ಮುಂಬೈ:
ಜೂನ್ 20 ಅನ್ನು ವಿಶ್ವ ದ್ರೋಹಿಗಳ ದಿನ ಎಂದು ಘೋಷಿಸುವಂತೆ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ನಾಯಕ ಸಂಜಯ್ ರಾವತ್ ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಜೂನ್ 20ರಂದು ಶಿವಸೇನೆಯ 40 ಶಾಸಕರು ಶಿವಸೇನೆ ವಿಭಜಿಸಲು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದರು. ಶಿವಸೇನೆ ಈಗ ಎರಡು ಬಣಗಳಾಗಿದೆ.
‘ಜೂನ್ 20ನ್ನು ವಿಶ್ವ ದ್ರೋಹಿಗಳ ದಿನವನ್ನಾಗಿ ಆಚರಿಸುವಂತೆ ಮನವಿಯೊಂದಿಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಸರ್, ನಾನು ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಎಂಬ ಪಕ್ಷವನ್ನು ಪ್ರತಿನಿಧಿಸುತ್ತೇನೆ ಮತ್ತು ಭಾರತದ ಮೇಲ್ಮನೆ ಸಂಸದನಾಗಿದ್ದೇನೆ. ನನ್ನ ಪಕ್ಷ ಶಿವಸೇನೆ(UBT) ಪಶ್ಚಿಮ ಭಾರತದ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದ ಪಕ್ಷವಾಗಿದೆ.
ಇದನ್ನು 1966 ರಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಪ್ರಾರಂಭಿಸಿದರು, ಅವರು ಮುಂಬೈನಲ್ಲಿ ಸ್ಥಳೀಯ ಯುವಕರಿಗಾಗಿ ಹೋರಾಡಿದರು’ ಎಂದು ರಾವತ್ ಅವರು ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರಿಗೆ ಪತ್ರ ಬರೆದಿದ್ದು, ಅದನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.