ರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರ: ಸತೀಶ್ ಜಾರಕಿಹೊಳಿ ಹೇಳಿದ್ದೇನು….?

ಬೆಳಗಾವಿ: 

   ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರ ಚರ್ಚೆಯಲ್ಲಿ ಇದೆ. ನಮಗೂ ಅದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಹೋಗಿ ಸಂಪೂರ್ಣ ಮಾಹಿತಿ ಪಡೆಯುವೆ. ಪೂರ್ಣ ಪ್ರಮಾಣದಲ್ಲಿ ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ‌. ಟಿವಿಯಲ್ಲಿ ನೋಡಿದ್ದೇನಷ್ಟೇ. ಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ’ ಎಂದರು.

   ರಾಜ್ಯದಲ್ಲಿ ಫೈನಾನ್ಸ್ ಕಿರುಕುಳ ಆರೋಪಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ ಅವರು, ಸುಮಾರು ಕಡೆ ಕಿರುಕುಳ ಕೊಡುವ ವರದಿಗಳು ಬರುತ್ತಿವೆ. ತೊಂದರೆ ಕೊಟ್ಟರೆ ದೂರು ದಾಖಲು ಮಾಡುವಂತೆ ತಿಳಿಸಿದ್ದೇವೆ. ಫೈನಾನ್ಸ್ ಕಿರುಕುಳದ ಬಗ್ಗೆ ಗೊಂದಲ ಇದೆ, ಸಾಲ‌ ಪಡೆಯೋದು, ಕಿರುಕುಳ ಕೊಡುವುದು ಬೇರೆ ವಿಚಾರ. ಆದರೆ, ಸಬ್ಸಿಡಿ ಹೆಸರಿನಲ್ಲಿ ಸಾವಿರಾರು ಜನರಿಗೆ ಸಾಲ ಕೊಟ್ಟಿದ್ದಾರೆ. ಹಣ ತುಂಬುವ ವಿಚಾರದಲ್ಲಿ ಈಗ ಸಂಘರ್ಷ ಆರಂಭವಾಗಿದೆ. ಈಗಾಗಲೇ ಡಿಸಿ ನೇತೃತ್ವದಲ್ಲಿ ಒಂದು ಸಭೆ ನಡೆಸಿದ್ದೇನೆ. ಎರಡು ತಿಂಗಳ‌ ಸಮಯ ಕೇಳಿದ್ದೇವೆ, ಏನಾದರೂ ಅದಕ್ಕೆ ಪರಿಹಾರ ಹುಡುಕುತ್ತೇವೆ ಎಂದರು.

   ಒಂದು ತಿಂಗಳಲ್ಲಿ ಏನು ಸಾಧ್ಯವೋ ಅದಕ್ಕೆ ಪರಿಹಾರಕ್ಕೆ ಮಾಡುತ್ತೇವೆ. ಶಿರೂರಿನಲ್ಲಿ ಕೂಡ ಮಹಿಳೆ ಆತ್ಮಹತ್ಯೆ ಪ್ರಕರಣ ನಡೆದಿದೆ. ದೂರು ದಾಖಲು ಮಾಡಲು ತಿಳಿಸಿರುವೆ ಎಂದ ಅವರು, ಮಧ್ಯವರ್ತಿಗಳ ಜತೆಗೆ ಫೈನಾನ್ಸ್ ನವರು ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಮಧ್ಯವರ್ತಿಗಳಿಗೆ ಹಣ ಕೊಟ್ಟಿದ್ದಾರೆ‌‌. ಈ ಕುರಿತು ಪೊಲೀಸ್ ತನಿಖೆಗೆ ಸೂಚನೆ ಕೊಟ್ಟಿದ್ದೇನೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ತಾರಿಹಾಳದಲ್ಲಿ‌ ಒಂದು ತಿಂಗಳ ಬಾಣಂತಿಯನ್ನು ಮನೆಯಿಂದ ಹೊರಹಾಕಿ ಮನೆ ಹರಾಜಿಗಿಟ್ಟ ಪ್ರಕರಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಕುಟುಂಬಸ್ಥರು ದೂರು ಕೊಟ್ಟರೆ, ಫೈನಾನ್ಸ್ ನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Recent Articles

spot_img

Related Stories

Share via
Copy link