ನವದೆಹಲಿ:
ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತನ್ನ ಆಟದಿಂದ ಮಾತ್ರವಲ್ಲ ಸೌಂದರ್ಯದಿಂದಲೂ ಪ್ರೇಕ್ಷಕರ ಮನ ಸೆಳೆದಿರುವ ಸಾನಿಯಾ, ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್‌ನಿಂದ ವಿಚ್ಛೇದನ ಪಡೆದಿದ್ದು, ದುಬೈನಲ್ಲಿ ತಮ್ಮ ಮಗನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.
ತಮ್ಮ ಮಾಜಿ ಪತಿ ಮಲಿಕ್ ಪಾಕ್ ನಟಿ ಸನಾ ಜಾವೇದ್ರನ್ನು ಮದುವೆ ಆಗಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಸಾನಿಯಾ ಮಿರ್ಜಾ ಯಾವಾಗ ಎರಡನೇ ಮದುವೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಸಾನಿಯಾ ಅವರು ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನು ವರಿಸುತ್ತಾರೆ ಎಂದು ಸುದ್ದಿಯಾಗಿತ್ತು. ಶಮಿ ಕೂಡ ತಮ್ಮ ಪತ್ನಿಗೆ ವಿಚ್ಛೇದನಾ ನೀಡಿದ್ದಾರೆ. ಇಬ್ಬರು ಒಂದೇ ಧರ್ಮದವರಾಗಿರುವುದರಿಂದ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದು ಕೇವಲ ವದಂತಿಯಷ್ಟೇ ಎಂದು ಇಬ್ಬರು ತಾರೆಯರು ಸ್ಪಷ್ಟನೆ ನೀಡಿದ್ದಾರೆ.
ಮದುವೆಯ ವದಂತಿ ನಡುವೆಯೇ ಸಾನಿಯಾ ಮಿರ್ಜಾ ಅವರ ಮಹತ್ವದ ಘೋಷಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಾನಿಯಾ ಅವರು ಟೆನ್ನಿಸ್ ತರಬೇತಿಯ ಬಗ್ಗೆ ಚರ್ಚಿಸಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿಯನ್ನು 2013ರ ಮಾರ್ಚ್ ತಿಂಗಳಲ್ಲಿ ಭಾರತೀಯ ಟೆನ್ನಿಸ್ ಆಟಗಾರರಿಗೆ ಉನ್ನತ ದರ್ಜೆಯ ಟೆನ್ನಿಸ್ ತರಬೇತಿ ನೀಡುವ ಗುರಿಯೊಂದಿಗೆ ಸ್ಥಾಪಿಸಲಾಯಿತು. ಸೆಪ್ಟೆಂಬರ್ 9 ರಿಂದ 13ರವರೆಗೆ ತನ್ನ ಅಕಾಡೆಮಿಯಲ್ಲಿ ಐದು ದಿನಗಳ ತರಬೇತಿ ನಡೆಯಲಿದೆ ಎಂದು ಸಾನಿಯಾ ಮಿರ್ಜಾ ಘೋಷಿಸಿದ್ದಾರೆ.








