ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅರ್ಜಂಟ್ ಇಲ್ಲ : ಸತೀಶ್‌ ಜಾರಕಿಹೋಳಿ

ಚಿಕ್ಕೋಡಿ:

    ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅರ್ಜಂಟ್ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಇಡಿ ಅವರು ವಿಚಾರಣೆ ಮಾಡುತ್ತಿದ್ದಾರೆ.

   ಅವರಿಗೆ ಏನೂ ಬೇಕೋ ಅದನ್ನ ತನಿಖೆ ಮಾಡುತ್ತಾರೆ. ಎಲ್ಲ ದಾಖಲೆಗಳು ಸರಕಾರದಲ್ಲಿ ಇರುತ್ತವೆ. ಯಾವ ದಾಖಲೆಗಳು ಎಲ್ಲಿ ಹೋಗಲು ಅವಕಾಶವಿಲ್ಲ ಇನ್ನೂ ಎಚ್ ಡಿ ಕುಮಾರಸ್ವಾಮಿ ಅವರು ಸಚಿವ ಭೈರತಿ ಸುರೇಶ ಅವರು ಕಡತಗಳನ್ನ ನಾಶ ಮಾಡಿದ್ದಾರೆ ಎನ್ನುವದು, ಅವರು ಹೇಳಿದ್ದಾರೆ ಅದೂ ಸಾಬೀತಾಗಬೇಕು, ಅದು ಇಡಿ ತನಿಖೆಯಿಂದ ಗೊತ್ತಾಗುತ್ತೆ. ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅರ್ಜಂಟ್ ಇಲ್ಲ, ಇಡಿ ದಾಳಿಗೂ ಸಿಎಂಗೂ ಸಂಬಂಧವಿಲ್ಲ.

   ಸಿಎಂ ಅವರ ಮೇಲೆ ಇಡಿ ದಾಳಿ ಮಾಡಿಲ್ಲ. ಮುಡಾ ಮೇಲೆ ಇಡಿ ದಾಳಿಯಾಗಿದೆ. ಮುಡಾ ಮೇಲಿನ ತನಿಖೆ ಆಗಬೇಕು ಎನ್ನುವದು ನಮ್ಮದು ವಾದವಿದೆ. ಇಡಿ ದಾಳಿಗೂ ಸಿಎಂ ರಾಜೀನಾಮೆಗೂ ಸಂಬಂಧವಿಲ್ಲ, ಇನ್ನೂ ಈ ವಿಚಾರ ಸಿಬಿಐಗೆ ಹಸ್ತಾಂತರವಾದರೂ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.

  ಸರಕಾರಿ ಕಚೇರಿ ಬಿಟ್ಟು ಮಠವೊಂದರಲ್ಲಿ ಕೆಡಿಪಿ ಸಭೆ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ ಅವರು, ಸ್ಥಳದ ಅಭಾವದಿಂದ ಮಠದಲ್ಲಿ ಸಭೆ ಕರೆಯಲಾಗಿದೆ ಅದರಲ್ಲಿ ವಿಶೇಷವಿಲ್ಲ ಎಂದರು

Recent Articles

spot_img

Related Stories

Share via
Copy link
Powered by Social Snap