ಬೆಳಗಾವಿ:
ಮಹತ್ವದ ದಾಖಲೆಯಿರುವ ಪೆನ್‌ಡ್ರೈವ್ ಇದೆ ಎಂದು ಪದೇ ಪದೇ ಹೇಳಿಕೊಳ್ಳುವ ಬದಲು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಅದನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿ, ತನಿಖೆಗೆ ಸಹಕರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮಂಗಳವಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರ ಕುರಿತು ಸಾಕ್ಷಿ ಇದ್ದರೆ, ನಮ್ಮ ಸಿಎಂಗೆ ನೀಡಲಿ. ಸಿಎಂ ಅವರು ಕುಮಾರಸ್ವಾಮಿಯವರಿಗೆ ಬಹಳ ಪರಿಚಯವಿದ್ದವರೇ. ಹೀಗಾಗಿ ಪೆನ್ ಡ್ರೈವ್ ಕುರಿತು ಯಾವುದೇ ಸಾಕ್ಷಿ ಇದ್ದರೆ ನೀಡಲಿ ಎಂದು ಹೇಳಿದರು.
ಸಾಕ್ಷಿ ನೀಡದೇ ತನಿಖೆ ನಡೆಸಿ ಎಂದರೆ ಹೇಗೆ? ಅದೇ ಏನೋ ಅಂತಾರಲ್ಲ. ಕೆರೆಯಲ್ಲಿ ಎಮ್ಮಿ ಮುಳುಗಿಸಿ ವ್ಯಾಪಾರ ಮಾಡಿದ್ದರಂತೆ ಎಂಬಂತೆ ಎಚ್ಡಿಕೆ ಮಾತಿನ ದಾಟಿ ಇದೇ ರೀತಿ ಆಗಿದೆ. ಆದ್ದರಿಂದ ಸಮರ್ಪಕವಾಗಿ ಪ್ರಕರಣದ ತನಿಖೆ ನಡೆಸಲು ಅವರ ಬಳಿರುವ ಸಾಕ್ಷಿಗಳನ್ನು ನೀಡಿದರೆ ಸಂಪೂರ್ಣವಾಗಿ ನಿಸ್ಪಕ್ಷವಾಗಿ ತನಿಖೆ ನಡೆಸಲಾಗುವುದು ಎಂದು ಚಾಟಿ ಬೀಸಿದರು.
ಇದೇ ವೇಳೆ ಪರಮೇಶ್ವರ್ ಭೇಟಿ ಕುರಿು ಮಾತನಾಡಿ, ಭೇಟಿಯಲ್ಲಿ ವಿಶೇಷತೆ ಏನು ಇಲ್ಲ. ಚುನಾವಣೆ ವಿಚಾರವಾಗಿ ಮಾತುಕತೆ ಮಾಡಿದ್ದೇವೆ. ಎಷ್ಟು ಸೀಟ್ ಗೆಲ್ಲುತ್ತೇವೆ ಎಂಬ ಚರ್ಚೆ ಮಾಡಿದ್ದೇವೆ. ಡಿಸಿಎಂ ಬಗ್ಗೆ ಚುನಾವಣೆ ವೇಳೆ ಕೂಗು ಇತ್ತು. ಈಗ ಚುನಾವಣೆ ಮುಗಿದಿದೆ. ಚುನಾವಣೆಗೆ ಅನುಕೂಲ ಆಗಲಿ ಅಂತ ಕೂಗು ಇತ್ತು. ಈಗ ಡಿಸಿಎಂ ಕೂಗು ಇಲ್ಲ. ಸರ್ಕಾರ ಬಿಳಿಸಲು ಸುಮ್ಮನೆ ಹೇಳುತ್ತಾರೆ. ಸರ್ಕಾರ ಏನು ಬಿದ್ದು ಹೋಯ್ತಾ. ಸುಮ್ಮನೆ ಸರ್ಕಾರ ಬಿಳುತ್ತೆ ಅಂತಾರೆ. ಶಾಸಕರ ಅಸಮಧಾನ ಇದ್ದೆ ಇರುತ್ತೆ. ಆಡಳಿತ ಪಕ್ಷ ಅಂದ ಮೇಲೆ ಅಸಮಧಾನ ಸಹಜ ಎಂದರು.