ಬೆಂಗಳೂರು :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹುದ್ದೆಗಳನ್ನು ರಿಕ್ತ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣವನ್ನು ಅನುಸರಿಸುವ ಹಾಗೂ ಸ್ವಂತ ಅರ್ಹತೆಯ
ಆಧಾರದ ಮೇಲೆ ನೇಮಕಗೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರನ್ನು ಮುಂಬಡ್ತಿ ಸಂದರ್ಭದಲ್ಲಿ ಪರಿಗಣಿಸುವ ಅಂಶದ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ನೇರ ನೇಮಕಾತಿ ಮತ್ತು ಮುಂಬಡ್ತಿ ಪಾಲಿನ ರಿಕ್ತ ಸ್ಥಾನಗಳನ್ನು ವರ್ಗೀಕರಣ ಮಾಡಿ ಲೆಕ್ಕ ಹಾಕಲು ಬ್ಲಾಕ್ ಅವಧಿಯನ್ನು ಗುರುತಿಸಬೇಕಾಗುತ್ತದೆ. ಅದರನ್ವಯ ವೃಂದ ಹಾಗೂ ನೇಮಕಾತಿ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ,
ನೇರ ನೇಮಕಾತಿ ಮುಖಾಂತರ ನೇಮಕಾತಿಯಾಗುವವರೆಗೆ ಅಥವಾ ವೃಂದ ನೇಮಕಾತಿ ನಿಯಮಗಳು ಮಧ್ಯದ ಅವಧಿಯಲ್ಲಿ ತಿದ್ದುಪಡಿಯಾದಲ್ಲಿ, ತಿದ್ದುಪಡಿಯಾದ ದಿನಾಂಕದವರೆಗೆ ಬ್ಲಾಕ್ ಅವಧಿಯನ್ನು ಗುರುತಿಸಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.
ಅದೇ ರೀತಿ ಸರ್ಕಾರದ ಆದೇಶಗಳನ್ನು ಸುತ್ತೋಲೆಯಲ್ಲಿ ಲಗತ್ತಿಸಲಾಗಿದ್ದು, ಸಂಬಂಧಪಟ್ಟವರು ಆದೇಶಗಳನ್ನು ಮನದಟ್ಟು ಮಾಡಿ ಅದರಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ