ಉಡುಪಿ: ಜ.9ರಿಂದ ಶ್ರೀಕೃಷ್ಣ ಮಠ ಸಪ್ತೋತ್ಸವ

ಉಡುಪಿ: 

    ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಮಠದ ವಾರ್ಷಿಕ ಸಪ್ತೋತ್ಸವವು ಜನವರಿ 9ರಿಂದ 15ರವರೆಗೆ ನಡೆಯಲಿದೆ. ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಹ್ವಾನದ ಮೇರೆಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸಂಸದ ಜಾನ್ ಮುಲ್ಹೋಲ್ಯಾಂಡ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

    ಮಕರ ಸಂಕ್ರಮಣದ ಪವಿತ್ರದಂದು 8 ಶತಮಾನಗಳ ಹಿಂದೆ ಜಗದ್ಗುರು ಶ್ರೀಮನ್ಮದ್ವಾಚಾರ್ಯರು ದ್ವಾರಕೆಯಿಂದ ಬಂದ ಶ್ರೀ ಕೃಷ್ಣ ನನ್ನು ಭಕ್ತರಿಗಾಗಿ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು. ಮೆಲ್ಬೋರ್ನ್‌ನಲ್ಲಿರುವ ಶ್ರೀ ಪುತ್ತಿಗೆ ಮಠದ ಶಾಖೆಗೆ ಸರ್ಕಾರದ ಬೆಂಬಲವನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಮುಲ್ಹೋಲ್ಯಾಂಡ್ ಅವರನ್ನು ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯರು ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದರು.

    ಖ್ಯಾತ ವಿದ್ವಾಂಸರು ಮತ್ತು ಶ್ರೀಕೃಷ್ಣನ ಭಕ್ತಗಣ, ಗಣ್ಯರು ಭಾಗವಹಿಸುತ್ತಾರೆ. ಇದೇ ವೇಳೆ ಭಾಗವತ ಪ್ರವಚನಗಳಿಗೆ ಹೆಸರುವಾಸಿಯಾದ ಗೌಡೀಯ ಮಧ್ವ ಮಠದ ಶ್ರೀ ಪುಂಡರೀಕ ಗೋಸ್ವಾಮಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಅವರು ಹೇಳಿದರು.