ಮುಂಬೈ:
ಕೇಂದ್ರ ಸರ್ಕಾರದ ಸ್ಥಿರತೆ ಬಗ್ಗೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಅನುಮಾನ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಅವಧಿ ಪೂರ್ಣಗೊಳಿಸುವ ಮುನ್ನಾ ಸಂಭಾವ ಅಡ್ಡಿಗಳ ಭವಿಷ್ಯ ನುಡಿದಿದ್ದಾರೆ.
ವಾಣಿಜ್ಯ ನಗರಿ ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2026ರ ಬಳಿಕ ಸರ್ಕಾರ ಎನ್ ಡಿಎ ಸರ್ಕಾರ ಇರಲ್ಲ, ಮೋದಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಅನಿಸುತ್ತಿದೆ ಎಂದರು. ಕೇಂದ್ರ ಸರ್ಕಾರ ಅಸ್ಥಿರವಾಗಿದ್ದರೆ, ಅದು ಮಹಾರಾಷ್ಟ್ರದ ಮೇಲೂ ಪರಿಣಾಮ ಬೀರಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಮಹಾರಾಷ್ಟ್ರ ಹಾಗೂ ರಾಷ್ಟ್ರದಾದ್ಯಂತ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ನಡುವೆ ರಾವತ್ ನೀಡಿರುವ ಈ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಕೇಂದ್ರದಲ್ಲಿ ಅಸ್ಥಿರತೆಯ ಸಂದರ್ಭದಲ್ಲಿ ರಾಜ್ಯದ ಭವಿಷ್ಯದ ರಾಜಕೀಯ ಕುರಿತ ಚರ್ಚೆಯನ್ನು ಹುಟ್ಟಿಹಾಕಿದೆ.