ಎಂಎಸ್‌ ಧೋನಿ ಐಪಿಎಲ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯ : ಸಂಜಯ್‌ ಬಾಂಗರ್‌!

ನವದೆಹಲಿ: 

   ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌   ನಾಯಕ ಎಂಎಸ್‌ ಧೋನಿ   ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಈಗ ಸೂಕ್ತ ಸಮಯ ಬಂದಿದೆ ಎಂದು ಟೀಮ್‌ ಇಂಡಿಯಾ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌   ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಎಂಎಸ್‌ ಧೋನಿಯ ಐಪಿಎಲ್‌ ನಿವೃತ್ತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ. ಎಂಎಸ್‌ ಧೋನಿ ಈ ವರ್ಷದ ಅಂತ್ಯದಲ್ಲಿ ತಮ್ಮ ದೇಹದ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ಹೇಳಿದ್ದಾರೆ. ಆದರೆ, ಸಂಜಯ್‌ ಬಾಂಗರ್‌, ತಾನು ಎಂಎಸ್‌ ಧೋನಿಯಾಗಿದ್ದರೆ, ಐಪಿಎಲ್‌ಗೆ ತಕ್ಷಣ ನಿವೃತ್ತಿ ಘೋಷಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

  ಅಂದ ಹಾಗೆ 2025ರ ಐಪಿಎಲ್‌ ಟೂರ್ನಿಯ ಆರಂಭಕ್ಕೂ ಮುನ್ನ ಎಂಎಸ್‌ ಧೋನಿ ಹದಿನೆಂಟನೇ ಆವೃತ್ತಿಯ ಬಳಿಕ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಮಾತನಾಡಿದ್ದ ಎಂಎಸ್‌ ಧೋನಿ, ಈ ಬಗ್ಗೆ ನಿರ್ಧರಿಸಲು ಮುಂದಿನ 8 ತಿಂಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ತಮ್ಮ ನಿವೃತ್ತಿ ನಿರ್ಧಾರವು ತಮ್ಮ ಫಿಟ್‌ನೆಸ್‌ ಅನ್ನು ಅವಲಂಬಿಸಿದೆ ಎಂದು ಹೇಳಿದ್ದರು. ಆ ಮೂಲಕ ಮುಂದಿನ ಆವೃತ್ತಿಯಲ್ಲಿಯೂ ಆಡುವ ಬಗ್ಗೆ ಸುಳಿವು ನೀಡಿದ್ದರು. 

   ಇತ್ತೀಚೆಗೆ ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಸಂಜಯ್‌ ಬಾಂಗರ್‌, ಒಂದು ನಾನು ಎಂಎಸ್‌ ಧೋನಿಯಾಗಿದ್ದರೆ, ತಕ್ಷಣ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದೆ. ತಮ್ಮ ಉಪಸ್ಥಿತಿಯಲ್ಲಿ ತಂಡದ ಪರಿವರ್ತನೆಯನ್ನು ಎಂಎಸ್‌ ಧೋನಿ ಬಯಸಿದರೆ, ಅವರು ನಿವೃತ್ತಿ ಪಡೆಯಲು ಎಂದಿಗೂ ಆಗುವುದಿಲ್ಲ. ತಾವು ಇಲ್ಲದೇ ಇದ್ದರೂ ಚೆನ್ನೈ ಫ್ರಾಂಚೈಸಿ ತಂಡವನ್ನು ಅಭಿವೃದ್ದಿಯನ್ನು ಮಾಡಲಿದೆ ಎಂಬ ಅಂಶವನ್ನು ಎಂಎಸ್‌ ಧೋನಿ ಅರಿತುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

   “ಈ ಎಲ್ಲಾ ಸಂಗತಿಗಳು ಎಂಎಸ್‌ ಧೋನಿಗೆ ಹಿನ್ನಡೆಯನ್ನು ತರುತ್ತದೆ, ಒಂದು ವೇಳೆ ನಾನು ಎಂಎಸ್‌ ಧೋನಿಯಾಗಿದ್ದರೆ ತಕ್ಷಣ ನಿವೃತ್ತಿ ಪಡೆಯುತ್ತಿದ್ದೆ. ತಾನು ಬಯಸಿದ್ದ ಹಂತದಲ್ಲಿ ಕ್ರಿಕೆಟ್‌ ಆಡಿದ್ದೇನೆ. ಈ ವೇಳೆ ಫ್ರಾಂಚೈಸಿಯ ಆಸಕ್ತಿಯನ್ನು ಕೂಡ ನಾನು ಪರಿಗಣಿಸುತ್ತೇನೆ. ಒಂದು ಅವರು ಯೋಜನೆ ಬೇರೆ ರೀತಿ ಇದ್ದರೆ, ನಾನು ಖಂಡಿತವಾಗಿಯೂ ವಿದಾಯ ಹೇಳುತ್ತಿದ್ದೆ,” ಎಂದು ಬಾಂಗರ್‌ ಹೇಳಿದ್ದಾರೆ. 

“ವೇಗವಾಗಿ ಪರಿವರ್ತನೆ ನಡೆಯಲಿದೆ ಎಂದು ನೀವು ಯೋಚನೆ ಮಾಡಿದರೆ, ನಿವೃತ್ತಿ ಪಡೆಯಲು ನಿಮಗೆ ಸೂಕ್ತ ಸಮಯ ಬರುವುದಿಲ್ಲ. ವಾಸ್ತವ ಸಂಗತಿಗಳೊಂದಿಗೆ ನೀವು ಶಾಂತತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ನೀವು ತಂಡವನ್ನು ತೊರೆದರೂ ಫ್ರಾಂಚೈಸಿ ತನ್ನ ಸ್ವಂತ ಯೋಜನೆಗಳ ಮೂಲಕ ಸೂಕ್ತ ಆಟಗಾರರನ್ನು ಬೆಳೆಸಲಿದೆ. ಬಹುಶಃ ಇದು ದೀರ್ಘಾವಧಿ ಸಮಯವನ್ನು ತೆಗೆದುಕೊಳ್ಳಬಹುದು. ನಾನು ಎಂಎಸ್‌ ಧೋನಿ ಸ್ಥಾನದಲ್ಲಿ ತಂಡದಲ್ಲಿದ್ದರೆ, ನಿವೃತ್ತಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆ,” ಎಂದು ಅವರು ತಿಳಿಸಿದ್ದಾರೆ. 

ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಆಡಿದ 13 ಪಂದ್ಯಗಳಿಂದ 196 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಬಹುತೇಕ ಪಂದ್ಯಗಳಲ್ಲಿ 8-9 ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿದ್ದರು. ಇದು ತಂಡದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಿಎಸ್‌ಕೆ ಈ ಸೀಸನ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3ರಲ್ಲಿ ಮಾತ್ರ ಹಾಗೂ ಇನ್ನುಳಿದ 10ರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.

Recent Articles

spot_img

Related Stories

Share via
Copy link