹಕರು ಯಾವತ್ತೂ ಉತ್ತಮ ಬೆಲೆಯನ್ನೇ ಪಡೆಯುವುದನ್ನು ಖಾತರಿಪಡಿಸುತ್ತದೆ. ಹೆಚ್ಚುವರಿಯಾಗಿ ʼಅಶ್ಯೂರ್) ಯೋಜನೆಯು ಮಾರಾಟ ನಂತರದ ಸೇವಯನ್ನು ಸರಳಗೊಳಿಸುತ್ತದೆ.

   ಎಕ್ಸ್ಪ್ರೆಸ್ ಡೆಲಿವರಿಯ ಪ್ರಯೋಜನ ಪಡೆದ ಬೆಂಗಳೂರಿನ ಒಬ್ಬ ಟೆಕಿ ಹೇಳುವಂತೆ “ ನಾನು ಸ್ಮಾರ್ಟ್ಫೋನ್ ಮತ್ತು ಇಯರ್ ಬಡ್ಸ್ಗಳನ್ನು ಆರ್ಡರ್ ಮಾಡಿದೆ. ಅದು ಕೇವಲ 25 ನಿಮಿಷಗಳಲ್ಲೇ ನನ್ನ ಮನೆ ಬಾಗಿಲಿಗೆ ಬಂತು. ಇವರ ಮಾರಾಟ ನಂತರದ ಸೇವೆಯು ನನಗೆ ಇನ್ನಷ್ಟು ಖುಷಿ ಕೊಟ್ಟಿತು. ಅಕಸ್ಮಾತ್ತಾಗಿ ನಾನು ಫೋನನ್ನು ಕೆಳಕ್ಕೆ ಬೀಳಿಸಿದೆ. ಇವರ ಹಾನಿ ಸುರಕ್ಷತಾ ಯೋಜನೆಗೆ ಧನ್ಯವಾದಗಳು. ಯಾವುದೇ ಖರ್ಚಿಲ್ಲದೇ ನಾನು ಅದನ್ನು ರಿಪೇರಿ ಮಾಡಿಸಿಕೊಂಡೆ. ನಾನು ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವ ರೀತಿಯನ್ನೇ ಸಂಗೀತಾ ಬದಲಿಸಿತು” .

  ಸಂಗೀತಾದ ಭವಿಷ್ಯವು ತೀವ್ರತೆರನಾದ ವಿಸ್ತರಣೆ, ತಂತ್ರಜ್ಞಾನದ ಪರಿಣತಿ ಹಾಗೂ ಗ್ರಾಹಕ ಕೇಂದ್ರಿತ ನಾವಿನ್ಯತೆ ಚಾಲಿತವಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ, ಕಂಪನಿಯು ಸ್ಮಾರ್ಟ್ ಗೃಹೋಪಕರಣ ವಲಯದಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು, ಗ್ರಾಹಕರ ಅನುಭವವನ್ನು ವೈಯಕ್ತಿಕವಾಗಿಸಲು. ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಲಾಜಿಸ್ಟಿಕ್ಸ್ನೊಂದಿಗೆ ತ್ವರಿತ ವಾಣಿಜ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ದೇಶಿಸಿದೆ.

   “ ಸಂಗೀತಾ 50ನೇ ವರ್ಷಾಚರಣೆ ಸಂಭ್ರಮವನ್ನಾಚರಿಸುವಂತೆ, ನಾವಿನ್ಯತೆಯನ್ನು ಮುಂದುವರೆಸಲು, ತ್ವರಿತ ವಾಣಿಜ್ಯವನ್ನು ಸ್ವೀಕರಿಸಲು, ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ನಮ್ಮ ಹೆಜ್ಜೆ ಗುರುತುಗಳನ್ನು ವಿಸ್ತರಿಸಲು ಹಾಗೂ ಉದ್ಯಮದಲ್ಲಿ ಅರ್ಥಪೂರ್ಣ ಪರಿಣಾಮವನ್ನುಂಟು ಮಾಡಲು ಶ್ರಮಿಸುತ್ತೇವೆ” ಎಂದು ಸುಭಾಷ್ ಚಂದ್ರ ಭರವಸೆ ವ್ಯಕ್ತಮಾಡಿದರು.ಬಲವಾದ ಮಾನವ ಕೇಂದ್ರಿತ-ತಂತ್ರಜ್ಞಾನ ಚಾಲಿತ ವಿಧಾನದೊಂದಿಗೆ 30 ನಿಮಿಷಗಳ ಡೆಲಿವರಿ ಸೇವೆಯು ಕೇವಲ ಅನುಕೂಲವಲ್ಲ- ತ್ವರಿತ ಸೇವೆ, ವಿಶ್ವಾಸಾರ್ಹತೆ ಮತ್ತು ಸಾಟಿಯಿಲ್ಲದ ಗ್ರಾಹಕರ ಅನುಭವಕ್ಕೆ ಸಂಗೀತಾದ ಬದ್ಧತೆಯಾಗಿದೆ

Recent Articles

spot_img

Related Stories

Share via
Copy link